ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ಕಳೆದ ಕೆಲ ತಿಂಗಳ ಹಿಂದೆ ಜೂಪಿಟರ್ ಗ್ರಾಂಡೆ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಕೈಬಿಟ್ಟಿದ್ದ ಟಿವಿಎಸ್ ಮೋಟಾರ್ ಸಂಸ್ಥೆಯು ಗ್ರಾಂಡೆ ಬದಲಾಗಿ ಜೆಡ್ಎಕ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಆದರೆ ಕೆಲವು ವರದಿಗಳ ಪ್ರಕಾರ ಮಾರಾಟದಿಂದ ಸ್ಥಗಿತವಾಗಿದ್ದ ಜೂಪಿಟರ್ ಗ್ರಾಂಡೆ ಆವೃತ್ತಿಯು ಮರು ಬಿಡುಗಡೆಗಾಗಿ ಸಿದ್ದವಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ಜೂಪಿಟರ್ ಗ್ರಾಂಡೆ ಸ್ಥಗಿತಗೊಳಿಸುವ ಮೂಲಕ ಜೂಪಿಟರ್ ಜೆಡ್ಎಕ್ಸ್ ಮೇಲೆ ಹೆಚ್ಚಿನ ಒತ್ತು ನೀಡಿದ್ದ ಟಿವಿಎಸ್ ಸಂಸ್ಥೆಯು ಇದೀಗ ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ ಜೂಪಿಟರ್ ಗ್ರಾಂಡೆ ಆವೃತ್ತಿಯನ್ನು ಗ್ರಾಹಕರ ಬೇಡಿಕೆಯೆಂತೆ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ಮರುಬಿಡುಗಡೆಗಾಗಿ ಸಿದ್ದವಾಗುತ್ತಿದೆ. ಈ ಬಾರಿ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿರುವ ಜೂಪಿಟರ್ ಗ್ರಾಂಡೆ ಮಾದರಿಯು ಜೆಡ್ಎಕ್ಸ್‌ಗಿಂತಲೂ ಹೆಚ್ಚು ಬೇಡಿಕೆ ಪಡೆಯುವ ನೀರಿಕ್ಷೆಯಲ್ಲಿದೆ.

ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ಆಟೋ ಕಾರ್ ಇಂಡಿಯಾ ಸುದ್ದಿಸಂಸ್ಥೆಯ ವರದಿ ಪ್ರಕಾರ ಬಿಡುಗಡೆಗಾಗಿ ಸಿದ್ದವಾಗಿರುವ ಜೂಪಿಟರ್ ಗ್ರಾಂಡೆ ಹೊಸ ಆವೃತ್ತಿಯು 110 ಸಿಸಿ ಎಂಜಿನ್ ಮಾದರಿಯಲ್ಲೇ ಮೊದಲ ಬಾರಿಗೆ ಬ್ಲೂಟೂಥ್ ಕನೆಕ್ಟಿವಿಟಿ ಪ್ರೇರಿತ ಡಿಜಿಟಲ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್ ಹೊಂದಿರಲಿದೆಯೆಂತೆ.

ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ಹಾಗೆಯೇ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್, ಸುಧಾರಿತ ಮಾದರಿಯ ಲೆದರ್ ಸೀಟು, ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಹೊಸ ಗ್ರಾಫಿಕ್ಸ್ ಡಿಸೈನ್ ಹಾಗೂ ಹೊಸ ಬಣ್ಣಗಳ ಆಯ್ಕೆಯನ್ನು ಪಡೆಯಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೆಡ್ಎಕ್ಸ್ ಮಾದರಿಗಿಂತಲೂ ರೂ.2 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದೆ.

ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ಹೊಸ ಜೂಪಿಟರ್ ಗ್ರಾಂಡೆ ಮಾದರಿಯು ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗುವ ನೀರಿಕ್ಷೆಯಲ್ಲಿದ್ದು, ಸದ್ಯ ಬಿಎಸ್-4 ಪ್ರೇರಿತ 109.7 ಸಿಸಿ ಎಂಜಿನ್ ಮಾದರಿಯನ್ನೇ ಹೊತ್ತು ಬರಲಿದೆ. ಬಿಎಸ್-6 ಸ್ಕೂಟರ್‌ಗಳ ಬೆಲೆ ದುಬಾರಿಯಾಗುವ ಹಿನ್ನಲೆಯಲ್ಲಿ ಸದ್ಯಕ್ಕೆ ಬಿಎಸ್-4 ಮಾದರಿಯನ್ನೇ ಬಿಡುಗಡೆ ಮಾಡಲಾಗುತ್ತಿದ್ದು, 2020ರ ಏಪ್ರಿಲ್ ನಂತರವಷ್ಟೇ ಹೊಸ ನಿಯಮದಂತೆ ಜೂಪಿಟರ್ ಗ್ರಾಂಡೆ ಉನ್ನತೀಕರಣಗೊಳ್ಳಲಿದೆ.

ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ಪ್ರೀಮಿಯಂ ಫೀಚರ್ಸ್ ಜೋಡಣೆ ಹಿನ್ನಲೆಯಲ್ಲಿ ಜೂಪಿಟರ್ ಗ್ರಾಂಡೆ ಹೊಸ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.57,443ರಿಂದ ರೂ.59,950 ಇರಬಹುದೆಂದು ನೀರಿಕ್ಷಿಸಲಾಗಿದ್ದು, ಆಕ್ಟಿವಾ 5ಜಿ ಮತ್ತು ಸುಜುಕಿ ಆಕ್ಸೆಸ್ 125 ಸ್ಕೂಟರ್‌ಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ಇನ್ನು ಸ್ಕೂಟರ್ ಮಾರಾಟದಲ್ಲಿ ಹೋಂಡಾ ನಂತರ ಎರಡನೇ ಸ್ಥಾನದಲ್ಲಿರುವ ಟಿವಿಎಸ್ ಸಂಸ್ಥೆಯು ತನ್ನ ಜನಪ್ರಿಯ ಜೂಪಿಟರ್ ಜೆಡ್ಎಕ್ಸ್ ಹೊಸ ಆವೃತ್ತಿಯನ್ನು ಕೆಲವು ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದು, ಹೊಸ ಸುರಕ್ಷಾ ನಿಯಮಗಳಿಗಳಿಗೆ ಅನುಗುಣವಾಗಿ ಜೂಪಿಟರ್ ಜೆಡ್ಎಕ್ಸ್ ಮಾರುಕಟ್ಟೆ ಪ್ರವೇಶಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಜೂಪಿಟರ್ ಜೆಡ್ಎಕ್ಸ್ ಮಾದರಿಯನ್ನು ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಾಗಿದ್ದು, ಡ್ರಮ್ ಬ್ರೇಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 56,093 ಬೆಲೆ ಹೊಂದಿದ್ದರೆ ಡಿಸ್ಕ್ ಬ್ರೇಕ್ ಮಾದರಿಯು ರೂ.58,645 ಬೆಲೆ ಪಡೆದುಕೊಂಡಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ಹೊಸ ಸ್ಕೂಟರ್ ಆವೃತ್ತಿಯಲ್ಲಿ ಟಿವಿಎಸ್ ಸಂಸ್ಥೆಯು ತನ್ನದೇ ವಿಶೇಷ ತಂತ್ರಜ್ಞಾನ ಹೊಂದಿರುವ ಕಂಬೈನ್ಡ್ ಬ್ರೇಕಿಂಗ್ ತಂತ್ರಜ್ಞಾನವನ್ನು ಎರಡು ಮಾದರಿಯಲ್ಲೂ ಅಳವಡಿಸಲಾಗಿದ್ದು, ಇದು ಟಿವಿಎಸ್ ನಿರ್ಮಾಣದ ಎಲ್ಲ ಸ್ಕೂಟರ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

MOST READ: ಸಂಚಾರಿ ನಿಯಮ ಉಲ್ಲಂಘನೆಗೆ ಭರ್ಜರಿ ದಂಡ- ಸೆ.1ರಿಂದ ಹೊಸ ನಿಯಮ ಜಾರಿ ಪಕ್ಕಾ..!

ಪ್ರೀಮಿಯಂ ಫೀಚರ್ಸ್ ಹೊತ್ತು ಬರಲಿದೆ ಟಿವಿಎಸ್ ಜೂಪಿಟರ್ ಗ್ರಾಂಡೆ

ದೇಶಾದ್ಯಂತ ಹೊಸ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕಳೆದ ಏಪ್ರಿಲ್ 1ರಿಂದಲೇ ಕೇಂದ್ರ ಸರ್ಕಾರವು ದ್ವಿಚಕ್ರ ವಾಹನಗಳಲ್ಲಿ ಕೆಲವು ಕಡ್ಡಾಯ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಇದರಲ್ಲಿ 150ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್ ಮತ್ತು 125ಸಿಸಿ ಮೇಲ್ಪಟ್ಟ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಕಡ್ಡಾಯಗೊಳಿಸಲಾಗಿದ್ದು, ಜೂಪಿಟರ್ ಜೆಡ್ಎಕ್ಸ್ ಕೂಡಾ ಹೊಸ ನಿಯಮಗಳಿಗೆ ಅನುಸಾರವಾಗಿಯೇ ಬಿಡುಗಡೆಗೊಂಡಿತ್ತು.

Source: autocarindia

Most Read Articles

Kannada
English summary
TVS Jupiter Will Launch Bluetooth-Enabled Jubiter Grande Soon. Read in Kannada.
Story first published: Saturday, August 31, 2019, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X