ಬಿಡುಗಡೆಯಾದ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 500 ಬೈಕ್

ಕ್ಲಾಸಿಕ ಶೈಲಿಯ ಬೈಕ್ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ಕೇಂದ್ರ ಸರ್ಕಾರದ ಹೊಸ ಆದೇಶದ ಅನುಸಾರ ತಮ್ಮ ಬೈಕ್‍ಗಳಲ್ಲಿ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸಲು ಮುಂದಾಗಿದ್ದು, ಇದೀಗ ತಮ್ಮ ಬೈಕ್‍ಗಳಲ್ಲಿ ಒಂದಾದ ಬುಲೆಟ್ 500 ಬೈಕಿಗು ಸಹ ಎಬಿಎಸ್ ಅನ್ನು ನೀಡಿ ಬಿಡುಗಡೆಗೊಳಿಸಿದೆ.

ಬಿಡುಗಡೆಯಾದ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 500 ಬೈಕ್

ಕಾರ್‍‍ಟಾಕ್ ಮಾಹಿತಿ ಪ್ರಕಾರ ಹೊಸದಾಗಿ ಬಿಡುಗಡೆಗೊಂಡ ಎಬಿಎಸ್ ಆಧಾರಿತ ರಾಯಲ್ ಎನ್‍ಫೀಲ್ದ್ ಬುಲೆಟ್ 500 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1,86 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ಹೊಸ ಕಾಯಿದೆಯ ಪ್ರಕಾರ 2020ರ ಏಪ್ರಿಲ್,1 ರಿಂದ 125ಸಿಸಿಗಿಂತಾ ಮೇಲ್ಪಟ್ಟ ದ್ವಿಚಕ್ರ ವಾಹನಗಳು ಸಿಂಗಲ್ ಚಾನಲ್ ಎಬಿಎಸ್ ಮತ್ತು 125ಸಿಸಿ ಗಿಂತಾ ಕಡಿಮೆ ಸಾಮರ್ಥ್ಯವಿರುವ ವಾಹನಗಳು ಕಾಂಬಿ ಬ್ರೇಕಿಂಗ್ ಸಿಸ್ಟಂ ಕಡ್ಡಾಯವಾಗಿ ಪಡೆದಿರಬೇಕಾಗಿದೆ.

ಬಿಡುಗಡೆಯಾದ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 500 ಬೈಕ್

ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಪಡೆದ ರಾಯಲ್ ಎನ್‍ಫೀಲ್ಡ್ 500 ಬೈಕ್ ಸಾಧರಣ ಬೈಕ್‍ಗಿಂತಾ ರೂ. 14,000 ಬೆಲೆಯಲ್ಲಿ ಹೆಚ್ಚಿರಲಿದ್ದು, ಸಾಧಾರಣ ರಾಯಲ್ ಎನ್‍ಫೀಲ್ಡ್ 500 ಬೈಕ್ ಎಕ್ಸ್ ಶೋರಂ ಪ್ರಕಾರ ರೂ. 1.73 ಲಕ್ಷಕ್ಕೆ ನಿಗದಿಮಾಡಲಾಗಿದೆ.

ಬಿಡುಗಡೆಯಾದ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 500 ಬೈಕ್

ಮೇಲೆ ಹೇಳಿರುವ ಹಾಗೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಎಲ್ಲಾ ಬೈಕ್‍ಗಳಿಗು ಎಬಿಎಸ್ ಅನ್ನು ಅಳವಡಿಸುವ ಕಾರ್ಯದಲ್ಲಿದ್ದು, ಪ್ರಸ್ಥುತ ರಾಯಲ್ ಎನ್‍ಫೀಲ್ಡ್ ಬುಲೆಟ್ ಮಾದರಿಗಳಾದ ಬುಲೆಟ್ 350 ಮತ್ತು 350ಇಎಸ್ ಬೈಕ್‍ಗಳಿಗೂ ಸಹ ಎಬಿಎಸ್ ಅನ್ನು ನೀಡಲಾಗಿದೆ.

ಬಿಡುಗಡೆಯಾದ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 500 ಬೈಕ್

ಎಂಜಿನ್ ಸಾಮರ್ಥ್ಯ

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್‍‍ಗಳು 499ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 27.2 ಬಿಹೆಚ್‍‍ಪಿ ಮತ್ತು 41.3 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯಾದ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 500 ಬೈಕ್

ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಬೈಕ್‍ನ ಮುಂಭಾಗದಲ್ಲಿ 35ಎಮ್ಎಮ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್‍‍ಗಳನ್ನು ನೀಡಲಾಗಿದೆ.

