ಆಗಸ್ಟ್ 7ಕ್ಕೆ ಬಿಡುಗಡೆಯಾಗಲಿದೆ ರಿವೋಲ್ಟ್ ಆರ್‍‍ವಿ 400 ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ಮೋಟರ್‍‍ಸೈಕಲ್ ಸ್ಟಾರ್ಟ್ ಅಪ್ ಕಂಪನಿಯಾದ, ರಿವೋಲ್ಟ್ ಮೋಟಾರ್ಸ್, ತನ್ನ ಮೊದಲ ಬೈಕ್ ಆದ ಆರ್‍‍ವಿ400 ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಕಳೆದ ತಿಂಗಳು ಅನಾವರಣಗೊಳಿಸಲಾಗಿತ್ತು. ಕಂಪನಿಯ ವೆಬ್‌ಸೈಟ್ ಹಾಗೂ ಅಮೆಜಾನ್‌ನಲ್ಲಿ ಬಿಡುಗಡೆ ಪೂರ್ವ ಬುಕ್ಕಿಂಗ್ ಆರಂಭಿಸಲಾಗಿದೆ.

ಆಗಸ್ಟ್7ಕ್ಕೆ ಬಿಡುಗಡೆಯಾಗಲಿದೆ ರಿವೋಲ್ಟ್ ಆರ್‍‍ವಿ 400 ಬೈಕ್

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹೊಂದಿರುವ ದೇಶದ ಮೊದಲ ಎಲೆಕ್ಟ್ರಿಕ್ ಬೈಕ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ಬೈಕ್ ಅನ್ನು ಆಗಸ್ಟ್7 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ರಿವೋಲ್ಟ್ ಮೋಟಾರ್ಸ್ ಖಚಿತಪಡಿಸಿದೆ. ಈ ಬೈಕಿನ ಡೆಲಿವರಿಯನ್ನು ಬಿಡುಗಡೆಯಾದ ಕೂಡಲೇ ನೀಡಲಾಗುವುದು ಎಂದು ಹೇಳಲಾಗಿದೆ.

ಆಗಸ್ಟ್7ಕ್ಕೆ ಬಿಡುಗಡೆಯಾಗಲಿದೆ ರಿವೋಲ್ಟ್ ಆರ್‍‍ವಿ 400 ಬೈಕ್

ರಿವೋಲ್ಟ್ ಆರ್‍‍ವಿ 400 ಎಲೆಕ್ಟ್ರಿಕ್ ಬೈಕ್ ಅನ್ನು ವಿವಿಧ ಹಂತಗಳಲ್ಲಿ ಮಾರಾಟ ಮಾಡಲಾಗುವುದು. ಈ ಬೈಕಿನ ಬುಕ್ಕಿಂಗ್‍‍ಗಳನ್ನು ಜೂನ್ 25ರಿಂದ ಶುರು ಮಾಡಲಾಗಿದೆ. ಸದ್ಯಕ್ಕೆ ದೆಹಲಿ ಹಾಗೂ ಪುಣೆ ನಗರಗಳಿಗೆ ಮಾತ್ರ ಬುಕ್ಕಿಂಗ್ ಲಭ್ಯವಿದೆ. ಕಂಪನಿಯು ಮುಂದಿನ ದಿನಗಳಲ್ಲಿ ದೇಶದ ಬೇರೆ ಬೇರೆ ನಗರಗಳಲ್ಲಿ ಮಾರಾಟ ಮಾಡಲಿದೆ.

ಆಗಸ್ಟ್7ಕ್ಕೆ ಬಿಡುಗಡೆಯಾಗಲಿದೆ ರಿವೋಲ್ಟ್ ಆರ್‍‍ವಿ 400 ಬೈಕ್

ರೂ.1000 ಟೋಕನ್ ಮೊತ್ತದೊಂದಿಗೆ ರಿವೋಲ್ಟ್ ಆರ್‍‍ವಿ 400 ಬೈಕುಗಳನ್ನು ಬುಕ್ಕಿಂಗ್ ಮಾಡಬಹುದು. ರಿವೋಲ್ಟ್ ಆರ್‍‍ವಿ 400 ಬೈಕು ಹಲವಾರು ಫೀಚರ್‍‍ಗಳನ್ನು ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿದೆ. ಇವುಗಳಲ್ಲಿ ಎಲ್‌ಇಡಿ ಹೆಡ್‌ಲೈಟ್‌, ಎಲ್‌ಇಡಿ ಟೇಲ್‍‍ಲೈಟ್‌, ಎಲ್‌ಇಡಿ ಡಿಆರ್‌ಎಲ್‌, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಇನ್ನಿತರ ಫೀಚರ್‍‍ಗಳು ಸೇರಿವೆ.

