ಬಿಡುಗಡೆಗೊಂಡ ಲೆಕ್ಟ್ರೊ ಟೌನ್‍‍ಮಾಸ್ಟರ್ ಎಲೆಕ್ಟ್ರಿಕ್ ಬೈಸಿಕಲ್

ಲೆಕ್ಟ್ರೊ ಕಂಪನಿಯು ಹೊಸ ಟೌನ್‍‍ಮಾಸ್ಟರ್ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಬೈಸಿಕಲ್‍‍ನ ಬೆಲೆಯು ರೂ.39,999ಗಳಾಗಿದೆ. ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಪರಿಸರ ಸ್ನೇಹಿಯಾಗಿಸುವುದರ ಜೊತೆಗೆ ಫಿಟ್‍‍ನೆಸ್‍‍ಗೆ ಗಮನ ನೀಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಲೆಕ್ಟ್ರೊ ಟೌನ್‍‍ಮಾಸ್ಟರ್ ಬೈಸಿಕಲ್ ಹಲವಾರು ಫೀಚರ್‍‍‍ಗಳನ್ನು ಹೊಂದಿದೆ.

ಬಿಡುಗಡೆಗೊಂಡ ಲೆಕ್ಟ್ರೊ ಟೌನ್‍‍ಮಾಸ್ಟರ್ ಎಲೆಕ್ಟ್ರಿಕ್ ಬೈಸಿಕಲ್

ಇವುಗಳಲ್ಲಿ ಪರ್ಮನೆಂಟ್ ಆದ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಇಂಟರ್ನಲ್ ಕೇಬಲ್ ರೂಟಿಂಗ್, ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಹಾಗೂ ಮುಂಭಾಗದಲ್ಲಿ ಸಸ್ಪೆಂಷನ್ ಸಿಸ್ಟಂಗಳು ಸೇರಿವೆ. ಟೌನ್‍‍ಮಾಸ್ಟರ್ ಸೈಕಲ್ ಅನ್ನು ಪೆಡಲ್ ಹಾಗೂ ಎಲೆಕ್ಟ್ರಿಕ್ ಮೋಟರ್‍‍ನೊಂದಿಗೆ ಮಾರಾಟ ಮಾಡಲಾಗುವುದು. ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 30ರಿಂದ 40 ಕಿ.ಮೀ ದೂರದವರೆಗೂ ಸಂಚರಿಸಬಹುದು.

ಬಿಡುಗಡೆಗೊಂಡ ಲೆಕ್ಟ್ರೊ ಟೌನ್‍‍ಮಾಸ್ಟರ್ ಎಲೆಕ್ಟ್ರಿಕ್ ಬೈಸಿಕಲ್

ಈ ಬೈಸಿಕಲ್‍‍ನಲ್ಲಿ ಅಳವಡಿಸಲಾಗಿರುವ ಬ್ಯಾಟರಿಯನ್ನು3 ಗಂಟೆಯಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಎಲೆಕ್ಟ್ರಿಕ್ ಬೈಸಿಕಲ್ ತನ್ನ ವಿನ್ಯಾಸದಿಂದಾಗಿ ನಗರದಲ್ಲಿ ಸಂಚರಿಸುವಾಗ ಜನರ ಗಮನವನ್ನು ಸೆಳೆಯುವ ಸಾಧ್ಯತೆಗಳಿವೆ. ಲೆಕ್ಟ್ರೋ ಇ-ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ ನಿರ್ದೇಶಕರಾದ ಆದಿತ್ಯ ಮುಂಜಾಲ್‍‍ರವರು ಮಾತನಾಡಿ, ಭಾರತದಲ್ಲಿರುವ ಯುವ ಜನರು ಫಿಟ್‍‍ನೆಸ್‍ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಇದರ ಜೊತೆಗೆ ಪರಿಸರ ಸ್ನೇಹಿಯಾದ ವಾಹನಗಳನ್ನು ಹೊಂದಲು ಬಯಸಿದ್ದಾರೆ.

