10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ ಕೆ‍ಎಸ್‍ಎಲ್

ಕೋಲ್ಕತ್ತಾ ಮೂಲದ ಕೆ‍ಎಸ್‍ಎಲ್ ಕ್ಲೀನ್‍‍ಟೆಕ್ ಲಿಮಿಟೆಡ್ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಯೋಜಿಸಿದೆ. ಕಂಪನಿಯು ಮುಂದಿನ ಒಂದು ವರ್ಷದ ಅವಧಿಯಲ್ಲಿ, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸೆಗ್‍‍ಮೆಂಟಿನಲ್ಲಿ 10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಗೋ ಜೀರೊ ಮೊಬಿಲಿಟಿ ಕಂಪನಿಯು ಎಲೆಕ್ಟ್ರಿಕ್ ಬೈಕುಗಳನ್ನು ಅಭಿವೃದ್ಧಿಪಡಿಸಲು ಹಾಗೂ ತಯಾರಿಸಲು ಕೆ‍ಎಸ್‍ಎಲ್ ಕ್ಲೀನ್‍‍‍ಟೆಕ್ ಲಿಮಿಟೆಡ್‍‍ನ ಜೊತೆಗೆ ಸಹಭಾಗಿತ್ವ ಹೊಂದಲಿದೆ.

10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ ಕೆ‍ಎಸ್‍ಎಲ್

ಗೋ ಜೀರೋ ಕಂಪನಿಯು ನವದೆಹಲಿಯಲ್ಲಿ ಒನ್ ಹಾಗೂ ಮೈಲ್ ಎಂಬ ಹೆಸರಿನ ಎರಡು ಬೈಕುಗಳನ್ನು ಕ್ರಮವಾಗಿ ರೂ.32,999 ಹಾಗೂ ರೂ.29,999 ದರಗಳಲ್ಲಿ ಮಾರಾಟ ಮಾಡುವುದಾಗಿ ತಿಳಿಸಿದೆ.

ಕೆ‍ಎಸ್‍ಎಲ್ ಕ್ಲೀನ್‍‍ಟೆಕ್ ಕಂಪನಿಯು ಸಣ್ಣ ಪ್ರಮಾಣದ ಕಮರ್ಷಿಯಲ್ ಹಾಗೂ ಪ್ಯಾಸೆಂಜರ್ ವಾಹನಗಳನ್ನು ಅಭಿವೃದ್ಧಿಪಡಿಸಲು ಗಮನಹರಿಸುವುದಾಗಿ ತಿಳಿಸಿದೆ. ಕೆ‍ಎಸ್‍ಎಲ್ ಕ್ಲೀನ್‍‍ಟೆಕ್ ಕಂಪನಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ದೇಶಾದ್ಯಂತ ಅನೇಕ ಡೀಲರ್‍‍ಗಳನ್ನು ಹೊಂದಿದೆ.

10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ ಕೆ‍ಎಸ್‍ಎಲ್

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು. ಇದರಿಂದಾಗಿ ದರಗಳು ಕೈಗೆಟುಕುವಂತಿರಲಿವೆ. ಸ್ಥಳೀಯವಾಗಿ ತಯಾರಾಗುವ ಕಾರಣದಿಂದಾಗಿ ಈ ಎಲೆಕ್ಟ್ರಿಕ್ ವಾಹನಗಳು ಫೇಮ್ 2 ಯೋಜನೆಯಡಿಯಲ್ಲಿ ಸಬ್ಸಿಡಿಗಳನ್ನು ಪಡೆಯಲಿವೆ. ಕಂಪನಿಯು ಹೊಸ ವಾಹನಗಳಿಗಾಗಿ ರೂ.200 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಕೆ‍ಎಸ್‍ಎಲ್ ಕ್ಲೀನ್‍‍ಟೆಕ್‍‍ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಧೀರಜ್ ಭಾಗ್‍‍ಚಂಡ್ಕಾರವರು ಮಾತನಾಡಿ, ಭವಿಷ್ಯದಲ್ಲಿ ರಸ್ತೆ ಮೇಲೆ ಚಲಿಸುವ ವಾಹನಗಳೆಲ್ಲವೂ ಎಲೆಕ್ಟ್ರಿಕ್‍‍ಮಯವಾಗಿರಲಿವೆ.

