ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಜಪಾನಿನ ವಾಹನ ತಯಾರಕ ಕಂಪನಿಯಾದ ಯಮಹಾ, ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಸರಣಿಯ ಎಲ್ಲಾ ವಾಹನಗಳನ್ನು ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ವರ್ಷದ ನವೆಂಬರ್ ವೇಳೆಗೆ ತನ್ನ ಕಂಪನಿಯ ಎಲ್ಲಾ ವಾಹನಗಳನ್ನು ಬಿಎಸ್6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸುವುದಾಗಿ ಕಂಪನಿಯು ಈ ಹಿಂದೆಯೇ ತಿಳಿಸಿತ್ತು.

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಯಮಹಾ ಕಂಪನಿಯು ಆರ್ 15 ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸುತ್ತಿದೆ. ಬಿಡುಗಡೆಗೆ ಮುಂಚೆ ಈ ಬೈಕಿನ ದಾಖಲೆಯೊಂದು ಸೋರಿಕೆಯಾಗಿದೆ. ಈ ದಾಖಲೆಯಲ್ಲಿ ಬಿಎಸ್6 ಎಂಜಿನ್ ಹೊಂದಿರುವ ಯಮಹಾ ಆರ್ 15 ಬೈಕಿನ ಎಂಜಿನ್ನಿನ ಸ್ಪೆಸಿಫಿಕೇಶನ್ ಬಗ್ಗೆ ಮಾಹಿತಿ ದೊರೆತಿದೆ.

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಈ ದಾಖಲೆಯಲ್ಲಿ ಹೇಳಿರುವಂತೆ ಆರ್ 15 ಬೈಕ್ 155 ಸಿಸಿಯ ಬಿ‍ಎಸ್ 6 ಎಂಜಿನ್ ಹೊಂದಿರಲಿದ್ದು, 18.3 ಬಿಹೆಚ್‌ಪಿ ಪವರ್ ಉತ್ಪಾದಿಸಲಿದೆ. ಮಾರುಕಟ್ಟೆಯಲ್ಲಿರುವ ಬಿ‍ಎಸ್ 4 ಎಂಜಿನ್ 19 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತಿದೆ. ಬಿ‍ಎಸ್6 ಎಂಜಿನ್‌ ಬೈಕ್ ಬಿ‍ಎಸ್ 4 ಎಂಜಿನ್‍ ಹೊಂದಿರುವ ಬೈಕಿ‍ಗಿಂತ 0.7 ಬಿ‍‍ಹೆಚ್‍‍ಪಿ ಪವರ್ ಕಡಿಮೆ ಉತ್ಪಾದಿಸಲಿದೆ.

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಸೋರಿಕೆಯಾಗಿರುವ ಈ ದಾಖಲೆಯಲ್ಲಿ ಬೈಕ್ ಉತ್ಪಾದಿಸುವ ಟಾರ್ಕ್ ಅಂಕಿಅಂಶಗಳ ಬಗೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಿಎಸ್ 6 ಎಂಜಿನ್ ಸಹ 6 ಸ್ಪೀಡ್‍‍ನ ಗೇರ್‌ಬಾಕ್ಸ್‌ ಹೊಂದಿರಲಿದೆ. ಆರ್ 15 ಬೈಕ್ ಈಗಾಗಲೇ ಬಿ‍ಎಸ್ 6 ಬೈಕುಗಳಿಗೆ ಕಡ್ಡಾಯವಾಗಿರುವ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ.

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಸೋರಿಕೆಯಾಗಿರುವ ಈ ದಾಖಲೆಯ ಪ್ರಕಾರ ಬಿ‍ಎಸ್ 6 ಎಂಜಿನ್ ಬೈಕ್, ಬಿ‍ಎಸ್ 4 ಬೈಕಿನ ಗಾತ್ರವನ್ನೇ ಹೊಂದಿರಲಿದೆ. ಇದರ ಪ್ರಕಾರ ಬಿ‍ಎಸ್ 6 ಎಂಜಿನ್ ಹೊಂದಲಿರುವ ಯಮಹಾ ಆರ್ 15 ಬೈಕ್ 1990 ಎಂಎಂ ಉದ್ದ, 725 ಎಂಎಂ ಅಗಲ ಹಾಗೂ 1135 ಎಂಎಂ ಎತ್ತರವನ್ನು ಹೊಂದಿರಲಿದೆ.

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

1325 ಎಂಎಂನ ಅದೇ ವ್ಹೀಲ್ ಬೇಸ್ ಅನ್ನು ಸಹ ಹೊಂದಿರಲಿದೆ. ಬೈಕಿನ ಗಾತ್ರವು ಬದಲಾಗದೆ ಇರುವುದರಿಂದ ಹೊಸ ಬೈಕಿನ ಸೀಟಿನ ಎತ್ತರವು 815 ಎಂಎಂ ಹಾಗೂ ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂ ಆಗಿರುವ ಸಾಧ್ಯತೆಗಳಿವೆ.

