ಟ್ವಿನ್ ಬೈಕ್‍ಗಳ ಉತ್ಪಾದನೆಯನ್ನು ಹೆಚ್ಚಿಸಿದ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‍ಫೀಲ್ಡ್ ಕಂಪನಿಯ ಜನಪ್ರಿಯ ಮಾದರಿಗಳಾದ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕುಗಳ ಉತ್ಪಾದನೆಯನ್ನು ಹೆಚ್ಚಿಸಿದೆ. 24,500 ಯುನಿಟ್‍ಗಳಿಗೂ ಹೆಚ್ಚಿನ 650ಟ್ವಿನ್‍ ಬೈಕ್‍‍ಗಳನ್ನು ಉತ್ಪಾದಿಸಿದೆ. ರಶ್‍‍ಲೇನ್ ವರದಿಯ ಪ್ರಕಾರ ರಾಯಲ್ ಎನ್‍‍ಫೀಲ್ಡ್ ಟ್ವಿನ್ ಬೈಕು‍ಗಳನ್ನು ಬಿಡುಗಡೆಗೊಳಿಸಿದ ಬಳಿಕ ಆರು ತಿಂಗಳಲ್ಲಿ ಕಂಪನಿಯು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸುವಲ್ಲಿ ಯಶ್ವಸಿಯಾಗಿದೆ.

ಟ್ವಿನ್ ಬೈಕ್‍ಗಳ ಉತ್ಪಾದನೆಯನ್ನು ಹೆಚ್ಚಿಸಿದ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‍‍ಫೀಲ್ಡ್, ಕಾಂಟಿ‍‍ನೆಂಟಲ್ ಜಿ‍ಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕ ದೇಶಿಯ ಮಾರುಕಟ್ಟೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿವೆ. ಈ ಬೈಕಿನ ಇಂಜಿನ್ ಸಾಮರ್ಥ್ಯ ಮತ್ತು ಹಲವಾರು ವೈಶಿಷ್ಟ್ಯಗಳಿಂದ ಕೂಡಿರುವ ಕಾರಣ ದೇಶಿಯ ಮಾರುಕಟ್ಟೆ ಗ್ರಾಹಕರು ಈ ಬೈಕ್‍‍ಗೆ ಫಿದಾ ಆದರು. ಎರಡೂ ಬೈ‍ಕ್‍‍ಗಳು ಪ್ಯಾರೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿವೆ.

ಟ್ವಿನ್ ಬೈಕ್‍ಗಳ ಉತ್ಪಾದನೆಯನ್ನು ಹೆಚ್ಚಿಸಿದ ರಾಯಲ್ ಎನ್‍‍ಫೀಲ್ಡ್

ಕಳೆದ ತಿಂಗಳು ರಾಯಲ್ ಎನ್‍‍ಫೀಲ್ಡ್ 3,993 ಯುನಿ‍ಟ್‍ಗಳನ್ನು ಉತ್ಪಾದಿಸಿತ್ತು. ಅದರಲ್ಲಿ 2,137 ಯು‍‍ನಿ‍ಟ್‍ಗಳನ್ನು ರಫ್ತು ಮಾಡಲಾಗಿದೆ ಮತ್ತು ಉಳಿದ 1,856 ಯು‍‍ನಿ‍‍ಟ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿರಿಸಲಾಗಿದೆ. ಇತ್ತೀಚಿನ ತಿಂಗಳಲ್ಲಿ 650 ಟ್ವಿನ್ ರಪ್ತು ಶೇ.53.52 ರಷ್ಟು ಹೆಚ್ಚಿದ್ದು, ಬೇಡಿಕೆಯು ಹೆಚ್ಚಾಗುತ್ತಿವೆ.

ಟ್ವಿನ್ ಬೈಕ್‍ಗಳ ಉತ್ಪಾದನೆಯನ್ನು ಹೆಚ್ಚಿಸಿದ ರಾಯಲ್ ಎನ್‍‍ಫೀಲ್ಡ್

ದೇಶದಲ್ಲಿ ಆಟೋಮೊಬೈಲ್ ಕ್ಷೇತ್ರವು ಮಂದಗತಿಯಿಂದಾಗಿ ಸಾಗುತ್ತಿರುವುದರಿಂದ 650 ಟ್ವಿನ್ ಬೈಕ್‍‍ಗಳ ಒಟ್ಟಾರೆ ಮಾರಾಟವು ಕಳೆದ ತಿಂಗಳು ಕುಸಿದಿದೆ. ಆಗಸ್ಟ್ ತಿಂಗಳಲ್ಲಿ ರಾಯಲ್ ಎನ್‍‍ಫೀಲ್ಡ್ ಒಟ್ಟು 4,571 ಯು‍‍ನಿ‍‍ಟ್‍ಗಳನ್ನು ಉತ್ಪಾದಿಸಿತು. ಸೆಪ್ಟೆಂಬರ್ ತಿಂಗಳಲ್ಲಿ 78 ಯು‍‍ನಿ‍‍ಟ್‍ಗಳನ್ನು ಹೆಚ್ಚು ಉತ್ಪಾದಿಸಿದೆ.

