ಎಂಟಿ-15 ಬೈಕ್‍ಗಳ ವಿತರಣೆಯನ್ನು ಶುರು ಮಾಡಿದ ಯಮಹಾ

ಯಮಹಾ ಸಂಸ್ಥೆಯು ಬಿಡುಗಡೆಗೂ ಮುನ್ನವೇ ತಮ್ಮ ಎಂಟಿ-15 ಬೈಕ್‍ಗಳಿಂದ ಮಾರುಕಟ್ಟೆ ಕುಟೂಹಲವನ್ನು ಹುಟ್ತುಹಾಕಿತ್ತು. ನಂತರ ಮಾರ್ಚ್ 16, 2019ರಂದು ಆದ್ದೂರಿಯಾಗಿ ಬಿಡುಗಡೆ ಮಾಡಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.36 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಎಂಟಿ-15 ಬೈಕ್‍ಗಳ ವಿತರಣೆಯನ್ನು ಶುರು ಮಾಡಿದ ಯಮಹಾ

ಡೆಲಿವರಿ ಶುರು

ಆಟೋಕಾರ್ ಇಂಡಿಯಾ ವರದಿಯ ಪ್ರಕಾರ ಬಿಡುಗಡೆಗೊಂಡ ಹೊಸ ಯಮಹಾ ಎಂಟಿ-15 ಬೈಕ್‍ಗಳನ್ನು ಖರೀದಿಸಿದ ಗ್ರಾಹಕರಿಗೆ ಡಿಲಿವರಿಯನ್ನು ಸಹ ಸಂತ್ಶೆಯು ಶುರು ಮಾಡಲಾಗಿದ್ದು, ಮುಂದೆ ಖರೀದಿಸುವ ಗ್ರಾಹಕರಿಗೆ ಕಾಯುವಿಕೆಯ ಅವಧಿಯನ್ನು ಮುಕ್ತಗೊಳಿಸಲಾಗಿದೆ. ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಈ ಬೈಕ್ ಅನ್ನು ವಿಶೇಷವಾಗಿ ಸಿದ್ದಗೊಳಿಸಲಾಗಿದ್ದು, ಎಂಟಿ-15 ಮೂಲಕ ಯಮಹಾ ಸಂಸ್ಥೆಯು ಭಾರತದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಎಂಟಿ-15 ಬೈಕ್‍ಗಳ ವಿತರಣೆಯನ್ನು ಶುರು ಮಾಡಿದ ಯಮಹಾ

ಭಾರತೀಯ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಗಳನ್ನು ಸಿದ್ದಪಡಿಸುತ್ತಿರುವ ಯಮಹಾ ಸಂಸ್ಥೆಯು ಎಂಟಿ-15 ಬೈಕಿನಲ್ಲಿ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸಿದ್ದು, 'ದ ಡಾರ್ಕ್ ಸೈಡ್ ಆಫ್ ಜಪಾನ್' ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ.

ಎಂಟಿ-15 ಬೈಕ್‍ಗಳ ವಿತರಣೆಯನ್ನು ಶುರು ಮಾಡಿದ ಯಮಹಾ

ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಪ್ರಧಾನ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೋಡಣೆ ಮಾಡಲಾಗಿದೆ.

ಎಂಟಿ-15 ಬೈಕ್‍ಗಳ ವಿತರಣೆಯನ್ನು ಶುರು ಮಾಡಿದ ಯಮಹಾ

ಹಾಗೆಯೇ ಹೊಸ ಬೈಕಿನಲ್ಲಿ ಅಳವಡಿಸಲಾಗಿರುವ ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಲಾಗಿದೆ.

