ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಈ ವರ್ಷಾದ ಆರಂಭದಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು ಏಷ್ಯಾದಲ್ಲಿ ಪಾಲುದಾರರನ್ನು ಹುಡುಕುತ್ತಿರುವುದಾಗಿ ತಿಳಿಸಿತ್ತು. ಆ ಪಾಲುದಾರನ ಸಹಭಾಗಿತ್ವದಲ್ಲಿ ಕಡಿಮೆ ವೆಚ್ಚದ ಎಂಟ್ರಿ ಲೆವೆಲ್ ಬೈಕುಗಳನ್ನು ತಯಾರಿಸುವುದು ಕಂಪನಿಯ ಯೋಜನೆಯಾಗಿದೆ. ಹೀರೊ ಮೋಟೊಕಾರ್ಪ್ ಸಂಭಾವ್ಯ ಪಾಲುದಾರನಾಗಬಹುದೆಂಬ ವದಂತಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಹಬ್ಬಿದ್ದವು.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಹಾರ್ಲೆ ಡೇವಿಡ್ಸನ್ ಈಗ ಏಷ್ಯಾದ ಪಾಲುದಾರನ ಮಾಹಿತಿಯನ್ನು ಬಹಿರಂಗಪಡಿಸಿದೆ. ಚೀನಾ ಮೂಲದ ಬೈಕ್ ತಯಾರಕ ಕಂಪನಿ ಜಿಂಗ್ ಜಾಂಗ್ ಮೋಟಾರ್‍‍ಸೈಕಲ್, ಕಡಿಮೆ ಬೆಲೆಯ ಎಂಟ್ರಿ ಲೆವೆಲ್ ಬೈಕುಗಳ ತಯಾರಿಕೆಗೆ ಹಾರ್ಲೆ ಡೇವಿಡ್‍‍ಸನ್ ಜೊತೆಗೆ ಕೈಜೋಡಿಸಿದೆ. ಜಿಂಗ್ ಜಾಂಗ್ ಮೋಟಾರ್‍‍ಸೈಕಲ್ ಕಂಪನಿಯು ಬೆನೆಲಿ ಕಂಪನಿಯ ಒಡೆತನ ಹೊಂದಿದೆ. ವೊಲ್ವೋ ಕಾರು ಕಂಪನಿಯ ಮಾಲೀಕರಾದ ಜಿಲಿರವರು ಜಿಂಗ್ ಜಾಂಗ್ ಕಂಪನಿಯಲ್ಲಿ ಹೆಚ್ಚಿನ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಹಾರ್ಲೆ ಡೇವಿಡ್ಸನ್ ಕಂಪನಿಯ ಅಧ್ಯಕ್ಷರು ಹಾಗೂ ಸಿ‍ಇ‍ಒ ಆದ ಮ್ಯಾಟ್ ಲೆವಾಟಿಕ್‍‍ರವರು ಮಾತನಾಡಿ, ಚೀನಾದಲ್ಲಿರುವ ಹೆಚ್ಚಿನ ಜನ ನಮ್ಮ ಕಂಪನಿಯ ಬೈಕುಗಳನ್ನು ಚಲಾಯಿಸುವಂತೆ ಮಾಡುವ ಅವಕಾಶ ನಮಗೆ ಸಿಕ್ಕಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಲಿದ್ದೇವೆ.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಬೈಕುಗಳ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಚೀನಾ ಮಾರುಕಟ್ಟೆಯು ಒಂದಾಗಿದೆ. ನಾವು ನಮ್ಮದೇ ಆದ ಮಾರುಕಟ್ಟೆಯನ್ನು ನಿರ್ಮಿಸಿಕೊಳ್ಳುತ್ತೇವೆ ಎಂದು ತಿಳಿಸಿದರು. ಅಮೇರಿಕಾ ಹಾಗೂ ಚೀನಾ ಕಂಪನಿಗಳ ಸಹಭಾಗಿತ್ವದಲ್ಲಿ ತಯಾರಾಗಲಿರುವ ಈ 338 ಸಿಸಿ ಬೈಕ್ ಅನ್ನು 2020ರ ಕೊನೆಗೆ ಬಿಡುಗಡೆಗೊಳಿಸಲಾಗುವುದು.