ಬಿಡುಗಡೆಯಾಯ್ತು ಮಹೀಂದ್ರಾ ಮೊಜೊ 300 ಎಬಿಎಸ್
ಮಹೀಂದ್ರಾ ಟೂ ವ್ಹೀಲರ್ಸ್, ದೇಶಿಯ ಮಾರುಕಟ್ಟೆಯಲ್ಲಿ ಮೊಜೊ 300 ಎಬಿಎಸ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಮೊಜೊ 300 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.88 ಲಕ್ಷಗಳಾಗಿದೆ. ಮಹೀಂದ್ರಾ ಮೊಜೊ 300 ಬೈಕಿನ ಒಂದು ಮಾದರಿಯನ್ನು ಮಾತ್ರ ಮಾರಾಟ ಮಾಡಲಾಗುವುದು.

ಈ ಬೈಕ್ ಮಾರುಕಟ್ಟೆಯಲ್ಲಿರುವ ಎಕ್ಸ್‌ಟಿ ಹಾಗೂ ಯುಟಿ ಟ್ರಿಮ್ ಬೈಕುಗಳ ನಡುವೆ ಸಮತೋಲನವನ್ನು ಸಾಧಿಸುವ ಹಲವಾರು ಎಕ್ವಿಪ್‍ಮೆಂಟ್‍ಗಳನ್ನು ಹೊಂದಿದೆ. ಹೊಸ ಮಹೀಂದ್ರಾ ಮೊಜೊ 300 ಬೈಕಿಗಾಗಿ ಬುಕಿಂಗ್‍ಗಳನ್ನು ಆರಂಭಿಸಲಾಗಿದೆ. ಈ ಬೈಕುಗಳನ್ನು ಡೀಲರ್‍ಗಳ ಬಳಿಗೆ ಸಾಗಿಸಲಾಗುತ್ತಿದೆ.

ಹೊಸ ಮೊಜೊ 300 ಬೈಕಿನ ಡೆಲಿವರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಹೊಸ ಮಹೀಂದ್ರಾ ಮೊಜೊ 300 ಬೈಕಿನಲ್ಲಿ 295 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 26ಬಿಹೆಚ್‍ಪಿ ಹಾಗೂ 30ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡ್‍ನ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ಎರಡೂ ತುದಿಯಲ್ಲಿರುವ ಡಿಸ್ಕ್ ಗಳು ಬ್ರೇಕಿಂಗ್ ಕಾರ್ಯಗಳನ್ನು ನಿರ್ವಹಿಸುತ್ತವೆ. ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಗಳಿದ್ದರೆ, ಹಿಂಭಾಗದಲ್ಲಿ ಬೈಬ್ರೆಯ 240 ಎಂಎಂ ಡಿಸ್ಕ್ ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಹೊಸ ಬೈಕಿನಲ್ಲಿ ಪಿರೆಲ್ಲಿ ಏಂಜಲ್ ಸಿಟಿ ಟಯರ್‌ಗಳನ್ನು ಅಳವಡಿಸಲಾಗಿದೆ.

ಮೊಜೊ 300 ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳಿದ್ದರೆ, ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್‍ಗಳಿವೆ. ಹಿಂದಿನ ಮಾದರಿಯಲ್ಲಿದ್ದ ಗೋಲ್ಡ್ ಬಣ್ಣದ ತಲೆಕೆಳಗಾದ ಫೋರ್ಕ್‌ಗಳ ಬದಲಿಗೆ ಕಪ್ಪು ಬಣ್ಣದ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಅಳವಡಿಸಲಾಗಿದೆ.

ಹೊಸದಾಗಿ ಸಿಂಗಲ್ ಸೈಡ್‍ನ ಎಕ್ಸಾಸ್ಟ್ ಪೈಪ್ ಅಳವಡಿಸಲಾಗಿದೆ. ಫ್ಯೂಯಲ್ ಟ್ಯಾಂಕ್‌ಗಳ ಬದಿಯಲ್ಲಿದ್ದ ಗೋಲ್ಡನ್ ಟ್ಯೂಬ್‌ಗಳನ್ನು ಸಹ ಕಪ್ಪು ಬಣ್ಣಕ್ಕೆ ಬದಲಿಸಲಾಗಿದೆ. ಇವುಗಳನ್ನು ಬಿಟ್ಟು ಹೊಸ ಮೊಜೊ 300 ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಎಲ್‌ಇಡಿ ಡಿಆರ್‌ಎಲ್‌ಗಳಂತಹ ಫೀಚರ್‍ಗಳನ್ನು ಈ ಬೈಕಿನಲ್ಲಿ ಅಳವಡಿಸಲಾಗಿಲ್ಲ. ಹೊಸ ಬೈಕ್ ಅನೇಕ ಫೀಚರ್‍ಗಳನ್ನು ಹೊಂದದೇ ಇದ್ದರೂ, ಯುಟಿ ಮಾದರಿಯ ಬೈಕಿಗಿಂತ ರೂ.40,000 ಹಾಗೂ ಎಕ್ಸ್‌ಟಿ ಟ್ರಿಮ್‌ಗಿಂತ ರೂ.10,000 ಹೆಚ್ಚು ಬೆಲೆಯನ್ನು ಹೊಂದಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮಹೀಂದ್ರಾ ಕಂಪನಿಯ ಪ್ರಮುಖ ಬೈಕ್ ಆದ ಮೊಜೊ 300, ಮಾರಾಟದಲ್ಲಿ ಕುಸಿತ ಕಂಡಿದೆ. ಹಿಂದಿನ ತಿಂಗಳುಗಳಲ್ಲಿ ಕಂಪನಿಯ ಯಾವುದೇ ಬೈಕುಗಳ ಮಾರಾಟವಾಗಿಲ್ಲ. ಮಾರಾಟದಲ್ಲಿ ಶೂನ್ಯ ಪ್ರಮಾಣವನ್ನು ದಾಖಲಿಸಿತ್ತು. ಈ ಬೈಕಿನಲ್ಲಿ ಎಬಿಎಸ್ ಅಳವಡಿಸದೇ ಇದ್ದ ಕಾರಣ ಮಾರಾಟದಲ್ಲಿ ಕುಸಿತ ಉಂಟಾಗಿತ್ತು.

ಎಬಿಎಸ್ ಅಳವಡಿಸಿದ ನಂತರ ಮಹೀಂದ್ರಾ ಬೈಕುಗಳ ಮಾರಾಟದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೊಸ ಬೈಕ್ ಬಜಾಜ್ ಡೊಮಿನಾರ್ 400 ಬೈಕಿಗಿಂತ ಹೆಚ್ಚಿನ ಬೆಲೆ ಹೊಂದಿದೆ. ಈ ಸೆಗ್‍ಮೆಂಟಿನಲ್ಲಿ ಉಳಿದ ಕಂಪನಿಯ ಬೈಕುಗಳಿಗೆ ಹೇಗೆ ಪೈಪೋಟಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
Source: Farhan Khan/Instagram


Click it and Unblock the Notifications








