ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ಪರ್ಫಾರ್ಮೆನ್ಸ್ ಮತ್ತು ಇನ್ನಿತರೆ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ಬಹು ನಿರೀಕ್ಷಿತ ಎಂಟಿ15 ಬೈಕ್ ಅನ್ನು ಮಾರ್ಚ್‍ 16, 2019ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಬಿಡುಗಡೆಗೊಂಡ ಸುಮಾರು 2 ತಿಂಗಳಿನಲ್ಲಿ ಎಂಟಿ15 ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತಿದ್ದು, ತನ್ನ ಎದುರಾಳಿಗಳಿ ತೀವ್ರ ಪೈಪೋಟಿಯನ್ನು ನೀಡುತ್ತಿದೆ.

ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ಯಮಹಾ ಸಂಸ್ಥೆಯಲ್ಲ್ಲಿ ನೇಕೆಡ್ ಹಾಗು ಸ್ಟ್ರೀಟ್ ಫೈಟರ್ ಮೋಟಾರ್‍‍ಸೈಕಲ್ ಆದ ಎಂಟಿ15 ಬಿಡುಗಡೆಗೊಂಡ ಮೊದಲನೆಯ ತಿಂಗಳಿನಲ್ಲಿ ಸುಮಾರು 5203 ಯೂನಿಟ್ ಮಾರಾಟಗೊಂಡಿದ್ದು, ಕೆಟಿಎಂ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದೆ. ಡ್ಯೂಕ್ 125 ಮತ್ತು ಡ್ಯೂಕ್ 200 ಬೈಕ್‍ಗಳ ಮಾರಾಟದ ಸಂಖ್ಯೆಯನ್ನು ಸೇರಿಸಿದರೆ ಯಮಹಾ ಎಂಟಿ15 ಬೈಕಿನ ಮಾರಾಟದ ಸಂಖ್ಯೆ ಆಗಿದೆ.

ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ರಶ್‍ಲೇನ್ ವರದಿಯ ಪ್ರಕಾರ ಯಮಹಾ ಎಂಟಿ-15 5,230 ಯೂನಿಟ್ ಮಾರಾಟವದರೆ 3,609 ಡ್ಯೂಕ್ 125 ಹಾಗು 2,017 ಡ್ಯೂಕ್ 200 ಬೈಕ್‍ಗಳು ಮಾರಾಟವಾಗಿದೆ. ಇನ್ನು ಏಪ್ರಿಲ್ ತಿಂಗಳಿನಲ್ಲಿ 3,823 ಯೂನಿಟ್ ಎಂಟಿ15 ಬೈಕ್‍ಗಳು ಮಾರಟಗೊಂಡಿದ್ದರೆ ಇನ್ನು 2,199 ಯೂನಿಟ್‍ಗಳು ಮಾತ್ರ ಮಾರಾಟವಾಗಿದೆ ಎಂದು ಹೇಳಲಾಗಿದೆ.

ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ಭಾರತೀಯ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಗಳನ್ನು ಸಿದ್ದಪಡಿಸುತ್ತಿರುವ ಯಮಹಾ ಸಂಸ್ಥೆಯು ಎಂಟಿ-15 ಬೈಕಿನಲ್ಲಿ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸಿದ್ದು, 'ದ ಡಾರ್ಕ್ ಸೈಡ್ ಆಫ್ ಜಪಾನ್' ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ.

ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಪ್ರಧಾನ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೋಡಣೆ ಮಾಡಲಾಗಿದೆ.

ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ಹಾಗೆಯೇ ಹೊಸ ಬೈಕಿನಲ್ಲಿ ಅಳವಡಿಸಲಾಗಿರುವ ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಲಾಗಿದೆ.

ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ಇದರ ಹೊರತಾಗಿ ಆರ್15 ಬೈಕಿನಲ್ಲಿ ಅಳವಡಿಸಲಾಗಿರುವ ಬಹುತೇಕ ಸೌಲಭ್ಯಗಳನ್ನು ಹೊಸ ಎಂಟಿ-15 ಬೈಕಿನಲ್ಲಿ ನೋಡಬಹುದಾಗಿದ್ದು, ಬೆಲೆ ಇಳಿಕೆ ಮಾಡುವ ಸಂಬಂಧ ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಎಂಟಿ-15 ಬೈಕಿಗಿಂತಲೂ ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಬೈಕಿನಲ್ಲಿ ಕೆಲವು ಪ್ರೀಮಿಯಂ ಸೌಲಭ್ಯಗಳನ್ನು ಕಡಿತ ಮಾಡಲಾಗಿದೆಯೆಂತೆ.

ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೊಸ ಎಂಟಿ-15 ಬೈಕ್ ಮಾದರಿಯ ಎಂಜಿನ್ ಅನ್ನು ಆರ್15 ಬೈಕಿನಲ್ಲೂ ನೋಡಬಹುದಾಗಿದ್ದು, ಲಿಕ್ಟಿಡ್ ಕೂಲ್ಡ್ 155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ವೆರಿವೆಬಲ್ ವೆವ್ ಟಿಮಿಂಗ್(ವಿವಿಟಿ) ತಂತ್ರಜ್ಞಾನ ಪ್ರೇರಣೆ ಹೊಂದಿದೆ. ಈ ಮೂಲಕ 19.3-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ರಿಯರ್ ವೀಲ್ಹ್ ಸ್ಲಿಪ್ಲರ್ ಕ್ಲಚ್ ಸೌಲಭ್ಯ ಪಡೆದಿದೆ.

ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ಇನ್ನು ಬೈಕ್ ಸವಾರರ ಸುರಕ್ಷತೆಗೂ ಹೆಚ್ಚಿನ ಗಮನಹರಿಸಲಾಗಿದ್ದು, ಎಂಟಿ-15 ಬೈಕಿನಲ್ಲಿ 245-ಎಂಎ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಜೋಡಣೆ ಮಾಡಲಾಗಿದೆ. ಜೊತೆಗೆ ಆರ್15 ಬೈಕಿನಿಂದ ಎರವಲು ಪಡೆಯಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಲ್ಯುಮಿನಿಯಂ ಸ್ವಿಗಂ ಆರ್ಮ್ ಸೌಲಭ್ಯವು ಹೊಸ ಬೈಕಿನ ಬಲಿಷ್ಠತೆಯನ್ನು ಹೆಚ್ಚಿಸಿದ್ದು, ಸ್ಟ್ರಿಟ್ ಫೈಟರ್ ಬೈಕ್ ಆವೃತ್ತಿಗಾಗಿ ಇದು ಜನಪ್ರಿಯತೆ ಸಾಧಿಸಲಿದೆ.

ಮಾರಾಟದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಅನ್ನು ಹಿಂದಿಕ್ಕಿದ ಯಮಹಾ ಎಂಟಿ15

ಒಟ್ಟಿನಲ್ಲಿ ಕಡಿಮೆ ಬೆಲೆಗಳಲ್ಲಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಹೊರ ತರುತ್ತಿರುವ ಬೈಕ್ ಸಂಸ್ಥೆಗಳು ಯುವ ಬೈಕ್ ಸವಾರರ ಆಕರ್ಷಣೆ ಮಾಡುತ್ತಿದ್ದು, ಕೆಟಿಎಂ 125 ಮಾರುಕಟ್ಟೆಗೆ ಲಗ್ಗೆಯಿಟ್ಟ ಬೆನ್ನಲ್ಲೇ ಎಂಟಿ-15 ಮಾರುಕಟ್ಟೆ ಪ್ರವೇಶ ಪಡೆದಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.

More from DriveSpark

Article Published On: Monday, May 27, 2019, 12:25 [IST]
English summary
Yamaha MT15 Takes Over KTM Duke 125 In Terms Of Sales. Read In Kannada
Read more on ಯಮಹಾ yamaha sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+