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಈ ಬೈಕ್ ಅನ್ನು ಮೊದಲಿಗೆ ಚೀನಾದಲ್ಲಿ ಬಿಡುಗಡೆಗೊಳಿಸಿ, ನಂತರ ಭಾರತ, ಆಸ್ಟ್ರೇಲಿಯಾ, ಜಪಾನ್, ಮಲೇಷಿಯಾ, ಫಿಲಿಪೈನ್ಸ್, ವಿಯಟ್ನಾಂ, ಥೈಲ್ಯಾಂಡ್ ಹಾಗೂ ಇಂಡೋನೇಷ್ಯಾಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಹಾರ್ಲೆ ಡೇವಿಡ್ಸನ್ 338 ಸಿಸಿ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಕೆಲವು ವದಂತಿಗಳ ಪ್ರಕಾರ ಈ ಬೈಕ್ ಅನ್ನು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 350 ಎಂದು ಕರೆಯಲಾಗುವುದು. ಈ ಬೈಕ್ ಸ್ಟ್ರೀಟ್ 500 ಹಾಗೂ ಸ್ಟ್ರೀಟ್ 750 ಬೈಕುಗಳ ಕೆಳಗಿನ ಸರಣಿಯಲ್ಲಿರಲಿದ್ದು, ಹಾರ್ಲೆ ಕಂಪನಿಯ ಅಗ್ಗದ ಬೈಕ್ ಆಗಲಿದೆ.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಈ ಬೈಕಿನಲ್ಲಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸುವ ನಿರೀಕ್ಷೆಗಳಿದ್ದು, 30 ಬಿ‍‍ಹೆಚ್‍‍ಪಿ ಪವರ್ ಹಾಗೂ 30 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ. ಈ ಬೈಕ್ ಸ್ಟ್ರೀಟ್ 750 ಬೈಕಿನ ವಿನ್ಯಾಸವನ್ನು ಹೊಂದುವ ಸಾಧ್ಯತೆಗಳಿವೆ. ಈ ಬೈಕ್ ಅನ್ನು ಭಾರತದಲ್ಲಿ ನಿರ್ಮಿಸಲಾಗುವುದು ಎಂಬ ವದಂತಿಗಳಿವೆ.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಕಡಿಮೆ ಸಾಮರ್ಥ್ಯದ ಬೈಕ್ ಬಿಡುಗಡೆ ಮಾಡುವುದನ್ನು ಹಾರ್ಲೆ ಕಂಪನಿಯ ಮಾಲೀಕರು ವಿರೋಧಿಸುತ್ತಿದ್ದಾರೆ. ಆದರೂ ಸಹ ಕಂಪನಿಯು ಮುಂದುವರೆಯಲು ನಿರ್ಧರಿಸಿದೆ. ಸಣ್ಣ ಸಾಮರ್ಥ್ಯದ ಬೈಕ್‍‍ಗಳ ಸೆಗ್‍‍ಮೆಂಟ್ ಹೆಚ್ಚು ಲಾಭದಾಯಕವಾಗಿದ್ದು, ಹಾರ್ಲೆ ಕಂಪನಿಯು ಯಶಸ್ಸನ್ನು ನಿರೀಕ್ಷಿಸುತ್ತಿದೆ.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಏಷ್ಯನ್ ಕಂಪನಿಗಳ ಜೊತೆಯಲ್ಲಿ ಪಾಲುದಾರಿಕೆ ಹೊಂದುವುದು ಈ ಭಾಗದಲ್ಲಿ ಸಾಮಾನ್ಯವಾಗಿದೆ. ಕೆಟಿಎಂ ಮತ್ತು ಬಿಎಂಡಬ್ಲ್ಯು ಕಂಪನಿಗಳು, ಭಾರತೀಯ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿವೆ. ಆಸ್ಟ್ರಿಯನ್ ಮೂಲದ ಬೈಕ್ ತಯಾರಕ ಕೆಟಿಎಂ ಕಂಪನಿಯು ಇದರಲ್ಲಿ ಯಶಸ್ಸನ್ನು ಕಂಡಿದೆ.