ಆಗಸ್ಟ್7ಕ್ಕೆ ಬಿಡುಗಡೆಯಾಗಲಿದೆ ರಿವೋಲ್ಟ್ ಆರ್‍‍ವಿ 400 ಬೈಕ್

ಈ ಬೈಕ್ ಅನ್ನು ಸ್ಮಾರ್ಟ್ ಫೋನಿನಲ್ಲಿರುವ ರಿವೋಲ್ಟ್ ಅಪ್ಲಿಕೇಶನ್‌ನೊಂದಿಗೆ ಸಿಂಕ್ ಮಾಡಿಕೊಳ್ಳಬಹುದು. ಈ ಆಪ್ ಹೆಚ್ಚುವರಿಯಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫೀಚರ್‍‍ಗಳನ್ನು ನೀಡುತ್ತದೆ. ಈ ಬೈಕಿನಲ್ಲಿ ಹಲವಾರು ಹೆಚ್ಚುವರಿ ಫೀಚರ್‍‍ಗಳಿವೆ.

ಆಗಸ್ಟ್7ಕ್ಕೆ ಬಿಡುಗಡೆಯಾಗಲಿದೆ ರಿವೋಲ್ಟ್ ಆರ್‍‍ವಿ 400 ಬೈಕ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಅವುಗಳೆಂದರೆ ಲೈವ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋ ಫೆನ್ಸಿಂಗ್, ರಿಯಲ್ ಟೈಮ್ ವೆಹಿಕಲ್ ಡಯಾಗ್ನೋಸ್ಟಿಕ್ಸ್, ಅಪ್ಲಿಕೇಶನ್‌ನಲ್ಲಿ ಬೈಕ್ ಪತ್ತೆ ಮಾಡುವುದು, ದೂರದಿಂದ ಬೈಕ್ ಪ್ರಾರಂಭಿಸುವುದು ಹಾಗೂ ನಾಲ್ಕು ವಿಭಿನ್ನವಾದ ಎಕ್ಸಾಸ್ಟ್ ನೋಟ್‍‍ಗಳನ್ನು ಹೊಂದಿದೆ.

ಆಗಸ್ಟ್7ಕ್ಕೆ ಬಿಡುಗಡೆಯಾಗಲಿದೆ ರಿವೋಲ್ಟ್ ಆರ್‍‍ವಿ 400 ಬೈಕ್

ರಿವೋಲ್ಟ್ ಆರ್‍‍ವಿ 400 ಬೈಕಿನ ನಿಖರವಾದ ಸ್ಪೆಸಿಫಿಕೇಶನ್‍‍ಗಳನ್ನು ರಿವೋಲ್ಟ್ ಮೋಟಾರ್ಸ್ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಈ ಎಲೆಕ್ಟ್ರಿಕ್ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 85 ಕಿ.ಮೀ ವೇಗದಲ್ಲಿ 156 ಕಿ.ಮೀ ದೂರದ ವರೆಗೆ ಚಲಿಸಲಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಿದೆ.

ಆಗಸ್ಟ್7ಕ್ಕೆ ಬಿಡುಗಡೆಯಾಗಲಿದೆ ರಿವೋಲ್ಟ್ ಆರ್‍‍ವಿ 400 ಬೈಕ್

ರಿವೋಲ್ಟ್ ಮೋಟಾರ್ಸ್ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಹಲವಾರು ವಿಶಿಷ್ಟ ವಿಧಾನಗಳನ್ನು ಪರಿಚಯಿಸಲಿದೆ. ಇದರಲ್ಲಿ ಪ್ಲಗ್ ಇನ್ ಚಾರ್ಜಿಂಗ್, ತೆಗೆಯಬಹುದಾದ ಬ್ಯಾಟರಿ ಪ್ಯಾಕ್, ಬದಲಾಯಿಸಬಹುದಾದ ಬ್ಯಾಟರಿ ಸ್ಟೇಷನ್‍‍ಗಳು ಹಾಗೂ ಬ್ಯಾಟರಿ ಹೋಂ ಡೆಲಿವರಿಗಳು ಸೇರಿವೆ.

ಆಗಸ್ಟ್7ಕ್ಕೆ ಬಿಡುಗಡೆಯಾಗಲಿದೆ ರಿವೋಲ್ಟ್ ಆರ್‍‍ವಿ 400 ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಿವೋಲ್ಟ್ ಆರ್‍‍ವಿ400 ಬೈಕ್ ಅನ್ನು ಆಗಸ್ಟ್ 7 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಬೈಕ್ ಭಾರತದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿರುವ ಎಲೆಕ್ಟ್ರಿಕ್ ಬೈಕ್ ಆಗಿದೆ. ಆರ್‌ವಿ400 ಬೈಕಿನ ಬೆಲೆಯು ದೆಹಲಿಯ ಎಕ್ಸ್‌ಶೋರೂಂ ದರದಂತೆ ರೂ.1 ಲಕ್ಷಗಳಾಗಲಿದೆ. ಈ ಬೈಕಿಗೆ ದೇಶಿಯ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲ.

More from DriveSpark

Article Published On: Saturday, July 20, 2019, 10:31 [IST]
English summary
Revolt RV 400 Launch Date Confirmed — India’s First AI-Enabled Electric Motorcycle Is Almost Here! - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+