ಬಿಡುಗಡೆಗೊಂಡ ಲೆಕ್ಟ್ರೊ ಟೌನ್‍‍ಮಾಸ್ಟರ್ ಎಲೆಕ್ಟ್ರಿಕ್ ಬೈಸಿಕಲ್

ಈ ವರ್ಗದ ಗ್ರಾಹಕರು ವಿವಿಧ ರೀತಿಯ ಪ್ರವಾಸಗಳಿಗೆ - ಕಡಿಮೆ ದೂರವಿರಲಿ ಅಥವಾ ಹೆಚ್ಚು ದೂರವಿರಲಿ- ಪರ್ಯಾಯವಾದ ಹಾಗೂ ಶುದ್ಧವಾದ ವಾಹನಗಳಿಗೆ ಬೇಡಿಕೆಯನ್ನಿಡುತ್ತಿದ್ದಾರೆ. ಲೆಕ್ಟ್ರೊ ಟೌನ್‍‍ಮಾಸ್ಟರ್ ಬೈಸಿಕಲ್ ಅನ್ನು ಭಾರತದಲ್ಲಿ ಸ್ಮಾರ್ಟ್ ಪ್ರಯಾಣವನ್ನು ಬಯಸುವ ಗ್ರಾಹಕರಿಗಾಗಿ ವಿಶೇಷವಾಗಿ ರಚಿಸಲಾಗಿದೆ ಎಂದು ಹೇಳಿದರು. ಎಲೆಕ್ಟ್ರಿಕ್ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ.

ಬಿಡುಗಡೆಗೊಂಡ ಲೆಕ್ಟ್ರೊ ಟೌನ್‍‍ಮಾಸ್ಟರ್ ಎಲೆಕ್ಟ್ರಿಕ್ ಬೈಸಿಕಲ್

ಅನೇಕ ಕಂಪನಿಗಳು ಭಾರತದಲ್ಲಿನ ಎಲೆಕ್ಟ್ರಿಕ್ ವಾಹನಗಳ ಸೆಗ್‍‍ಮೆಂಟಿಗೆ ಕಾಲಿಟ್ಟಿದ್ದು, ಹಲವಾರು ವಾಹನಗಳನ್ನು ಬಿಡುಗಡೆಗೊಳಿಸಿವೆ. ಇತ್ತೀಚಿಗಷ್ಟೇ ಬಜಾಜ್ ಕಂಪನಿಯು ಸಹ ದೇಶದ ಎಲೆಕ್ಟ್ರಿಕ್ ವಾಹನಗಳ ಸೆಗ್‍‍ಮೆಂಟಿಗೆ ಕಾಲಿಟ್ಟಿದೆ. ಕಂಪನಿಯು ನಿನ್ನೆಯಷ್ಟೇ ಹೊಸ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅರ್ಬನೈಟ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುವುದು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಿಡುಗಡೆಗೊಂಡ ಲೆಕ್ಟ್ರೊ ಟೌನ್‍‍ಮಾಸ್ಟರ್ ಎಲೆಕ್ಟ್ರಿಕ್ ಬೈಸಿಕಲ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಲೆಕ್ಟ್ರೊ ಟೌನ್‍‍ಮಾಸ್ಟರ್ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ನಗರದಲ್ಲಿನ ಪ್ರಯಾಣಕ್ಕಾಗಿ ಪರಿಸರ ಸ್ನೇಹಿ ವಾಹನವನ್ನಾಗಿ ಬಿಡುಗಡೆಗೊಳಿಸಲಾಗಿದೆ. ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಫಿಟ್‍‍ನೆಸ್‍‍ಗೆ ಆದ್ಯತೆ ನೀಡುವವರಿಗೆಂದು ಈ ಬೈಸಿಕಲ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಬೈಸಿಕಲ್‍‍ನಲ್ಲಿ ಪೆಡಲ್‍‍ನ ಜೊತೆಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಸಹ ನೀಡಲಾಗಿದ್ದು, ಹೆಚ್ಚು ದೂರ ಪ್ರಯಾಣಿಸಬಹುದು. ಯಾವುದೇ ಹೆಚ್ಚುವರಿಯಾದ ಚಾರ್ಜಿಂಗ್ ಪ್ಲಗ್‍‍ಗಳ ಅಗತ್ಯವಿಲ್ಲದೇ ವೇಗವಾಗಿ ಚಾರ್ಜ್ ಮಾಡುವ ವೇಗದ ಚಾರ್ಜರ್‍‍ಗಳನ್ನು ಈ ಬೈಸಿಕಲ್ ಹೊಂದಿದೆ.

Article Published On: Thursday, October 17, 2019, 17:20 [IST]
English summary
Lectro Townmaster Electric Bicycle Launched In India: Priced At Rs 30,999 - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+