ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಟಿವಿಎಸ್

ಟಿವಿಎಸ್ ಸಂಸ್ಥೆಯು ತನ್ನ ಸ್ಕೂಟರ್ ಮಾದರಿಯಾದ ಜೂಪಿಟರ್ ಗ್ರಾಂಡೆ ಆವೃತ್ತಿಯ ಮಾರಾಟವನ್ನು ಭಾರತದಲ್ಲಿ ಅಧಿಕೃತವಾಗಿ ಸ್ಥಗಿತಗೊಳಿಸಿದ್ದು, ಸ್ಪೆಷಲ್ ಎಡಿಷನ್‌ ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದ ಗ್ರಾಂಡೆ ಫೀಚರ್ಸ್‌ಗಳನ್ನು ಸಾಮಾನ್ಯ ಮಾದರಿಯಾದ ಜೂಪಿಟರ್ ಜೆಡ್ಎಕ್ಸ್‌ನಲ್ಲಿ ಮುಂದುವರಿಸಿದೆ.

ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಟಿವಿಎಸ್

ಸ್ಕೂಟರ್ ಮಾರಾಟದಲ್ಲಿ ಹೋಂಡಾ ನಂತರ ಎರಡನೇ ಸ್ಥಾನದಲ್ಲಿರುವ ಟಿವಿಎಸ್ ಸಂಸ್ಥೆಯು ಜೂಪಿಟರ್ ಜೆಡ್ಎಕ್ಸ್ ಹೊಸ ಆವೃತ್ತಿಯನ್ನು ಗ್ರಾಂಡೆ ಮಾದರಿಯಲ್ಲೇ ಬಿಡುಗಡೆ ಮಾಡಿದ್ದು, ಹೊಸ ಸುರಕ್ಷಾ ನಿಯಮಗಳಿಗಳಿಗೆ ಅನುಗುಣವಾಗಿ ಜೂಪಿಟರ್ ಜೆಡ್ಎಕ್ಸ್ ಮಾರುಕಟ್ಟೆ ಪ್ರವೇಶಿಸಿದೆ. ದೇಶಾದ್ಯಂತ ಹೊಸ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕಳೆದ ಏಪ್ರಿಲ್ 1ರಿಂದಲೇ ಕೇಂದ್ರ ಸರ್ಕಾರವು ದ್ವಿಚಕ್ರ ವಾಹನಗಳಲ್ಲಿ ಕೆಲವು ಕಡ್ಡಾಯ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಹೀಗಾಗಿ ಜೂಪಿಟರ್ ಜೆಡ್ಎಕ್ಸ್ ಕೂಡಾ ಹೊಸ ನಿಯಮಗಳಿಗೆ ಅನುಸಾರವಾಗಿಯೇ ಬಿಡುಗಡೆಗೊಂಡಿದೆ.

ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಟಿವಿಎಸ್

ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಜೂಪಿಟರ್ ಜೆಡ್ಎಕ್ಸ್ ಮಾದರಿಯನ್ನು ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಾಗಿದ್ದು, ಡ್ರಮ್ ಬ್ರೇಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 56,093 ಬೆಲೆ ಹೊಂದಿದ್ದರೆ ಡಿಸ್ಕ್ ಬ್ರೇಕ್ ಮಾದರಿಯು ರೂ.58,645 ಬೆಲೆ ಪಡೆದುಕೊಂಡಿದೆ.

ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಟಿವಿಎಸ್

ಹೊಸ ಸ್ಕೂಟರ್ ಆವೃತ್ತಿಯಲ್ಲಿ ಟಿವಿಎಸ್ ಸಂಸ್ಥೆಯು ತನ್ನದೇ ವಿಶೇಷ ತಂತ್ರಜ್ಞಾನ ಹೊಂದಿರುವ ಕಂಬೈನ್ಡ್ ಬ್ರೇಕಿಂಗ್ ತಂತ್ರಜ್ಞಾನವನ್ನು ಎರಡು ಮಾದರಿಯಲ್ಲೂ ಅಳವಡಿಸಲಾಗಿದ್ದು, ಇದು ಟಿವಿಎಸ್ ನಿರ್ಮಾಣದ ಎಲ್ಲ ಸ್ಕೂಟರ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಟಿವಿಎಸ್