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಚೀನಾದ ಹೊಸ ಪಾಲುದಾರನ ಜೊತೆಗೆ ಹಾರ್ಲೆ ಕಂಪನಿಯು, ರಾಯಲ್ ಎನ್‌ಫೀಲ್ಡ್ ಹಾಗೂ ಜಾವಾ ಕಂಪನಿಗಳ ಸಹಭಾಗಿತ್ವವನ್ನು ನಿರೀಕ್ಷಿಸುತ್ತಿದೆ. ಜಿಂಗ್‍‍ಜಾಂಗ್ ಮೋಟಾರ್‌ಸೈಕಲ್ ಬೆನೆಲ್ಲಿಯ ಒಡೆತನವನ್ನು ಹೊಂದಿರುವುದರಿಂದ, ಹಾರ್ಲೆ ಡೇವಿಡ್ಸನ್ ಈ ಕಂಪನಿಯ ಮಳಿಗೆಗಳನ್ನು ಮಾರಾಟಕ್ಕಾಗಿ, ಸರ್ವಿಸ್‍‍ಗಳಿಗಾಗಿ ಬಳಸಬಹುದು.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ರಾಯಲ್ ಎನ್‌ಫೀಲ್ಡ್ 300 ಸಿಸಿ -500 ಸಿಸಿ ಸೆಗ್‍‍ಮೆಂಟಿನಲ್ಲಿ ಮುಂಚೂಣಿಯಲ್ಲಿದ್ದು, ಮಾರುಕಟ್ಟೆಯಲ್ಲಿನ 80%ಕ್ಕೂ ಹೆಚ್ಚಿನ ಶೇರುಗಳನ್ನು ಹೊಂದಿದೆ. ಹಾರ್ಲೆ ಕಂಪನಿಯು ಸಹ ಸಣ್ಣ ಸಾಮರ್ಥ್ಯದ ಬೈಕುಗಳಿಂದ ಇದೇ ರೀತಿಯ ಯಶಸ್ಸನ್ನು ಕಾಣಲು ಬಯಸುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, 2022 ರ ವೇಳೆಗೆ ಬಜಾಜ್-ಟ್ರಯಂಫ್ ಸಹಭಾಗಿತ್ವದಲ್ಲಿ ಈ ಸೆಗ್‍‍ಮೆಂಟಿನ ಬೈಕ್‍‍ಗಳನ್ನು ಬಿಡುಗಡೆಗೊಳಿಸಲಿವೆ.

ಹಾರ್ಲೆ-ಜೆಗ್‍‍ಜಾಂಗ್ ಸಹಭಾಗಿತ್ವದಲ್ಲಿ ಬರಲಿವೆ ಸಣ್ಣ ಸಾಮರ್ಥ್ಯದ ಬೈಕುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಾವುದೇ ದ್ವಿಚಕ್ರ ತಯಾರಕರು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ, ಮಾರಾಟದಲ್ಲಿ ಯಶಸ್ಸನ್ನು ಕಾಣಬೇಕಾದರೆ, ಜನಸಾಮಾನ್ಯರನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಬೇಕು. ರಾಯಲ್ ಎನ್‌ಫೀಲ್ಡ್, ಬಜಾಜ್, ಮತ್ತು ಕೆಟಿಎಂ ಈ ನೀತಿಯನ್ನು ಪಾಲಿಸಿದ್ದರಿಂದಲೇ ಯಶಸ್ವಿಯಾಗಿವೆ. ಈ ಕ್ರಮದಿಂದ ಹಾರ್ಲೆ ಕಂಪನಿಯು ಸಹ ದೇಶಿಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲಿದೆಯೇ ಎಂಬುದನ್ನು ಕಾದು ನೋಡೋಣ.

More from DriveSpark

Article Published On: Thursday, June 20, 2019, 19:06 [IST]
English summary
Harley Partners With Zhejiang Qianjiang For Small Capacity Motorcycles - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+