ಆರ್‍ಇ 650 ಟ್ವಿನ್ ಎಫೆಕ್ಟ್ - ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಬುಲೆಟ್ ಬೈಕ್‍ಗಳು
ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿನ ಕ್ಲಾಸಿಕ್ 350 ಬೈಕ್‍ಗಳು ಸಂಸ್ಥೆಯಲ್ಲಿನ ಮಾರಾಟದ ಸಂಖ್ಯೆಯನ್ನು ಬಹಳ ತಿಂಗಳಿನಿಂದಲೂ ಕಾಪಾಡಿಕೊಂಡು ಬರುತಿತ್ತು. 2018ರ ಮೇ ತಿಂಗಳಿನಲ್ಲಿ ಸುಮಾರು 51,147 ಯೂನಿಟ್ ಕ್ಲಾಸಿಕ್ 350 ಬೈಕ್‍ಗಳು ಮಾರಾಟವಾದರೆ ಇನ್ನು ಈ ಮೇ ತಿಂಗಳಿನಲ್ಲಿ ಕೇವಲ 35,998 ಯೂನಿಟ್ ಮಾರಾಟಗೊಂಡಿದೆ.

2019ರ ಮೇ ತಿಂಗಳಿನಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿರುವ ನಾಲ್ಕು ಮೋಟಾರ್‍ಸೈಕಲ್‍ಗಳು ಸಂಸ್ಥೆಯ ಮಾರಾಟವನ್ನು ಅಧಿಕಗೊಳಿಸಿದ್ದು, ಅವುಗಳು ಎಲ್ಲವೂ 350ಸಿಸಿ ಹೊಂದಿರುವ ಬೈಕ್‍ಗಳೇ ಎಂದು ಹೇಳಲಾಗಿದೆ. 11,995 ಯೂನಿಟ್ ಬುಲೆಟ್ 350 ಟ್ವಿನ್‍ಸ್ಪಾರ್ಕ್ 4,735 ಯೂನಿಟ್ ಥಂಡರ್‍ಬರ್ಡ್ 350 ಮತ್ತು 2,979 ಯೂನಿಟ್ ಬುಲೆಟ್ ಎಲಕ್ಟ್ರಾ ಬೈಕ್‍ಗಳು ಮಾರಾಟವಾಗಿದೆ.

ಮತ್ತೊಂದು ಕಡೆ ಗಾಡಿವಾಡಿ ವರದಿ ಪ್ರಕಾರ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ 1,192 ಯೂನಿಟ್ ಮಾರಾಟವಾಗಿದ್ದು, ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿನ 500ಸಿಸಿ ಬೈಕ್‍ಗಳು ಬರುಬರುತ್ತಾ ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಏಕೆಂದರೆ ಸಂಸ್ಥೆಯು ನವೆಂಬರ್‍ನಲ್ಲಿ ಬಿಡುಗಡೆಗೊಳಿಸಿದ ಇಂಟರ್‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆಯುತ್ತಿದೆ.

ಹೌದು, ನವೆಂಬರ್ 14, 2018ರಲ್ಲಿ ಬಿಡುಗಡೆಗೊಂಡ ರಾಯಲ್ ಎನ್‍ಫೀಲ್ಡ್ ಇಂಟರ್‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ಗಳು ರೂ. 2.50 ಲಕ್ಷ ಮತ್ತು ರೂ. 2.65 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದರೂ ಸಹ ಮೇ ತಿಂಗಳಿನಲ್ಲಿ ಈ ಎರಡೂ ಬೈಕ್‍ಗಳು ಸೇರಿ 2,427 ಯೂನಿಟ್ ಮಾರಾಟಗೊಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಈ ಎರಡೂ ಬೈಕ್‍ಗಳು ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ನೋಟವನ್ನು ಪಡೆದುಕೊಂಡಿದೆ. ಕಾಂಟಿನೆಂಟಲ್ ಜಿಟಿ 650 ಕೆಫ್ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ.

ಬೈಕ್‍ಗಳ ವಿನ್ಯಾಸ
ರಾಯಲ್ ಎನ್‍ಫೀಲ್ಡ್ ಇಂಟರ್‍ಸೆಪ್ಟರ್ 650 60ರ ದಶಕದ ಇಂಟರ್‍ಸೆಪ್ಟರ್‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

ಕೇಫ್ ರೇಸರ್ ವಿನ್ಯಾಸವನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ 1950ರ ದಶಕದಲ್ಲಿನ ಕೆಫ್ ರೇಸರ್ ವಿನ್ಯಾಸವನ್ನು ಆಧರಿಸಿದ್ದು, ಕೆತ್ತಲಾದ ಫ್ಯುಯಲ್ ಟ್ಯಾಂಕ್, ತೂಕದ ನಿಲುವು, ರಿಯರ್-ಫೂಟ್ ಪೆಗ್ಸ್ ಮತ್ತು ಹ್ಯಾಂಡಲ್‍ಬಾರ್‍ನ ಮೇಲೆ ಕ್ಲಿಪ್ ಅನ್ನು ಒದಗಿಸಲಾಗಿದೆ.

ಎಂಜಿನ್ ವೈಶಿಷ್ಟ್ಯತೆ
ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೊಸ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47ಬಿಹೆಚ್‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍ಕಾಂಪ್ ಟೈರ್‍ಗಳನ್ನು ಅಳವಡಿಸಲಾಗಿದೆ.

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.


Click it and Unblock the Notifications








