ಕವಾಸಕಿ ಇಂಡಿಯಾದಿಂದ ಭರ್ಜರಿ ಆಫರ್
ಭಾರತದಲ್ಲಿ ಈಗ ಎಲ್ಲೆಲ್ಲೂ ಹಬ್ಬದ ವಾತಾವರಣ. ಈ ಕಾರಣಕ್ಕಾಗಿ ಕಾರು ಹಾಗೂ ದ್ವಿಚಕ್ರ ವಾಹನ ತಯಾರಕರು ಗ್ರಾಹಕರನ್ನು ಸೆಳೆಯಲು ಭಾರೀ ಪ್ರಮಾಣದ ಆಫರ್‍ಗಳನ್ನು ನೀಡುತ್ತಿದ್ದಾರೆ. ಕವಾಸಕಿ ಇಂಡಿಯಾ ಕೂಡ ಈ ಅಕ್ಟೋಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದ ರಿಯಾಯಿತಿಯ ಜೊತೆಗೆ ಹಲವಾರು ಕೊಡುಗೆಗಳನ್ನು ನೀಡುತ್ತಿದೆ.

ಕವಾಸಕಿ ನಿಂಜಾ ಝಡ್‍ಎಕ್ಸ್ 6 ಆರ್ ಬೈಕಿನ ಮೇಲೆ ರೂ.65,500 ಗಳ ರಿಯಾಯಿತಿ ಹಾಗೂ ಸೌಲಭ್ಯಗಳನ್ನು ನೀಡಲಿದೆ. ಇದರ ಜೊತೆಗೆ ನಿಂಜಾ 1000 ಬೈಕಿನ ಮೇಲೆ ರೂ.85,150, ನಿಂಜಾ 650, ನಿಂಜಾ 400, ಝಡ್650, ವಾರ್ಸಿಸ್ ಬೈಕುಗಳ ಮೇಲೆ ರೂ.58,950 ಹಾಗೂ ವಲ್ಕನ್ 650 ಬೈಕಿನ ಮೇಲೆ ರೂ.65,500ರವರೆಗೆ ರಿಯಾಯಿತಿ ನೀಡಲಿದೆ.

ಕವಾಸಕಿ ನೀಡುತ್ತಿರುವ ರಿಯಾಯಿತಿಯ ಜೊತೆಗೆ ಕೆಲವು ಡೀಲರ್‍ಗಳೂ ಸಹ ಹೆಚ್ಚಿನ ರಿಯಾಯಿತಿ, ಕೊಡುಗೆಗಳನ್ನು ನೀಡಲಿದ್ದಾರೆ. ಮುಂಬೈನಲ್ಲಿರುವ ಆಂಜೇನ್ ಕವಾಸಕಿ ಡೀಲರ್ ಹೆಚ್ಚಿನ ಆಫರ್‍ಗಳನ್ನು ನೀಡಲಿದ್ದಾರೆ.

ಆಂಜೇನ್ ಕವಾಸಕಿ ಡೀಲರ್ ಹೊಸ ಕವಾಸಕಿ ಬೈಕುಗಳ ಮೇಲೆ ರೂ.1.71 ಲಕ್ಷಗಳವರೆಗಿನ ರಿಯಾಯಿತಿ ನೀಡಲಿದ್ದಾರೆ. ಈ ಡೀಲರ್ ನಿಂಜಾ 300 ಬೈಕಿನ ಮೇಲೆ ರೂ.28,000 ರಿಯಾಯಿತಿ ನೀಡಿದರೆ, ಝಡ್‍ಎಕ್ಸ್ ಆರ್ ಬೈಕಿನ ಮೇಲೆ ರೂ.65,000 ರಿಯಾಯಿತಿ ನೀಡಲಿದ್ದಾರೆ.

ನಿಂಜಾ 650 ಬೈಕಿನ ಮೇಲೆ ರೂ.1.14 ಲಕ್ಷ, ವಲ್ಕನ್ 650 ಬೈಕಿನ ಮೇಲೆ ರೂ.1.34 ಲಕ್ಷ, ಝಡ್650 ಬೈಕಿನ ಮೇಲೆ ರೂ.1.24 ಲಕ್ಷ, ನಿಂಜಾ 1000 ಬೈಕಿನ ಮೇಲೆ ರೂ.1.71 ಲಕ್ಷ ರಿಯಾಯಿತಿ ನೀಡಲಿದ್ದಾರೆ. ಈ ರಿಯಾಯಿತಿಗಳನ್ನು ಅಕ್ಟೋಬರ್ ತಿಂಗಳಿನ ಕೊಡುಗೆಯಾಗಿ ನೀಡುತ್ತಿದ್ದರೂ, ಕವಾಸಕಿ ಇಂಡಿಯಾ ಕಳೆದ ತಿಂಗಳು ಕವಾಸಕಿ ಬೈಕುಗಳನ್ನು ಖರೀದಿಸಿದವರಿಗೂ ಈ ಕೊಡುಗೆಗಳನ್ನು ನೀಡಲಿದೆ.