ಎಂಟಿ-15 ಬೈಕ್‍ಗಳ ವಿತರಣೆಯನ್ನು ಶುರು ಮಾಡಿದ ಯಮಹಾ

ಇದರ ಹೊರತಾಗಿ ಆರ್15 ಬೈಕಿನಲ್ಲಿ ಅಳವಡಿಸಲಾಗಿರುವ ಬಹುತೇಕ ಸೌಲಭ್ಯಗಳನ್ನು ಹೊಸ ಎಂಟಿ-15 ಬೈಕಿನಲ್ಲಿ ನೋಡಬಹುದಾಗಿದ್ದು, ಬೆಲೆ ಇಳಿಕೆ ಮಾಡುವ ಸಂಬಂಧ ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಎಂಟಿ-15 ಬೈಕಿಗಿಂತಲೂ ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಬೈಕಿನಲ್ಲಿ ಕೆಲವು ಪ್ರೀಮಿಯಂ ಸೌಲಭ್ಯಗಳನ್ನು ಕಡಿತ ಮಾಡಲಾಗಿದೆಯೆಂತೆ.

ಎಂಟಿ-15 ಬೈಕ್‍ಗಳ ವಿತರಣೆಯನ್ನು ಶುರು ಮಾಡಿದ ಯಮಹಾ

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೊಸ ಎಂಟಿ-15 ಬೈಕ್ ಮಾದರಿಯ ಎಂಜಿನ್ ಅನ್ನು ಆರ್15 ಬೈಕಿನಲ್ಲೂ ನೋಡಬಹುದಾಗಿದ್ದು, ಲಿಕ್ಟಿಡ್ ಕೂಲ್ಡ್ 155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ವೆರಿವೆಬಲ್ ವೆವ್ ಟಿಮಿಂಗ್(ವಿವಿಟಿ) ತಂತ್ರಜ್ಞಾನ ಪ್ರೇರಣೆ ಹೊಂದಿದೆ. ಈ ಮೂಲಕ 19.3-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ರಿಯರ್ ವೀಲ್ಹ್ ಸ್ಲಿಪ್ಲರ್ ಕ್ಲಚ್ ಸೌಲಭ್ಯ ಪಡೆದಿದೆ.

ಎಂಟಿ-15 ಬೈಕ್‍ಗಳ ವಿತರಣೆಯನ್ನು ಶುರು ಮಾಡಿದ ಯಮಹಾ

ಇನ್ನು ಬೈಕ್ ಸವಾರರ ಸುರಕ್ಷತೆಗೂ ಹೆಚ್ಚಿನ ಗಮನಹರಿಸಲಾಗಿದ್ದು, ಎಂಟಿ-15 ಬೈಕಿನಲ್ಲಿ 245-ಎಂಎ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಜೋಡಣೆ ಮಾಡಲಾಗಿದೆ. ಜೊತೆಗೆ ಆರ್15 ಬೈಕಿನಿಂದ ಎರವಲು ಪಡೆಯಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಲ್ಯುಮಿನಿಯಂ ಸ್ವಿಗಂ ಆರ್ಮ್ ಸೌಲಭ್ಯವು ಹೊಸ ಬೈಕಿನ ಬಲಿಷ್ಠತೆಯನ್ನು ಹೆಚ್ಚಿಸಿದ್ದು, ಸ್ಟ್ರಿಟ್ ಫೈಟರ್ ಬೈಕ್ ಆವೃತ್ತಿಗಾಗಿ ಇದು ಜನಪ್ರಿಯತೆ ಸಾಧಿಸಲಿದೆ.

ಎಂಟಿ-15 ಬೈಕ್‍ಗಳ ವಿತರಣೆಯನ್ನು ಶುರು ಮಾಡಿದ ಯಮಹಾ

ಒಟ್ಟಿನಲ್ಲಿ ಕಡಿಮೆ ಬೆಲೆಗಳಲ್ಲಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಹೊರ ತರುತ್ತಿರುವ ಬೈಕ್ ಸಂಸ್ಥೆಗಳು ಯುವ ಬೈಕ್ ಸವಾರರ ಆಕರ್ಷಣೆ ಮಾಡುತ್ತಿದ್ದು, ಕೆಟಿಎಂ 125 ಮಾರುಕಟ್ಟೆಗೆ ಲಗ್ಗೆಯಿಟ್ಟ ಬೆನ್ನಲ್ಲೇ ಎಂಟಿ-15 ಮಾರುಕಟ್ಟೆ ಪ್ರವೇಶ ಪಡೆದಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha MT-15 Deliveries Start — No Waiting Period. Read In Kannada
Story first published: Thursday, April 4, 2019, 9:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X