ರಾಯಲ್ ಎನ್‍ಫೀಲ್ಡ್ ಪ್ರಿಯರಿಗೆ ಸಿಹಿಸುದ್ದಿ - ಹೊಸ ಅಪ್ಡೇಟ್‍ನೊಂದಿಗೆ ಬರಲಿದೆ ಬುಲೆಟ್ 350 ಬೈಕ್
ತನ್ನ ಕ್ಲಾಸಿಕ್ ವಿನ್ಯಾಸ ಮತ್ತು ಅಧಿಕ ಎಂಜಿನ್‍ನಿಂದ ಯುವ ಸಮುದಾಯವನ್ನು ಸೆಳೆದುಕೊಳ್ಳುತ್ತಿರುವ ದೇಶಿಯ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ತಮ್ಮ ಜನಪ್ರಿಯ ಬುಲೆಟ್ 350 ಬೈಕ್ ಅನ್ನು ಹೊಸ ಅಪ್ಡೇಟ್‍ನೊಂದಿಗೆ ಮತ್ತೆ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆ ಮಾಡಲಿದೆ.

ಕೆಲವು ದಿನಗಳ ಹಿಂದಷ್ಟೆ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಸೌಲಭ್ಯಗಳನ್ನು ನೀಡುವುದರ ಸಲುವಾಗಿ ಹಿಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಅನು ಅಳವಡಿಸಲಾಗಿದ್ದು, ಇದೀಗ ಸಂಸ್ಥೆಯು ಮತ್ತಷ್ಟು ಸುರಕ್ಷತೆಯನ್ನು ಮತ್ತು ಜಾರಿಯಾಗಲಿರುವ ಹೊಸ ಕಾಯ್ದೆಯ ಅನುಸಾರ ಡ್ಯುಯಲ್ ಚಾನೆಲ್ ಎಬಿಎಸ್ ಅಳವಡಿಸಲಿದೆ ಎನ್ನಲಾಗಿದೆ.

ಹೊಸ ಕಾಯಿದೆಯ ಪ್ರಕಾರ 2020ರ ಏಪ್ರಿಲ್ 1 ರಿಂದ 125ಸಿಸಿಗಿಂತ ಮೇಲ್ಪಟ್ಟ ದ್ವಿಚಕ್ರ ವಾಹನಗಳು ಸಿಂಗಲ್ ಚಾನೆಲ್ ಎಬಿಎಸ್ ಮತ್ತು 125ಸಿಸಿ ಗಿಂತಾ ಕಡಿಮೆ ಸಾಮರ್ಥ್ಯವಿರುವ ವಾಹನಗಳು ಕಾಂಬಿ ಬ್ರೇಕಿಂಗ್ ಸಿಸ್ಟಂ ಕಡ್ಡಾಯವಾಗಿ ಪಡೆದಿರಬೇಕಾಗಿದೆ.

ಸುರಕ್ಷಾ ಸಾಧನಗಳ ಸಲುವಾಗಿ ಈ ಹಿಂದೆಯೆ ಹಿಂಬದಿಯಲ್ಲಿ ಮತ್ತು ಮುಂಬದಿಯಲ್ಲಿ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದ್ದ ರಾಯಲ್ ಎನ್‍ಫೀಲ್ದ್ ಬುಲೆಟ್ 350 ಬೈಕ್, ಇದೀಗ ಎಬಿಎಸ್ ಅನ್ನು ಅಳವಡಿಸುವ ಯೋಜನೆಯು ರಾಯಲ್ ಎನ್‍ಫೀಲ್ಡ್ ಬೈಕ್ ಪ್ರಿಯರಿಗೆ ಹೆಚ್ಚು ಅನುಕೂಲಕರವಾಗಲಿದೆ.

ಎಂಜಿನ್ ಸಾಮರ್ಥ್ಯ
ಹೊಸ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್ 346ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 19.8ಬಿಹೆಚ್‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಅಬ್ಸಾರ್ಬರ್‍ಗಳನ್ನು ಅಳವಡಿಸಲಾಗಿದ್ದು, 19 ಇಂಚಿನ ಸ್ಪೋಕ್ ವ್ಹೀಲ್ಸ್ ಹಾಗು ಸಿಯಾಟ್ ಟೈರ್‍ಗಳನ್ನು ನೀಡಲಾಗಿದೆ.

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್‍ನ ಮುಂಭಾಗದಲ್ಲಿ 280ಎಮ್ಎಮ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್ ಸ್ಟಾಂಡರ್ಡ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಎಂಬ ಎರಡು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಸ್ಟ್ಯಾಂಡರ್ಡ್ ಮಾಡೆಲ್ ಕಪ್ಪು ಬಣ್ಣವನ್ನು ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ವೇರಿಯಂಟ್ ಬೈಕ್‍ಗಳು ಸಿಲ್ವರ್ ಮತ್ತು ರೆಡ್ ಎಂಬ ಎರಡು ಹೊಸ ಬಣ್ಣಗಳಲ್ಲಿ ದೊರೆಯಲಿದೆ.

ರಾಯಲ್ ಎನ್‍ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ದಿನಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈ ಸಂಸ್ಥೆಯ ಕ್ಲಾಸಿಕ್ 350, ಬುಲೆಟ್ 350 ಮತ್ತು ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳ್ಳುತ್ತಿದೆ. ಆದರೆ ಇದೀಗ ಜಾವಾ ಮೋಟಾರ್‍ಸೈಕಲ್‍ಗಳು ಕಡಿಮೆ ಬೆಲೆಯಲ್ಲಿ ಸುಮಾರು 4 ಬೈಕ್‍ಗಳನ್ನು ಬಿಡುಗಡೆಗೊಳಿಸಲಿದ್ದು, ಇದರಿಂದ ಜಾವಾ ಸಂಸ್ಥೆಗೆ ಪೈಪೋಟಿ ನೀಡಲು ಸಿದ್ಧವಾಗಿದೆ.

ಈಗಾಗಲೆ ಹೊಸ ಬುಲೆಟ್ ಬೈಕ್‍ಗಳಿಗಾಗಿ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ನಿಮ್ಮ ಹತ್ತಿರದ ಡೀಲರ್‍ಗಳ ಬಳಿ ರೂ.1000 ಸಾವಿರವನ್ನು ನೀಡಿ ಬುಕ್ಕಿಂಗ್ ಮಾದಿಕೊಳ್ಳಬಹುದಾಗಿದ್ದು, ಇದೇ ತಿಂಗಳ 19ರಂದು ಹೊಸ ಬೈಕ್‍ಗಳು ಬಿಡುಗಡೆಯಾಗಲಿದೆ ಮತ್ತು 1.5 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿರಲಿದೆ.


Click it and Unblock the Notifications








