ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಜಪಾನ್ ಮೂಲದ ದ್ವಿ ಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಈಗ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಕುರಿತು ಅಧ್ಯಯನ ನಡೆಸುತ್ತಿದೆ.

ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಎಕನಾಮಿಕ್ ಟೈಮ್ಸ್ ಆಟೋ ವರದಿಗಳ ಪ್ರಕಾರ ಯಮಹಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸುವ ಚಿಂತನೆಯಲ್ಲಿದೆ. ಆದ ಕಾರಣ ಬೆಲೆ, ಮೂಲಸೌಕರ್ಯ, ಎಲೆಕ್ಟ್ರಿಕ್ ವಾಹನ ನೀತಿ, ಹಣಕಾಸು ನೀತಿ ಮುಂತಾದವುಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.

ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಈ ಬಗ್ಗೆ ಮಾತನಾಡಿರುವ ಯಮಹಾ ಮೋಟಾರ್ ಇಂಡಿಯಾದ ಅಧ್ಯಕ್ಷರಾದ ಮೋಟೊಫುಮಿ ಶಿಟಾರಾರವರು, ನಾವು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಕುರಿತು ಅಧ್ಯಯನ ನಡೆಸುತ್ತಿದ್ದೇವೆ. ಇದುವರೆಗೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲವೆಂದು ತಿಳಿಸಿದರು.

ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಯಮಹಾ ಕಂಪನಿಯು ಪ್ಯಾಸೊಲ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜಪಾನ್‍‍ನಲ್ಲಿ ಬಿಡುಗಡೆಗೊಳಿಸುವ ಮೂಲಕ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನ ಮಾರುಕಟ್ಟೆಗೆ ಕಾಲಿಟ್ಟಿತು. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ತನ್ನ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಆದ ಇ‍‍ಸಿ 05 ಅನ್ನು ತೈವಾನ್‍‍ನಲ್ಲಿ ಬಿಡುಗಡೆಗೊಳಿಸಿತ್ತು.

ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಈ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಮುನ್ನ ಯಮಹಾ ಕಂಪನಿಯು ಇದೇ ರೀತಿಯ ಅಧ್ಯಯನವನ್ನು ಕೈಗೊಂಡಿತ್ತು. ಇಸಿ 05 ಯಮಹಾದ ಐದನೇ ಎಲೆಕ್ಟ್ರಿಕ್ ವಾಹನವಾಗಿದೆ. ಕಂಪನಿಯು 2050ರ ವೇಳೆಗೆ ಕಾರ್ಬನ್ ರಹಿತ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.

ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಯಮಹಾ ಕಂಪನಿಯು ಇತ್ತೀಚಿಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಫಾಸಿನೊ 125 ಎಫ್‍ಐ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಸ್ಕೂಟರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.66,430ಗಳಾಗಿದೆ.

ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಹೊಸ ಫಾಸಿನೊ 125 ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿರುವ 113 ಸಿಸಿಯ ಸ್ಕೂಟರಿನ ಬದಲಿಗೆ ಬಿಡುಗಡೆಗೊಳಿಸಲಾಗಿದೆ. ಹೊಸ ಸ್ಕೂಟರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಇದರ ಜೊತೆಗೆ ಯಮಹಾ ಕಂಪನಿಯು ಹೊಸ ರೇ ಝಡ್‍ಆರ್ 125 ಹಾಗೂ ರೇ ಝಡ್‍ಆರ್ 125 ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳನ್ನು ಸಹ ಮಾರುಕಟ್ಟೆಯಲ್ಲಿರುವ 113 ಸಿಸಿಯ ರೇ ಝಡ್‍ಆರ್ ಸ್ಕೂಟರ್‍‍ಗಳ ಬದಲಿಗೆ ಅನಾವರಣಗೊಳಿಸಿದೆ.

ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಈ ಎರಡೂ ಸ್ಕೂಟರ್‍‍ಗಳು 125 ಸಿಸಿಯ ಬಿ‍ಎಸ್ 6 ಎಂಜಿನ್ ಅನ್ನು ಹೊಂದಿವೆ. ಈ ಸ್ಕೂಟರ್‍‍ಗಳು ಹಳೆಯ ಸ್ಕೂಟರ್‍‍ಗಿಂತ 16%ನಷ್ಟು ಹೆಚ್ಚು ಫ್ಯೂಯಲ್ ಎಫಿಶಿಯನ್ಸಿ ಹೊಂದಿವೆ. ಈ ಸ್ಕೂಟರ್‍‍ಗಳು ಎಂಜಿನ್ ಸ್ಟಾರ್ಟ್ ಸಿಸ್ಟಂ ಹಾಗೂ ಸ್ಟಾಪ್ / ಸ್ಟಾರ್ಟ್ ಸಿಸ್ಟಂ ಹೊಂದಿವೆ. ರ್‍ಯಾಲಿ ಸ್ಟ್ರೀಟ್ ಮಾದರಿಯ ಸ್ಕೂಟರ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ.

ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಯಮಹಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಾವುದೇ ವಾಹನಗಳನ್ನು ಬಿಡುಗಡೆಗೊಳಿಸುವ ಮುನ್ನ ಮಾರುಕಟ್ಟೆಯನ್ನು ಅಧ್ಯಯನ ಮಾಡುವುದು ಒಳ್ಳೆಯದು. ಇದನ್ನೇ ಯಮಹಾ ಕಂಪನಿಯು ಮಾಡುತ್ತಿದೆ. ಎಲ್ಲಾ ಸರಿಯಾದ ರೀತಿಯಲ್ಲಿದ್ದರೆ ಯಮಹಾ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಯಮಹಾ yamaha
English summary
Yamaha Studies Electric Two-Wheeler Feasibility In India: Plans To Launch E-Scooter Soon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X