ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಸಾರ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕ್ ಮಾದರಿಗಳ ಬಿಡುಗಡೆಗೆ ಭರ್ಜರಿ ಸಿದ್ದತೆ ನಡೆಸಿದ್ದು, ಬಿಎಸ್-4 ಬೈಕ್ ಮಾದರಿಗಳ ಮೇಲೆ ಹಲವು ಆಫರ್‌ಗಳನ್ನು ಘೋಷಣೆ ಮಾಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಆಯ್ದ ಬೈಕ್ ಮಾದರಿಗಳ ಖರೀದಿಯ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪ್ರತಿಸ್ಪರ್ಧಿ ಬೈಕ್ ಮಾದರಿಗಳಿಗೆ ಪೈಪೋಟಿ ನೀಡುತ್ತಿದ್ದು, 4 ವರ್ಷಗಳ ವಾರಂಟಿ ಪ್ಯಾಕೇಜ್ ಘೋಷಣೆ ಮಾಡಿರುವುದು ಕ್ಲಾಸಿಕ್ ಬೈಕ್ ಖರೀದಿದಾರರ ಆಕರ್ಷಣೆಗೆ ಕಾರಣವಾಗಿದೆ. ರೈಡ್ ಶ್ಯೂರ್ ವಾರಂಟಿ ಪ್ಯಾಕೇಜ್‌ನಲ್ಲಿ ಬೈಕ್ ಮಾಲೀಕರಿಗೆ 4 ವರ್ಷಗಳ ಖಾತ್ರಿ ನೀಡಲಾಗುತ್ತಿದ್ದು, ಬಿಡಿಭಾಗಳ ಮೇಲೂ ಗರಿಷ್ಠ ವಾರಂಟಿ ದೊರೆಲಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ರೈಡ್ ಶ್ಯೂರ್ ಎಕ್ಸ್ಟೆಂಡೆಡ್ ವಾರಂಟಿಯಲ್ಲಿ ಒಟ್ಟು ಮೂರು ವಿಧಗಳಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ರೈಡ್ ಶ್ಯೂರ್ ಬೇಸಿಕ್, ರೈಡ್ ಶ್ಯೂರ್ ಬೇಸಿಕ್ ಪ್ಲಸ್ ಮತ್ತು ರೈಡ್ ಶ್ಯೂರ್ ಬೇಸಿಕ್ ಪ್ರೀಮಿಯಂ ಖರೀದಿಸಬಹುದಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಹೊಸದಾಗಿ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವೇ ಈ ಎಕ್ಸ್ಟೆಂಡೆಡ್ ವಾರಂಟಿ ಖರೀದಿಗೆ ಲಭ್ಯವಿದ್ದು, ಹೊಸ ಬೈಕ್ ಖರೀದಿ ಮಾಡಿ 1 ತಿಂಗಳೊಳಗಿನ ಬೈಕ್ ಮಾಲೀಕರಿಗೆ ಈ ಆಫರ್ ಖರೀದಿ ಮಾಡಬಹುದಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಬೆಂಗಳೂರಿನ ಬಹುತೇಕ ಡೀಲರ್ಸ್‌ಗಳಲ್ಲಿ ಹೊಸ ಎಕ್ಸ್ಟೆಂಡೆಡ್ ವಾರಂಟಿ ಆಫರ್ ಲಭ್ಯವಿದ್ದು, ರೈಡ್ ಶ್ಯೂರ್ ಬೇಸಿಕ್ ವಾರಂಟಿಗೆ ರೂ.2,150, ರೈಡ್ ಶ್ಯೂರ್ ಬೇಸಿಕ್ ಪ್ಲಸ್ ವಾರಂಟಿಗೆ ರೂ. 3,100 ಮತ್ತು ರೈಡ್ ಶ್ಯೂರ್ ಬೇಸಿಕ್ ಪ್ರೀಮಿಯಂ ವಾರಂಟಿಗೆ ರೂ. 5,300 ದರ ನಿಗದಿ ಮಾಡಲಾಗಿದೆ. ಕಂಪನಿ ನೀಡುವ 2 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ ಇದನ್ನು ಹೆಚ್ಚುವರಿಯಾಗಿ ಖರೀದಿ ಮಾಡಬಹುದಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಸ್ಟ್ಯಾಂಡರ್ಡ್ ವಾರಂಟಿಯಲ್ಲಿ 2 ವರ್ಷ ಅಥವಾ 30 ಸಾವಿರ ಕಿ.