ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಹೋಂಡಾ ನವಿ

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಸಂಸ್ಥೆಯು 2016ರಲ್ಲಿ ತನ್ನ ಹೊಸ ಮಾದರಿಯ ನವಿ ಸ್ಕೂಟರ್‍‍‍ಗಳನ್ನು ಬಿಡುಗಡೆ ಮಾಡಿದ್ದು, ಕೆಲವು ತಿಂಗಳ ಪೈಕಿ ಕಡಿಮೆ ಮಾರಾಟವನ್ನು ಪಡೆದುಕೊಂಡಿದ್ದ ನವಿ ಸ್ಕೂಟರ್‍‍ಗಳಿಗೆ ಮತ್ತೊಮ್ಮೆ ಹೆಚ್ಚಿನ ಸುರಕ್ಷಾ ಸಾಧನವನ್ನು ಅಳವಡಿಸಿ ಸಂಸ್ಥೆಯು ಬಿಡುಗಡೆಗೊಳಿಸಿದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಹೋಂಡಾ ನವಿ

ಹೌದು, ಹೊಸ ಹೋಂಡಾ ನವಿ ಸ್ಕೂಟರ್‍‍ಗಳು ಈ ಬಾರಿ ಹೆಚ್ಚು ಸುರಕ್ಷತೆಯ ಅನುಸಾರ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿದ್ದು, ಕಾಂಬಿ ಬ್ರೇಕಿಂಗ್ ಸಿಸ್ಟಂ ಪಡೆದ ಹೋಂಡಾ ನವಿ ಸ್ಕೂಟರ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 47,110 ಬೆಲೆಯನ್ನು ಪಡೆದುಕೊಂಡಿದೆ. ಎಪ್ರಿಲ್ 1 ರಿಂದ ಜಾರಿಯಾಗಲಿರುವ ಹೊಸ ಸುರಕ್ಷಾ ಕಾಯ್ದೆಯ ಅನುಸಾರ ಹೋಂಡಾ ಸಂಸ್ಥೆಯು ಈ ಸ್ಕೂಟರ್‍‍ಗೆ ಸಿಬಿಎಸ್ ಟೆಕ್ನಾಲಜಿಯನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಿದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಹೋಂಡಾ ನವಿ

ಹೋಂಡಾ ನವಿ ಸ್ಕೂಟರ್‍‍ಗಳನ್ನು ಮೊದಲ ಬಾರಿಗೆ 2016ರಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ಇದನ್ನು ಹೋಂಡಾ ಇಂಡಿಯಾದ ಆರ್&ಡಿ ಇಲಾಖೆಯಿಂದ ಡಿಸೈನ್ ಮಾಡಲಾಗಿತ್ತು. ಕಳೆದ ಆಗಸ್ಟ್ ತಿಂಗಳಿನಲ್ಲಿ ಒಂದು ಲಕ್ಷಕ್ಕು ಹೆಚ್ಚು ಮಾರಾಟಗೊಂಡಿದ್ದ ಈ ಸ್ಕೂಟರ್‍‍ಗಳು ಬರುಬರುತ್ತಾ ಕಳಪೆ ಮಟ್ಟದ ಮಾರಾಟವನ್ನು ಪಡೆದುಕೊಂಡಿತು.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಹೋಂಡಾ ನವಿ

ಎರಡು-ಚಕ್ರಗಳ ಮೇಲೆ ಸಿಬಿಎಸ್ ಟೆಕ್ ಮುಂಭಾಗದ ಮತ್ತು ಹಿಂಭಾಗದ ಬ್ರೇಕ್‍ಗಳನ್ನು ಸಕ್ರಿಯಗೊಳಿಸುತ್ತದೆ ಹಾಗು ಒಂದೇ ಬಾರಿ ಒತ್ತಲಾಗುವ ಲಿವರ್ ಅನ್ನು ಕೂಡಾ ಹೊಂದಿರುತ್ತದೆ. ಇದರ ಫಲಿತಾಂಶವು ಕಡಿಮೆ ಬ್ರೇಕಿಂಗ್ ಅಂತರ ಮತ್ತು ವಾಹನವು ಬ್ರೇಕ್ ಹಿಡಿದಾಗ ಕಡಿಮೆ ಸ್ಕಿಡ್ ಆಗುತ್ತದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಹೋಂಡಾ ನವಿ

ಹೋಂಡಾ ನವಿ ಸ್ಕೂಟರ್‍‍ಗಳು 110ಸಿಸಿ, ನಾಲ್ಕು ಸ್ಟ್ರೋಕ್, ಸಿಂಗಲ್ ಸಿಲೆಂಡರ್ ಸಹಾಯದಿಂದ 8 ಬಿಹೆಚ್‍ಪಿ ಹಾಗೂ 9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದ್ದು, ಪ್ರತಿ ಲೀಟರ್‍‍ಗೆ 60 ಕಿಲೋ ಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಹೋಂಡಾ ನವಿ

ಹೋಂಡಾ ನವಿ ಸ್ಕೂಟರ್‍‍ಗಳು ಸ್ಟ್ರೀಟ್, ಅಡ್ವೆಂಚರ್ ಮತ್ತು ಆಫ್ ರೋಡ್ ಎಂಬ ಮೂರು ವೇರಿಯೆಂಟ್‍‍ಗಳಲ್ಲಿ ಲಭ್ಯವಿದ್ದು, ರೆಡ್, ಗ್ರೇ, ವೈಟ್, ಆರೆಂಜ್ ಮತ್ತು ಕಪ್ಪು ಎಂಬ 6 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಹೋಂಡಾ ನವಿ

ಇನ್ನು ಈ ಸ್ಕೂಟರಿನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೇ, ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಕ್ಸ್ಟರ್ನಲ್ ಫ್ಯುಯಲ್ ಫಿಲ್ಲರ್ ಕ್ಯಾಪ್ ಅನ್ನು ಅಳವಡಿಸಲಾಗಿದ್ದು, ಇದಲ್ಲದೇ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಶಾಕ್ ಸಸ್ಪೆಷನ್ ಅನ್ನು ಕೂಡಾ ಪಡೆದಿವೆ.

ಬಿಡುಗಡೆಯಾದ ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಹೋಂಡಾ ನವಿ

ಏಪ್ರಿಲ್ 1 ರಿಂದ ಹೊಸ ರೂಲ್ಸ್

ಕೇಂದ್ರ ಸರ್ಕಾರದ ಆದೇಶದ ಅನುಸಾರ 125ಸಿಸಿ ಗಿಂತಾ ಕಡಿಮೆ ಸಾಮರ್ಥ್ಯವನ್ನು ಪಡೆದುಕೊಂಡಿರುವ ವಾಹನಗಳು ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಹಾಗು 125ಸಿಸಿ ಗಿಂತಲೂ ಅಧಿಕ ಸಾಮರ್ಥ್ಯವನ್ನು ಪಡೆದುಕೊಂಡಿರುವ ವಾಹನಗಳು ಎಬಿಎಸ್ ಟೆಕ್ನಾಲಜಿಯನ್ನು ಕಡ್ಡಾಯವಾಗಿ ಪಡೆದಿರಲೇಬೇಕಿದೆ.

Most Read Articles

Kannada
English summary
2019 Honda Navi CBS Launched In India — Priced At Rs 47,110. Read In Kannada
Story first published: Thursday, February 28, 2019, 9:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X