ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್900 ಸೂಪರ್‍‍ಬೈಕ್

ಕವಾಸಕಿ ಇಂಡಿಯಾ ಹೊಸ ಬಿಎಸ್-6 ಝಡ್‍900 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬಿಎಸ್-6 ಕವಾಸಕಿ ಝಡ್900 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.50 ಲಕ್ಷಗಳಿಂದ ರೂ.9 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್900 ಸೂಪರ್‍‍ಬೈಕ್

ಹೊಸ ಕವಾಸಕಿ ಝಡ್‍900 ಬೈಕ್ 948 ಸಿಸಿ ಇನ್‍-ಲೈನ್ ನಾಲ್ಕು ಲಿಕ್ವಿಡ್ ಕೂಲ್ಡ್ ಬಿಎಸ್-6 ಎಂಜಿನ್ ಹೊಂದಿರಲಿದೆ. ಈ ಎಂಜಿನ್ 9,500 ಆರ್‍‍‍ಪಿಎಂನಲ್ಲಿ 123 ಬಿ‍‍ಹೆಚ್‍‍ಪಿ ಪವರ್ ಮತ್ತು 7,700 ಆರ್‍‍ಪಿಎಂನಲ್ಲಿ 98.4 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್900 ಸೂಪರ್‍‍ಬೈಕ್

ಹೊಸ ಬಿಎಸ್-6 ಕವಾಸಕಿ ಝಡ್900 ಬೈಕ್ ಹಲವಾರು ಹೊಸ ಫೀಚರ್ಸ್‍‍ಗಳನ್ನು ಹೊಂದಿದೆ. ಇದರಲ್ಲಿ ಹೆಡ್‍‍ಲ್ಯಾಂಪ್ ಮತ್ತು ಟೇಲ್‍‍ಲೈ‍‍ಟ್‍, ಎಲ್‍ಇಡಿ ಲೈಟ್‍ಗಳು ಮತ್ತು ಎರಡು ತುದಿಯಲ್ಲಿ ನವೀಕರಿಸಿದ ಸಸ್ಪೆಂಕ್ಷನ್ ಸೆಟ್ಟಿಂಗ್‍‍ಗಳು ಮತ್ತು ರೈಡಿಯಾಲಜಿ ಎಂಬ ಆ್ಯಪ್ ಮೂಲಕ ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ ಹೊಂದಿರುವ ಹೊಸ 4.3 ಇಂಚಿನ ಟಿಎ‍ಫ್‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್900 ಸೂಪರ್‍‍ಬೈಕ್

ಹೊಸ ಕವಾಸಕಿ ಝಡ್900 ಬೈಕ್‍‍ನಲ್ಲಿ ಹೊಸ ಪವರ್ ಮೋಡ್‍ನೊಂದಿಗೆ ಇತರ ರೈಡಿಂಗ್ ಮೋಡ್‍‍ಗಳನ್ನು ನೀಡಲಾಗಿದೆ. ಇದರೊಂದಿಗೆ ಟ್ರಾಕ್ಷನ್ ಕಂಟ್ರೂಲ್, ಸ್ಟ್ರಾಂಗ್ ಫ್ರೇಮ್ ಮತ್ತು ಡನ್‍‍ಲಾಪ್ ಸ್ಪೋರ್ಟ್ಸ್‌ಮ್ಯಾಕ್ಸ್ ರೋಡ್ಸ್‌ಪೋರ್ಟ್ 2 ಟಯರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್900 ಸೂಪರ್‍‍ಬೈಕ್

ಹೊಸ ಕವಾಸಕಿ ಝಡ್900 ಬಿಎಸ್-6 ಬೈಕ್ ಅನ್ನು ಎರಡು ಡ್ಯುಯಲ್ ಟೋನ್ ಬಣ್ಣಗಳನ್ನು ಹೊಂದಿದೆ. ಇದರಲ್ಲಿ ಮೆಟಾಲಿಕ್ ಗ್ರ್ಯಾಫೈಟ್ ಗ್ರೇ ಅಥವಾ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಅಥವಾ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್900 ಸೂಪರ್‍‍ಬೈಕ್

ಹೊಸ ಕವಸಾಕಿ ಝಡ್900 ಬಿಎಸ್-6 ಬೈಕ್ ಇತರ ಬದಲಾವಣೆಗಳನ್ನು ಮಾಡಲಾಗಿಲ್ಲ. ಉಳಿದಂತೆ ಸಸ್ಪೆಂಕ್ಷನ್ ಸೆಟಪ್‍ ಅನ್ನು ಸುಧಾರಿಸಲಾಗಿದ್ದರೂ,ಇನ್ನೂ ಮುಂಭಾಗದಲ್ಲಿ ಅದೇ 41 ಎಂಎಂ ಯು‍ಎಸ್‍‍ಡಿ ಫೋರ್ಕ್‍‍ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್900 ಸೂಪರ್‍‍ಬೈಕ್

ಬ್ರೇಕಿಂಗ್ ಸಿಸ್ಟಂನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 250 ಎಂಎಂ ಪೆಟಲ್ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್900 ಸೂಪರ್‍‍ಬೈಕ್

ಕವಾಸಕಿ ಝಡ್900 ದೇಶದ ಮೊದಲ ಪ್ರೀಮಿಯಂ ಬಿಎಸ್-6 ಸೂಪರ್‍‍ನೇಕಡ್ ಬೈಕ್ ಆಗಿದೆ. ಮುಂದಿನ ವರ್ಷ 2020ರ ಏಪ್ರಿಲ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಈ ಬಿಎಸ್-6 ಮಾಲಿನ್ಯ ನಿ‍ಯಮಕ್ಕೆ ಅನುಗುಣವಾಗಿ ಕವಾಸಕಿ ಕಂಪನಿಯ ಸರಣಿಯಲ್ಲಿರುವ ಇತರ ಬೈಕ್‍‍ಗಳನ್ನು ನವೀಕರಿಸಲು ಪ್ರಾರಂಭಿಸಿದೆ ಎಂದು ನಿರೀಕ್ಷಿಸಬಹುದು.

ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್900 ಸೂಪರ್‍‍ಬೈಕ್

ಕವಾಸಕಿ ಝಡ್900 ಲೀಟರ್-ಕ್ಲಾಸ್ ಸೆಗ್‍‍ಮೆಂಟ್‍‍ನಲ್ಲಿ ಅತ್ಯಂತ ಜನಪ್ರಿಯವಾದ ಸೂಪರ್‍‍ನೇಕ್ಡ್ ಬೈಕ್‍‍ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಕವಾಸಕಿ ಝಡ್900 ಬೈಕ್ ಇತರ 1000 ಸಿಸಿ ನೇಕೆಡ್ ಸೆಗ್‍‍ಮೆಂಟ್‍ ಬೈಕ್‍‍ಗಳಾದ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್, ಕೆಟಿಎಂ 790 ಡ್ಯೂಕ್ ಮತ್ತು ಸುಜುಕಿ ಜಿಎಸ್ಎಕ್ಸ್-ಆರ್ 750 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡಲಿದೆ.

More from DriveSpark

Article Published On: Wednesday, December 25, 2019, 13:38 [IST]
English summary
2020 Kawasaki Z900 BS6 Launched In India At Rs 8.50 Lakh: India’s First Premium BS-VI Motorcycle - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+