ಟ್ವಿನ್ ಬೈಕ್‍ಗಳ ಉತ್ಪಾದನೆಯನ್ನು ಹೆಚ್ಚಿಸಿದ ರಾಯಲ್ ಎನ್‍‍ಫೀಲ್ಡ್

ಇಂಟರ್‍‍ಸೆಪ್ಟೆರ್ 650 ಮತ್ತು ಕಾಂಟಿ‍ನೆಂಟಲ್ ಜಿಟಿ 650 ಎಂಬ ಎರಡು ಟ್ವಿನ್ಸ್ ಬೈಕ್‍‍ಗಳು 649 ಸಿಸಿ ಏರ್/ಆಯಿಲ್ -ಕೂಲ್ಡ್ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿವೆ. ಈ ಎಂಜಿನ್ 47 ಬಿ‍ಹೆಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ ಅಸಿಸ್ಟ್ ಕ್ಲಚ್‍‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಟ್ವಿನ್ ಬೈಕ್‍ಗಳ ಉತ್ಪಾದನೆಯನ್ನು ಹೆಚ್ಚಿಸಿದ ರಾಯಲ್ ಎನ್‍‍ಫೀಲ್ಡ್

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಮೂಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿವೆ.

ಟ್ವಿನ್ ಬೈಕ್‍ಗಳ ಉತ್ಪಾದನೆಯನ್ನು ಹೆಚ್ಚಿಸಿದ ರಾಯಲ್ ಎನ್‍‍ಫೀಲ್ಡ್

ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿ‍ನೆಂಟಲ್ ಜಿಟಿ 650 ಬೈಕುಗಳ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಕ್ರಮವಾಗಿ ರೂ.2.51 ಲಕ್ಷ ಮತ್ತು ರೂ.2.71 ಲಕ್ಷಗಳಾಗಿವೆ. ಈ ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿವೆ. ಕಾಂಟಿನೆಂಟಲ್ ಜಿಟಿ 650 ಕೆಫೆ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟ್ವಿನ್ ಬೈಕ್‍ಗಳ ಉತ್ಪಾದನೆಯನ್ನು ಹೆಚ್ಚಿಸಿದ ರಾಯಲ್ ಎನ್‍‍ಫೀಲ್ಡ್

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್, 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್‍‍ಗಳನ್ನು ಹೊಂದಿವೆ. ರಾಯಲ್ ಎನ್‍‍ಫೀಲ್ಡ್ 650 ಸಿಸಿ ಬೈಕ್‍‍ಗಳಲ್ಲಿ ಸಣ್ಣ ಬದಲಾವಣೆಗಳನ್ನು ತಂದಿದೆ. ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಟಲ್ ಜಿಟಿ 650 ಬೈಕ್‍‍ಗಳ ಹೆಡ್‍‍ಲೈ‍ಟ್‍‍ಗಳಲ್ಲಿ ಬದಲಾವಣೆಗಳನ್ನು ಮಾಡಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಟ್ವಿನ್ ಬೈಕ್‍ಗಳ ಉತ್ಪಾದನೆಯನ್ನು ಹೆಚ್ಚಿಸಿದ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‍ಫೀಲ್ಡ್ ಕಂಪನಿಯ ಹಳೆಯ ತಲೆಮಾರಿನ ಬೈಕ್‍‍ಗಳಾದ ದಿ ಕ್ಲಾಸಿಕ್, ಬುಲೆಟ್ ಮತ್ತು ಥಂಡರ್ ಬರ್ಡ್ ಇವುಗಳು ಹೊಸ ಅಲೆಯನ್ನು ಸೃಷ್ಟಿಸಿದ ಬೈಕ್‍‍ಗಳಾಗಿವೆ. ಕಂಪನಿಯು ಅದೇ ಹಳೆಯ ಪ್ರಸಿದ್ದಿಯನ್ನು ಪಡೆಯಲು ಏನಾದರೂ ಮಾಡಬೇಕಾಗಿದೆ ಎಂದು ಯೋಚಿಸಿ ಹೊಸ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕುಗಳನ್ನು ತಂದಿದೆ. ಈ ತಂತ್ರವು ಯಶಸ್ವಿಯಾಗಿ ಟ್ವಿನ್ ಬೈಕ್‍‍ಗಳು ಹೆಚ್ಚು ಮಾರಾಟವಾಗಿವೆ. ರಾಯಲ್ ಎನ್‍‍‍ಫೀಲ್ಡ್ ಟ್ವಿನ್ಸ್ ಬೈಕು‍ಗಳಲ್ಲಿ ಮುಖ್ಯವಾಗಿ ಎಂಜಿನ್ ದಕ್ಷತೆಯು ಎಲ್ಲರ ಗಮನ ಸೆಳದಿದೆ.

More from DriveSpark

Article Published On: Tuesday, October 29, 2019, 11:56 [IST]
English summary
Royal Enfield 650 Twins Production Crosses 24500 Units: New Milestone Achieved - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+