ಬಿಡುಗಡೆಯಾದ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 500 ಬೈಕ್

ಕಡ್ಡಾಯವಾಗಿ ಎಬಿಎಸ್ ಸ್ವೀಕರಿಸಿದ ಎಲ್ಲಾ ರಾಯಲ್ ಎನ್‍ಫೀಲ್ಡ್ ದ್ವಿಚಕ್ರ ವಾಹನಗಳು ಡ್ಯುಯಲ್-ಚಾನೆಲ್ ಆವೃತ್ತಿಯನ್ನು ಪಡೆಯುತ್ತವೆ. ಡ್ಯುಯಲ್-ಚಾನೆಲ್ ಎಬಿಎಸ್ ಬೈಕ್ ಮುಂಭಾಗದ ಮತ್ತು ಹಿಂಭಾಗದ ಚಕ್ರಗಳು ಎರಡೂ ಭಾರಿ ಬ್ರೇಕಿಂಗ್ ಅಡಿಯಲ್ಲಿ ಚಕ್ರಗಳು ಲಾಕ್ ಮಾಡುತ್ತಿಲ್ಲವೆಂದು ಖಚಿತಪಡಿಸುತ್ತದೆ ಮತ್ತು ಇದು ಬೈಕುಗಳನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ.

ಬಿಡುಗಡೆಯಾದ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 500 ಬೈಕ್

ರಾಯಲ್ ಎನ್‍ಫೀಲ್ಡ್ ದ್ವಿಚಕ್ರ ವಾಹನಗಳು ತುಂಬಾ ಭಾರೀ ಮತ್ತು ಚಕ್ರಗಳು ಎರಡೂ ಡಿಸ್ಕ್ ಬ್ರೇಕ್ ಸಹ, ಗಾಡಿಯನ್ನು ನಿಲ್ಲಿಸಲು ಉತ್ತಮ ಪ್ರಮಾಣವನ್ನು ತೆಗೆದುಕೊಳ್ಳುತ್ತದೆ. ಎಬಿಎಸ್ ಟೆಕ್ನಾಲಜಿಯ ಸೇರ್ಪಡೆಗಳು ದ್ವಿಚಕ್ರ ವಾಹನಗಳನ್ನು ಹೆದ್ದಾರಿಯಲ್ಲಿ ಹೆಚ್ಚಿನ ವೇಗದಲ್ಲಿ ನಿಧಾನಗೊಳಿಸಲು ಸಹಕರಿಸುತ್ತದೆ.

ಬಿಡುಗಡೆಯಾದ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 500 ಬೈಕ್

ರಾಯಲ್ ಎನ್ಫೀಲ್ಡ್ ಅನೇಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎಬಿಎಸ್ ಅನ್ನು ದೀರ್ಘಕಾಲದವರೆಗೆ ಪ್ರಸ್ತುತಪಡಿಸುತ್ತಿದೆ. ಅದಾಗ್ಯೂ, ಭಾರತದ ಸುರಕ್ಷಿತ ಎಬಿಎಸ್ ಬೈಕುಗಳ ಬಿಡುಗಡೆ ಬೆಲೆ-ಸೂಕ್ಷ್ಮ ಭಾರತೀಯ ಮಾರುಕಟ್ಟೆ ವಿಳಂಬವಾಗಿದೆ ಎನ್ನಲಾಗಿದೆ. ಆದರೆ ಈಗ ಭಾರತದ ಸುಪ್ರೀಂ ಕೋರ್ಟ್ ಇದು ಕಡ್ಡಾಯವಾಗಿ ಮಾಡಲಾಗಿದ್ದು, ಎಲ್ಲಾ ದ್ವಿಚಕ್ರಗಳ ಬೆಲೆಗಳು ಮುಂಬರುವ ಕಾಲದಲ್ಲಿ ಇದೇ ರೀತಿಯಲ್ಲಿ ಹೆಚ್ಚಾಗುತ್ತವೆ.

Article Published On: Thursday, January 10, 2019, 19:00 [IST]
English summary
Royal Enfield Bullet 500 ABS launched in India. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+