ಮೀ ತನಕ ವಾರಂಟಿ ನೀಡುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದೀಗ ರೈಡ್ ಶ್ಯೂರ್ ವಾರಂಟಿ ಅಡಿಯಲ್ಲಿ 4 ವರ್ಷ ಅಥವಾ 50 ಸಾವಿರ ಕಿ.ಮೀ ಮೇಲೆ ವಾರಂಟಿ ನೀಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ರೈಡ್ ಶ್ಯೂರ್ ಬೇಸಿಕ್‌‌ನಲ್ಲಿ ಸಾಮಾನ್ಯ ವಾರಂಟಿ ಸಿಗಲಿದ್ದು, ರೈಡ್ ಶ್ಯೂರ್ ಬೇಸಿಕ್ ಪ್ಲಸ್‌ನಲ್ಲಿ ವಾರಂಟಿ ಜೊತೆ ರೋಡ್ ಸೈಡ್ ಅಸಿಸ್ಟ್ ಮತ್ತು ರೈಡ್ ಶ್ಯೂರ್ ಬೇಸಿಕ್ ಪ್ರೀಮಿಯಂನಲ್ಲಿ ವಾರಂಟಿ ಜೊತೆ ಕೇಬಲ್‌ಗಳು, ಬ್ರೇಕ್ ಪೆಡಲ್, ಬ್ರೇಕ್ ಶೂಸ್ ಮೇಲೂ 4 ವರ್ಷಗಳ ಖಾತ್ರಿ ಸಿಗಲಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಇನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು 2020ರ ಮಾರ್ಚ್ ಅಂತ್ಯದಲ್ಲಿ ಬಿಎಸ್-6 ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದ್ದು, ಬಿಎಸ್-6 ಬೈಕ್‌ಗಳ ಜೊತೆಗೆ ಎಲೆಕ್ಟ್ರಿಕ್ ಬೈಕ್ ಮಾದರಿಗಳು ಸಹ ಮುಂದಿನ ಆರು ತಿಂಗಳ ಅವಧಿಯಲ್ಲಿ ರಸ್ತೆಗಿಳಿಯಲಿವೆಯೆಂತೆ.

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಹೊಸ ಯೋಜನೆಗಳಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಉತ್ಪನ್ನಗಳ ಅಭಿವೃದ್ದಿಯು ಪ್ರಮುಖ ಆಕರ್ಷಣೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೈಕ್ ಮಾದರಿಗಳ ಎಲೆಕ್ಟ್ರಿಕ್ ವರ್ಷನ್ ಜೊತೆ ಜೊತೆಗೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ಮೇಲೆ ಹೊಸ ವಾರಂಟಿ ಪ್ಯಾಕೇಜ್ ಘೋಷಣೆ

ಪ್ರೀಮಿಯಂ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಬೈಕ್ ಮಾರಾಟವನ್ನು ಹೆಚ್ಚಿಸುವ ಸಂಬಂಧ ಮಾರಾಟ ವಿಭಾಗದಲ್ಲಿ ಬದಲಾವಣೆಗೆ ನಿರ್ಧರಿಸಿದೆ.

More from DriveSpark

Article Published On: Friday, December 27, 2019, 8:45 [IST]
English summary
Royal Enfield is offering an extended warranty in the name of Ride Sure program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+