10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ ಕೆ‍ಎಸ್‍ಎಲ್

ಸರ್ಕಾರವು ಮಾಲಿನ್ಯವನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುತ್ತಿದೆ. ಇದರಿಂದಾಗಿ ಕಂಪನಿಗಳಿಗೆ ಪ್ರೋತ್ಸಾಹ ದೊರೆತು ಗುಣಮಟ್ಟದ ಎಲೆಕ್ಟ್ರಿಕ್ ವಾಹನಗಳನ್ನು ಹೊರತರಲು ಸಾಧ್ಯವಾಗಲಿದೆ ಎಂದು ಹೇಳಿದರು. ನಾವು ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಪ್ರವೇಶಿಸಲು ದೊಡ್ಡ ಮಟ್ಟದ ಗುರಿಯನ್ನಿಟ್ಟುಕೊಂಡಿದ್ದೇವೆ. ನಾವು ಭಾರತದಲ್ಲಿ ಉತ್ಪಾದನಾ ಘಟಕವನ್ನು ಶುರುಮಾಡಲು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.

10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ ಕೆ‍ಎಸ್‍ಎಲ್

ಭಾರತ ಸರ್ಕಾರವು ದ್ವಿಚಕ್ರ ಹಾಗೂ ತ್ರಿಚಕ್ರವಾಹನಗಳನ್ನು ಎಲೆಕ್ಟ್ರಿಕರಣಗೊಳಿಸಲು ದೊಡ್ಡ ಮಟ್ಟದ ಯೋಜನೆಯನ್ನು ಹಮ್ಮಿಕೊಂಡಿದೆ. ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಇಳಿಸಲು ಹಾಗೂ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಎಲೆಕ್ಟ್ರಿಕ್ ವಾಹನಗಳ ರಿಜಿಸ್ಟ್ರೇಷನ್ ಶುಲ್ಕವನ್ನು ತೆಗೆದುಹಾಕಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದು ಮಂಡನೆಯಾಗಲಿರುವ ಬಜೆಟ್‍‍ನಲ್ಲಿ ನಿರೀಕ್ಷಿಸಲಾಗುತ್ತಿದೆ.

ಇದರ ಜೊತೆಗೆ, 150ಸಿಸಿ ಒಳಗಿನ ದ್ವಿಚಕ್ರವಾಹನಗಳ ಎಲೆಕ್ಟ್ರಿಕರಣವನ್ನು ಜಾರಿಗೊಳಿಸಲು ನಿಗದಿಪಡಿಸಲಾಗಿರುವ ಕಡಿಮೆ ಅವಧಿಯನ್ನು ದ್ವಿಚಕ್ರವಾಹನಗಳು ವಿರೋಧಿಸಿವೆ. ಬಜಾಜ್ ಆಟೋ ಹಾಗೂ ಟಿವಿ‍ಎಸ್ ಮೋಟಾರ್ ಕಂಪನಿಗಳು ದ್ವಿಚಕ್ರವಾಹನಗಳಿಗೆ ನೀಡಿರುವ 2023 ಹಾಗೂ ತ್ರಿಚಕ್ರ ವಾಹನಗಳಿಗೆ ನೀಡಿರುವ 2025ರ ಗಡುವನ್ನು ಅವಾಸ್ತವಿಕ ಹಾಗೂ ಅಪ್ರಯೋಗಿಕವೆಂದು ಕರೆದಿವೆ.

10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ ಕೆ‍ಎಸ್‍ಎಲ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇದೊಂದು ಆಸಕ್ತಿದಾಯಕ ಸಂಗತಿಯಾಗಿದೆ. ಸಬ್ 150 ಸಿಸಿ ಸೆಗ್‍‍ಮೆಂಟಿನಲ್ಲಿ ಸರ್ಕಾರವು ಬದಲಾವಣೆಗಳನ್ನು ತರಲು ಬಯಸುತ್ತಿರುವ ವೇಳೆಯಲ್ಲಿ, ಕೆ‍ಎಸ್‍ಎಲ್ ಕ್ಲೀನ್‍‍ಟೆಕ್ ಲಿಮಿಟೆಡ್ ಮತ್ತು ಗೋ ಜೀರೊ ಮೊಬಿಲಿಟಿ ತರಹದ ಕಂಪನಿಗಳು ಖಂಡಿತವಾಗಿಯೂ ಯಶಸ್ವಿಯಾಗಲಿವೆ. ಆದರೆ 10 ವಾಹನಗಳನ್ನು ಬಿಡುಗಡೆಗೊಳಿಸುತ್ತಿರುವ ಕಂಪನಿಯ ಧೈರ್ಯವನ್ನು ಮೆಚ್ಚಲೇಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಏಕಕಾಲದಲ್ಲಿ 10 ವಾಹನಗಳನ್ನು ಬೆಂಬಲಿಸುವ ಯಾವುದೇ ವ್ಯವಸ್ಥೆಯು ಇಲ್ಲ. ಸರ್ಕಾರವು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಿದೆ ಎಂಬ ವಿಶ್ವಾಸವಿದೆ.

Most Read Articles

Kannada
English summary
KSL Cleantech Ltd. Set To Launch 10 Electric Vehicles In India — What About The Infrastructure? - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X