ಇನ್ನು 2019 ಜೂಪಿಟರ್ ಜೆಡ್ಎಕ್ಸ್ ಮಾದರಿಯಲ್ಲಿ ಹೊಸದಾಗಿ ಎಲ್ಇಡಿ ಹೆಡ್‌ಲೈಟ್, ಡಿಜಿಟಲ್ ಅನಲಾಗ್ ಇನ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಹೊಸದಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮೊನೊಶಾಕ್ ಸಸ್ಷೆಷನ್ ನೀಡಲಾಗಿದೆ. ಈ ಹೊಸ ಸೌಲಭ್ಯಗಳನ್ನು ಈ ಹಿಂದೆಯೇ ಜೂಪಿಟರ್ ಗ್ರಾಂಡೆ ಆವೃತ್ತಿಯಲ್ಲಿ ಮಾತ್ರವೇ ನೀಡುತ್ತಿದ್ದ ಟಿವಿಎಸ್ ಸಂಸ್ಥೆಯು ಇದೀಗ ಗ್ರ್ಯಾಂಡೆ ಆವೃತ್ತಿಯನ್ನು ಸ್ಥಗಿತಗೊಳಿಸುವ ಮೂಲಕ ಜೂಪಿಟರ್ ಜೆಡ್ಎಕ್ಸ್ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.

ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಟಿವಿಎಸ್

ಆದ್ರೆ ಜೂಪಿಟರ್ ಗ್ರಾಂಡೆ ಆವೃತ್ತಿಯಲ್ಲಿ ನೀಡಲಾಗುತ್ತಿದ್ದ ಅಲಾಯ್ ಚಕ್ರಗಳ ಸೌಲಭ್ಯವನ್ನು ಹೊಸ ಜೂಪಿಟರ್ ಜೆಡ್ಎಕ್ಸ್‌ನಲ್ಲಿ ಬೆಲೆ ಕಡಿಮೆ ಮಾಡುವ ಉದ್ದೇಶದಿಂದ ಕೈಬಿಟ್ಟಿರುವ ಟಿವಿಎಸ್ ಸಂಸ್ಥೆಯು ಪ್ರೀಮಿಯಂ ಫೀಚರ್ಸ್‌ಗಳಿಂತ ಸುರಕ್ಷತೆಗೆ ಹೆಚ್ಚಿನ ಗಮನಹರಿಸಿದೆ

ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಟಿವಿಎಸ್

ಎಂಜಿನ್ ಸಾಮರ್ಥ್ಯ

ಜೂಪಿಟರ್ ಜೆಡ್ಎಕ್ಸ್ ಮಾದರಿಯು 109.7 ಸಿಸಿ ಸಾಮಾರ್ಥ್ಯದ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 8-ಬಿಎಚ್‌ಪಿ ಮತ್ತು 8.4-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಟಿವಿಎಸ್

ಖರೀದಿಗೆ ಲಭ್ಯವಿರುವ ಬಣ್ಣಗಳು

ಟಿವಿಎಸ್ ಸಂಸ್ಥೆಯು ಜೂಪಿಟರ್ ಜೆಡ್ಎಕ್ಸ್ ಮಾದರಿಯನ್ನು ಸ್ಟಾರ್‌ಲೈಟ್ ಬ್ಲೂ ಮತ್ತು ರಾಯಲ್ ವೈನ್ ಬಣ್ಣಗಳಲ್ಲಿ ಬಿಡುಗಡೆ ಮಾಡಿದ್ದು, ಈ ಹಿಂದಿನಂತೆಯೇ ಕೆಲವು ಫೀಚರ್ಸ್‌ಗಳನ್ನು ಹೊಸ ಮಾದರಿಯಲ್ಲೂ ಮುಂದುವರಿಸಿದೆ.

MOST READ: ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..!

ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಟಿವಿಎಸ್

ಈ ಮೂಲಕ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹೋಂಡಾ ಆಕ್ಟಿವಾ 5ಜಿ ಮಾದರಿಗೆ ಪೈಪೋಟಿ ನೀಡುವ ಗುರಿಹೊಂದಿರುವ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಮಾದರಿಯು ಗ್ರಾಹಕರ ಆಕರ್ಷಣೆಗಾಗಿ ಎಲ್ಇಡಿ ಹೆಡ್‌ಲೈಟ್ ಮತ್ತು ಡಿಜಿ ಅನಲಾಗ್ ಇನ್ಟ್ರುಮೆಂಟ್ ಕ್ಲಸ್ಟರ್ ನೀಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆ.

Article Published On: Monday, June 10, 2019, 14:39 [IST]
English summary
TVS Discontinues Jupiter Grande Variant — ZX Variant Of Jupiter Gets Updates. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+