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಇದರ ಜೊತೆಗೆ, ಬಿಎಸ್ 6 ಎಂಜಿನ್‍‍‍ನ ಹೊಸ ಬೈಕ್ ಎಲ್ಇಡಿ ಹೆಡ್‌ಲ್ಯಾಂಪ್‌, ಸಾಂಪ್ರದಾಯಿಕವಾದ ಟರ್ನ್ ಇಂಡಿಕೇಟರ್‍‍ಗಳನ್ನು ಹೊಂದಿರುವ ಟೇಲ್ ಲ್ಯಾಂಪ್, ಪೂರ್ಣ ಪ್ರಮಾಣದ ಎಲ್‍‍ಸಿ‍‍ಡಿ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌, ಸ್ಪ್ಲಿಟ್-ಸ್ಟೈಲ್ ಸ್ಟೆಪ್-ಅಪ್ ಸೀಟುಗಳನ್ನು ಹೊಂದಿರಲಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಹೊಸ ಆರ್ 15 ಬೈಕಿನಲ್ಲಿರುವ ಬ್ಲೂಟೂತ್ ಕನೆಕ್ಟಿವಿಟಿ, ಬೈಕಿಗೆ ಹೆಚ್ಚಿನ ಫೀಚರ್‍‍ಗಳನ್ನು ಸೇರಿಸುವ ನಿರೀಕ್ಷೆಯಿದೆ. ಸಸ್ಪೆಂಷನ್ ಹಾಗೂ ಬ್ರೇಕಿಂಗ್‍‍ಗಳಿಗಾಗಿ ಬಿಎಸ್ 4 ಬೈಕಿನಲ್ಲಿದ್ದ ಫೀಚರ್‍‍ಗಳನ್ನು ಮುಂದುವರೆಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಮಾರುಕಟ್ಟೆಯಲ್ಲಿರುವ ಆರ್ 15 ಬೈಕಿನಲ್ಲಿ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 220 ಎಂಎಂ ರೋಟರ್‍‍ಗಳಿವೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಈ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅಳವಡಿಸಲಾಗಿದೆ. ತನ್ನ ಕಂಪನಿಯ ಬಿಎಸ್ 6 ಎಂಜಿನ್ ಹೊಂದಲಿರುವ ವಾಹನಗಳ ಬೆಲೆಯು 10% ನಿಂದ 15%ನಷ್ಟು ಏರಿಕೆಯಾಗಲಿದೆ ಎಂದು ಯಮಹಾ ಕಂಪನಿಯು ಈಗಾಗಲೇ ಖಚಿತಪಡಿಸಿದೆ.

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಮಾರುಕಟ್ಟೆಯಲ್ಲಿರುವ ವೈ‍‍ಝಡ್‍ಎಫ್ ವಿ3.0 ಬೈಕಿನ ಬೆಲೆಯನ್ನು ಕಂಪನಿಯು 600 ರೂಪಾಯಿಗಳಷ್ಟು ಏರಿಸಿದೆ. ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.40 ಲಕ್ಷ ಗಳಾದರೆ, ಡಾರ್ಕ್ ನೈಟ್ ಆವೃತ್ತಿಯ ಬೆಲೆಯು ರೂ.1.42 ಲಕ್ಷಗಳಾಗಲಿದೆ.

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿಎಸ್6 ಎಂಜಿನ್ ಹೊಂದಲಿರುವ ವೈ‍‍ಝಡ್‍ಎಫ್-ಆರ್15 ಬೈಕ್, ಎಂಜಿನ್‍‍ನ ಹೊರತಾಗಿ ಯಾವುದೇ ಹೆಚ್ಚಿನ ಬದಲಾವಣೆಯನ್ನು ಹೊಂದುತ್ತಿಲ್ಲ. ರೈಡರ್ ಅನುಭವವನ್ನು ಹೆಚ್ಚಿಸಲು ಹೊಸ ಬೈಕ್ ಸ್ಮಾರ್ಟ್ ಕನೆಕ್ಟಿವಿಟಿಯನ್ನು ಹೊಂದಿರಲಿದೆ.

ಬಹಿರಂಗವಾಯ್ತು ಹೊಸ ಆರ್15 ಬೈಕಿನ ಮಾಹಿತಿ

ಹೊಸ ವೈ‍‍ಝಡ್‍ಎಫ್ ಆರ್15 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಆರ್‌ಸಿ 125, ಸುಜುಕಿ ಜಿಕ್ಸರ್ ಎಸ್‌ಎಫ್ 155, ಟಿವಿಎಸ್ ಅಪಾಚೆ ಆರ್‌ಟಿಆರ್ 160 4 ವಿ ಹಾಗೂ ಬಜಾಜ್ ಪಲ್ಸರ್ 160 ಎನ್‌ಎಸ್‌ ಬೈಕುಗಳಿಗೆ ಪೈಪೋಟಿ ನೀಡಲಿದೆ.

Source: IAB

Most Read Articles

Kannada
Read more on ಯಮಹಾ yamaha
English summary
Yamaha YZF-R15 BS-VI Engine Specs Leaked: India Launch Expected This Year - Read in Kannada
Story first published: Thursday, October 17, 2019, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X