ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ಹೊಸ ವಾಹನ ಖರೀದಿಸಲು ಮತ್ತು ಅದಕ್ಕೆ ಬೇಕಾದ ಹಣ ಹೊಂದಿಸುವ ಕಷ್ಟ ಗ್ರಾಹಕರಿಗೆ ಮಾತ್ರ ಗೊತ್ತು. ಆದ್ರೆ ಖರೀದಿಸಿದ ವಾಹನವನ್ನು ಎಷ್ಟು ಜೋಪಾನವಾಗಿ ಇರಿಸಿದರು ದೇಶದ ಪ್ರಮುಖ ನಗರಗಳಲ್ಲಿ ಖದೀಮರ ಚಲಾಕಿತನದಿಂದ ವಾಹನಗಳು ಮತ್ತು ಅದರಲ್ಲಿರುವ ಬಿಡಿಭಾಗಗಳ ಕಳ್ಳತನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ಮನೆ ಹೊರಗೆ ಅಥವಾ ಪಾರ್ಕಿಂಗ್ ಜಾಗಗಳಲ್ಲಿ ಮಾತ್ರ ಕದಿಯುವ ವಿಚಾರವನ್ನು ನಾವು ಹಲವಾರು ಕಡೆ ಕೇಳಿದರು, ಇನ್ನು ಕೆಲವು ಕಡೆ ಸರ್ವೀಸ್‍‍ಗಾಗಿ ನೀಡಿದ ವಾಹನವನ್ನ ಖದ್ದಿರುವ ವಿಚಾರದ ಬಗ್ಗೆ ಕೂಡಾ ನಿಮಗೆ ಮಾಹಿತಿಯನ್ನ ನೀಡಿದ್ದೇವೆ. ದಿನಕ್ಕೆ ಹಲವಾರು ವಾಹನಗಳು ಕಳ್ಳತನವಾಗುತ್ತಿರುವ ಪ್ರಕರಣಗಳನ್ನು ಕೇಳಿ ಪೊಲೀಸರಿಗೂ ತಲೆನೋವು ಶುರುವಾಗಿದೆ.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ಮತ್ತು ಕದ್ದ ವಾಹನಗಳನ್ನ ಖದೀಮರಿಂದ ಹಿಂಪಡೆಯಲು ಪೊಲೀಸರು ಹಲವಾರು ಸಾಹಸಗಳನ್ನು ಮತ್ತು ಎಚ್ಚರಿಕೆಯಿಂದ ತನಿಖೆಗಳನ್ನು ನಡೆಸುತ್ತಿದ್ದಾರೆ. ಇಂತಹ ಘಟನೆಯೆ ಮಹಾರಾಷ್ಟ್ರದ ಥಾಣೆಯಲ್ಲಿ ಕೂಡಾ ನಡೆದಿದ್ದು, ಅಲ್ಲಿನ ಪೊಲೀಸರು ಮೂರು ತಿಂಗಳಿನಲ್ಲಿ ಕಳ್ಳತನವಾದ ಸುಮಾರು 230 ದ್ವಿಚಕ್ರ ವಾಹನಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ಹೌದು, ಥಾಣೆ ನಗರದ ಕ್ರೈಂ ಬ್ರಾಂಚ್ ಪೊಲೀಸರು 156 ಖದೀಮರಿಂದ ಕಳ್ಳತನವಾದ ಸುಮಾರು 230 ಮೋಟಾರ್‍‍ಸೈಕಲ್ ಮತ್ತು ಸ್ಕೂಟರ್‍‍ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಇಷ್ಟು ವಾಹನಗಳಲ್ಲಿ ಖದೀಮರು ಮೂರು ತಿಂಗಳಿನಲ್ಲಿ ಕದ್ದಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ಥಾಣೆ ನಗರದ ಸುತ್ತಮುತ್ತಲಿನ ಬಿವಾಂಡಿ, ಅಂಬರ್ನಾಥ್ ಮತ್ತು ಕಲ್ಯಾಣ್ ಎಂಬ ಉಪನಗರಗಳಲ್ಲಿ ಹೆಚ್ಚಿದ ಬೈಕು ಕಳವುಗಳ ಸಂಖ್ಯೆಯಲ್ಲಿ ಈ ಪ್ರಯತ್ನವನ್ನು ಮಾಡಲಾಗಿತ್ತು. ಇದನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸರು ಒಂದು ಡ್ರೈವ್ ಅನ್ನು ಪ್ರಾರಂಭಿಸಲಾಯಿತು. ಮತ್ತು ಥಾಣೆ ಪೊಲೀಸರು ಚಾರ್ಜ್‍‍ಶೀಟ್‍ನಲ್ಲಿದ್ದ ಖದೀಮರ ಮೇಲೆ ಕಣ್ಣಿಟ್ಟಿದ್ದರು ಹಾಗು ಕ್ರಿಮಿನಲ್ ರೆಕಾರ್ಡ್ ಹೊಂದಿರುವ ವ್ಯಕ್ತಿಗಳನ್ನು ಕೂಡ ಪೊಲೀಸರು ವಿಚಾರಿಸಿದರು.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ಹೀಗೆ ನಡೆಸಿದ ಡ್ರೈವ್‍ನಲ್ಲಿ ಧನಾತ್ಮಕ ಫಲಿತಾಂಶಗಳಿಗೆ ಕಾರಣವಾದವು, ಜೊತೆಗೆ 230 ಕಳ್ಳ ದ್ವಿಚಕ್ರ ವಾಹನಗಳನ್ನು ಮತ್ತು 156 ಕಳ್ಳರನ್ನು ಬಂಧಿಸಿದ್ದಾರೆ ಎಂಬ ಮಾಹಿತಿಯು ಎಂದು ಹೆಚ್ಚುವರಿ ಪೊಲೀಸ್ ಕಮೀಷನರ್ ಪ್ರವೀಣ್ ಪವಾರ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿದೆ.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ಥಾಣೆ ನಗರದಲ್ಲಿ ಹೆಚ್ಚುತ್ತಿದ್ದ ದ್ವಿಚಕ್ರ ವಾಹನಗಳ ಚೋರಿ ಪ್ರಕರಣಗಳನ್ನು ಕಂಡು ಐಪಿಎಸ್ ಅಧಿಕಾರು ವಿವೇಕ್ ಫಾಂಸಾಲ್ಕರ್ ಅವರು ಜುಲೈ ತಿಂಗಳಿನಲ್ಲಿ ಪಿಲೋಸ್ ಕಮಿಷನರ್ ಆಗಿ ನೇಮಕವಾದ ಬಳಿಕ ದ್ವಿಚಕ್ರ ವಾಹನ ಕಳ್ಳಾತನದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದು, ಪೊಲೀಸ್ ಅಧಿಕಾರಿಗಳಿಗೆ ವಾಹನಗಳ್ಳರನ್ನು ಟ್ರ್ಯಾಕ್ ಮಾಡಿ ಎಂದು ಕೂಡಾ ಅವರು ಆದೇಶಿಸಿದರು.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ದ್ವಿಚಕ್ರ ವಾಹನ ಕಳ್ಳತನದ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಕಳ್ಳರು ಮಹಾರಾಷ್ಟ್ರಾದ ಗ್ರಾಮೀಣ ಪ್ರದೇಶಗಳಲ್ಲಿ ಕದ್ದ ಬೈಕ್‍ಗಳನ್ನು ಶೇಕಡ 30ರಷ್ಟು ಕದಿಮೆ ಬೆಲೆಯಲ್ಲಿ ಮಾರಾಟ ಮಾಡುವುದಾಗಿ ಬಹಿರಂಗಗೊಳಿಸಿದ್ದಾರೆ.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ಇಷ್ಟೆ ಅಲ್ಲದೇ ಮಾರಾಟ ಮಾಡುವ ಮುನ್ನ ಕದ್ದ ದ್ವಿಚಕ್ರ ವಾಹನಗಳ ನಕಲು ನೋಂದಣಿ ಪತ್ರಗಳನ್ನು ತಯಾರಿಸಿಕೊಂಡು, ವಾಹನಗಳನ್ನು ಕೊಳ್ಳಲು ತುದಿಗಾಲಿನಲ್ಲಿ ನಿಂತ ಗ್ರಾಹಕರಿಗೆ ಟೋಪಿ ಹಾಕಿ, ಭಾರೀ ರಿಯಾತಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ಪಡೆಯಲು ಮಹಾರಾಷ್ಟ್ರ ಪೊಲೀಸರು ವೆಬ್‍‍ಸೈಟ್ ಅನ್ನು ಪ್ರಾರಂಭಿಸಿದ್ದು, ಕಳ್ಳತನವಾದ ಬೈಕ್‍ಗಳನ್ನು ಟ್ರ್ಯಾಕ್ ಮಾಡಲು ಈ ವೆಬ್‍‍ಸೈಟ್ ಸಹಾಯಕವಾಗಿದೆ. www.vahanchoritakrar.com ವೆಬ್‍ಸೈಟ್ ಮಾದರಿಯಲ್ಲೆ ಬೆಂಗಳೂರು ಮತ್ತು ದೆಹಲಿಯ ಪೊಲೀಸರು ಆರಂಭಿಸಿದ್ದಾರೆ.

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

ಇದು ಹೆಚ್ಚುತ್ತಿರುವ ವಾಹನ ಕಳವುಗಳ ಬಗ್ಗೆ ಒಂದು ಹದ್ದಿನ ಕಣ್ಣನ್ನು ಇರಿಸುತ್ತದೆ ಮತ್ತು ಅಂತಹ ದೂರುಗಳ ಜಗಳ ಮುಕ್ತ ನೋಂದಣಿ ಹೊಂದಿರುವ ಮಾಲೀಕರನ್ನು ಒದಗಿಸುತ್ತದೆ. ಈ ವಾಹನಗಳು ಸಾಮಾನ್ಯವಾಗಿ ಅಕ್ರಮ ಉದ್ದೇಶಗಳಿಗಾಗಿ ಅಪಹರಿಸಲ್ಪಡುತ್ತವೆ ಮತ್ತು ಈ ವೆಬ್‍ಸೈಟ್ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

Source: Rushlane

Most Read Articles

Kannada
English summary
Thane Police recover 230 stolen motorcycles and scooters – Arrest 156 thieves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X