ಡ್ಯುಯಲ್ ಚಾನಲ್ ಎಬಿಎಸ್‍ನೊಂದಿಗೆ ಬಿಡುಗಡೆಯಾದ ಆರ್‍ಇ ಕ್ಲಾಸಿಕ್ 350
ಕ್ಲಾಸಿಕ್ ಮತ್ತು ಅಧಿಕ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ತಮ್ಮ ಜನಪ್ರಿಯ ಕ್ಲಾಸಿಕ್ 350 ಬೈಕ್‍ಗೆ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಿ ಬಿಡುಗಡೆಗೊಳಿಸಿದೆ. ಡ್ಯುಯಲ್ ಚಾನಲ್ ಎಬಿಎಸ್ ಆಧಾರಿತ ರಾಯಲ್ ಎನ್‍ಫೀಲ್ದ್ ಕ್ಲಾಸಿಕ್ 350 ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.53 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಎಬಿಎಸ್ ರಹಿತ ಸಾಧಾರಣ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳು ರೂ. 1.47 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಎಪ್ರಿಲ್ 1, 2019 ರಿಂದ ಜಾರಿಯಾಗಲಿರುವ ಹೊಸ ಸುರಕ್ಷಾ ಕಾಯ್ದೆಯ ಅನುಸಾರ 125ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳು ಎಬಿಎಸ್ ಅನ್ನು ಹೊಂದಿರಲೇಬೇಕಿದ್ದು, ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಉತ್ಪಾದನೆಗಳಲ್ಲಿರುವ ಎಲ್ಲಾ ಬೈಕ್‍ಗಳಿಗೆ ಎಬಿಎಸ್ ಟೆಕ್ನಾಲಜಿಯನ್ನು ಅಳವಡಿಸುತ್ತಿದೆ.

ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಹೊರತು ಪಡಿಸಿ ಬೈಕಿನ ತಾಂತ್ರಿಕತೆಯಲ್ಲಾಗಲಿ ಅಥವಾ ವಿನ್ಯಾಸದಲ್ಲಾಗಲಿ ಯಾವುದೇ ಬದಲಾವಣೆಗಳನ್ನು ಪಡೆದಿರುವುದಿಲ್ಲ. ಈ ಮೂಲಕ ಡ್ಯುಯಲ್ ಚಾನಲ್ ಎಬಿಎಸ್ ಅಧಾರಿತ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಖರೀದೀಸಲು ಬಯಸುವ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ರಾಯಲ್ ಎನ್‍ಫೀಲ್ಡ್ ಡೀಲರ್ ಅನ್ನು ಸಂಪರ್ಕಿಸಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಎಬಿಎಸ್ ಆಧಾರಿತ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ 349ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 19.8 ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಳೆದ ವರ್ಷವಷ್ಟೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಕ್ಲಾಸಿಕ್ 350 ಬೈಕಿಗೆ ರಿಯರ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿ ಬಿಡುಗಡೆಗೊಳಿಸಿತ್ತು. ರೆಟ್ರೋ ಸ್ಟೈಲ್ ಹೊಂದಿರುವ ಈ ಬೈಕ್ ಮುಂಭಾಗದಲ್ಲಿ 280ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಇವುಗಳ ಜೊತೆಗೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕಿನ ಮುಂಭಾಗದಲ್ಲಿ ಕನ್ವೆಂಷನಲ್ ಟೆಲಿಸ್ಕೋಪಿಕ್ ಪೋರ್ಕ್ಸ್ ಹಾಗು ಹಿಂಭಾಗದಲ್ಲಿ ಡ್ಯುಯಲ್ ಚಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. ಹಾಗೆಯೆ ಮೇಲೆ ಹೇಳಿರುವ ಹಾಗೆ ರೈಡರ್‍ಗಳ ಸುರಕ್ಷತೆಯ ಸಲುವಾಗಿ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ನೀಡಲಾಗಿದೆ.

ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳು ಸಂಸ್ಥೆಯಲ್ಲಿನ ಅತಿ ಹೆಚ್ಚು ಮಾರಾಟವನ್ನು ಪಡೆಯುತ್ತಿರುವ ಬೈಕ್ ಆಗಿದ್ದು, ಈ ಬೈಕ್ ಸಿಲ್ವರ್, ಆಶ್, ಕ್ಲಾಸಿಕ್ ಬ್ಲಾಕ್, ಲಗೂನ್ ಬ್ಲೂ ಮತ್ತು ಕ್ಲಾಸಿಕ್ ಚೆಸ್ಟಂಟ್ ರೆಡ್ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಎಲ್ಲಾ ವಾಹನಗಳಿಗು ಎಬಿಎಸ್ ಅನ್ನು ಅಳವಡಿಸುವ ಕಾರ್ಯದಲ್ಲಿದೆ. ಮೊದಲಿಗೆ ಸಂಸ್ಥೆಯಲ್ಲಿನ ಸಿಗ್ನಲ್ಸ್ ಎಡಿಷನ್ ಆನಂತರ 650 ಟ್ವಿನ್ ಬೈಕ್‍ಗಳಲ್ಲಿ ಎಬಿಎಸ್ ಅನ್ನು ಅಳವಡಿಸಲಾಗಿದ್ದು, ಇದೀಗ ತಮ್ಮ 350 ಮತ್ತು 500 ಹಾಗು ಬುಲೆಟ್ ಸೇರಿದಂತೆ ಎಲ್ಲಾ ವಾಹನಗಳಿಗು ಎಬಿಎಸ್ ಅನ್ನು ನೀಡಲು ಮುಂದಾಗಿದೆ.

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ
ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ನ ಕ್ಲಾಸಿಕ್ 350 ಬೈಕ್‍ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಕಳೆದ ಏಳು ತಿಂಗಳಿನ ಮಾರಾಟದಲ್ಲಿ ಹೆಚ್ಚಿನ ಸಂಖ್ಯೆಯನ್ನು ನೀಡುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಎಬಿಎಸ್ ಆಧಾರಿತ ಆರ್‍ಇ 350 ಬೈಕ್‍ಗಳು ಮಾರುಕಟ್ಟೆಯಲ್ಲಿರುವ ಜಾವಾ, ಜಾವಾ 42, ಬಜಾಜ್ ಡಾಮಿನಾರ್ 400 ಬೈಕ್‍ಗಳಿಗೆ ಪೈಪೋಟಿ ನೀಡುತ್ತಿದೆ.


Click it and Unblock the Notifications