ಎಲ್ಲಾ ಕವಾಸಕಿ ಬೈಕುಗಳ ಪೈಕಿ ನಿಂಜಾ 300 ಬೈಕುಗಳಿಗೆ ಭಾರತದಲ್ಲಿ ಹೆಚ್ಚಿನ ಪ್ರಮಾಣದ ಬೇಡಿಕೆಯಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ನಿಂಜಾ 300 ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ನಿಂಜಾ 300 ಬೈಕಿನ ಹೊರತಾಗಿ ಕವಾಸಕಿ ಕಂಪನಿಯು ಉಳಿದ ಬೈಕುಗಳಿಗೂ ಆದ್ಯತೆಯನ್ನು ನೀಡುತ್ತಿದೆ. ಕಾಲಕಾಲಕ್ಕೆ ಅಪ್‍ಡೇಟ್ ಮಾಡುತ್ತಿದೆ.

ಹಬ್ಬದ ಉತ್ಸಾಹವನ್ನು ಹೆಚ್ಚಿಸುವ ಸಲುವಾಗಿ ಕವಾಸಕಿ ನಿಂಜಾ 400 ಬೈಕ್ ಅನ್ನು ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ / ಲೈಮ್ ಗ್ರೀನ್ ಹಾಗೂ ಲೈಮ್ ಗ್ರೀನ್ / ಎಬೊನಿ ಎಂಬ ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸುತ್ತಿದೆ.

ಈ ಎರಡು ಹೊಸ ಬಣ್ಣ ಹೊಂದಿರುವ ಕೇವಲ 10 ಬೈಕುಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಈ ಬೈಕುಗಳಿಗಾಗಿ ಬುಕ್ಕಿಂಗ್‍ಗಳನ್ನು ಆರಂಭಿಸಲಾಗಿದ್ದು, ಈ ತಿಂಗಳಿನಲ್ಲೇ ಬೈಕುಗಳನ್ನು ವಿತರಿಸಲಾಗುವುದು.

ನಿಂಜಾ 400 ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 399 ಸಿಸಿಯ ಪ್ಯಾರಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 10,000 ಆರ್‍ಪಿಎಂನಲ್ಲಿ 48 ಬಿಹೆಚ್‍ಪಿ ಪವರ್ ಹಾಗೂ 8,000 ಆರ್‍ಪಿಎಂನಲ್ಲಿ 38 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡಿನ ಟ್ರಾನ್ಸ್ ಮಿಷನ್ ಹೊಂದಿದೆ.

ನಿಂಜಾ 300 ಬೈಕಿಗೆ ಹೋಲಿಸಿದರೆ ಈ ಬೈಕ್ ಚಿಕ್ಕ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ನಿಂಜಾ 300 ಬೈಕಿನಲ್ಲಿ 17 ಲೀಟರಿನ ಫ್ಯೂಯಲ್ ಟ್ಯಾಂಕ್ ಇದ್ದರೆ, ನಿಂಜಾ 400 ಬೈಕಿನಲ್ಲಿ 14 ಲೀಟರಿನ ಫ್ಯೂಯಲ್ ಟ್ಯಾಂಕ್ ನೀಡಲಾಗಿದೆ.

ಕವಾಸಕಿ ಕಂಪನಿಯು ತನ್ನ 2020ರ ಸರಣಿಯ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬೈಕುಗಳು ಮುಂದಿನ ತಿಂಗಳು ನಡೆಯಲಿರುವ 2019ರ ಇಐಸಿಎಂಎನಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆಗಳಿವೆ. ಈ ಮೇಳದಲ್ಲಿ ಸೂಪರ್‍ಚಾರ್ಜ್ಡ್ ನೇಕೆಡ್ ಸ್ಪೋರ್ಟ್ಸ್ ಬೈಕ್ ಹೆಚ್ಚು ಗಮನ ಸೆಳೆಯಲಿದೆ.

ಝಡ್ ಸರಣಿಯ ಲೊಗೊ ಹೊಂದಿರುವ ಈ ಬೈಕಿನ ಟೀಸರ್ ಅನ್ನು ಈ ತಿಂಗಳ ಆರಂಭದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕ್ 998 ಸಿಸಿಯ ಇನ್‍ಲೈನ್, 4 ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಸೂಪರ್‍ಚಾರ್ಜ್ ಎಂಜಿನ್ ಹೊಂದಿರಲಿದೆ.


Click it and Unblock the Notifications