ಮೂರು ಮಾನ್‍‍ಸ್ಟರ್ ಎಡಿಷನ್‍ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ಯಮಹಾ

ಯಮಹಾ ಮೋಟಾರ್‍‍ಸೈಕಲ್ಸ್ ಇಂಡಿಯಾ, ಮಾನ್‍‍ಸ್ಟರ್ ಎಡಿಷನ್ ಆವೃತ್ತಿಯ ಮೂರು ವಾಹನಗಳನ್ನು ಬಿಡುಗಡೆಗೊಳಿಸಿದೆ. ಇವುಗಳಲ್ಲಿ ಎರಡು ಬೈಕುಗಳಾದರೆ, ಒಂದು ಸ್ಕೂಟರ್ ಆಗಿದೆ. ಯಮಹಾ ಆರ್15 ವಿ3.0 ಹಾಗೂ ಯಮಹಾ ಎಫ್‍‍ಝಡ್-25 ಬೈಕುಗಳಾದರೆ, ಯಮಹಾ ರೇ ಝಡ್‍ಆರ್ ಸ್ಕೂಟರ್ ಆಗಿದೆ.

ಮೂರು ಮಾನ್‍‍ಸ್ಟರ್ ಎಡಿಷನ್‍ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ಯಮಹಾ

ಯಮಹಾ ಆರ್15 ವಿ3.0 ಮಾನ್‍‍ಸ್ಟರ್ ಎಡಿಷನ್ ಬೈಕಿನ ಬೆಲೆಯು ರೂ.1.42 ಲಕ್ಷಗಳಾದರೆ, ಯಮಹಾ ಎಫ್‍‍ಝಡ್-25 ಮಾನ್‍‍ಸ್ಟರ್ ಎಡಿಷನ್ ಬೈಕಿನ ಬೆಲೆಯು ರೂ.1.36 ಲಕ್ಷಗಳಾಗಿದೆ. ಯಮಹಾ ಸಿಗ್ನಸ್ ರೇ-ಝಡ್‍ಆರ್ ಸ್ಕೂಟರ್‍‍ನ ಬೆಲೆ ರೂ.59,028ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಾಗಿವೆ.

ಮೂರು ಮಾನ್‍‍ಸ್ಟರ್ ಎಡಿಷನ್‍ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ಯಮಹಾ

ಈ ಎಲ್ಲಾ ಮೂರು ಮಾದರಿಯ ವಾಹನಗಳು ಮಾನ್‍‍ಸ್ಟರ್ ಎನರ್ಜಿ ಯಮಹಾ ಮೋಟೋ ಜಿಪಿ ರೇಸಿಂಗ್ ಟೀಂ‍‍ನಿಂದ ಪ್ರಭಾವಿತವಾಗಿದ್ದು, ವಿಶೇಷ ಲಿವರಿಯನ್ನು ಹೊಂದಿವೆ. ಯಮಹಾ ವೈ‍ಎಫ್‍‍ಝಡ್-ಆರ್1‍ಎಂ ರೇಸಿಂಗ್ ಬೈಕಿನಿಂದ ಪ್ರೇರಿತವಾದ ಡೆಕಲ್‌ಗಳನ್ನು ಫೇರಿಂಗ್, ಟ್ಯಾಂಕ್‌ ಹಾಗೂ ಸೈಡ್ ಪ್ಯಾನೆಲ್‌ಗಳಲ್ಲಿ ಹೊಂದಿವೆ.

ಮೂರು ಮಾನ್‍‍ಸ್ಟರ್ ಎಡಿಷನ್‍ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ಯಮಹಾ

ಈ ವಾಹನಗಳು ಪ್ರೀಮಿಯಂ ಗೋಲ್ಡ್ ಯಮಹಾ ಮೋಟಾರ್ ಟ್ಯೂನಿಂಗ್ ಫೋರ್ಕ್ ಲೋಗೊ, ಯಮಹಾ ರೇಸಿಂಗ್ ಸ್ಪೀಡ್ ಬ್ಲಾಕ್ ಲೋಗೊ ಹಾಗೂ ಮಾನ್ಸ್ಟರ್ ಬ್ರಾಂಡ್ ಲೊಗೊವನ್ನು ಹೊಂದಿವೆ. ಸೀಮಿತ ಆವೃತ್ತಿಯ ಈ ವಾಹನಗಳನ್ನು ಖರೀದಿಸುವ ಎಲ್ಲಾ ಗ್ರಾಹಕರು ರೇಸಿಂಗ್ ಬ್ರಾಂಡೆಡ್ ಟಿ ಶರ್ಟ್‍‍ಗಳನ್ನು ಪಡೆಯಲಿದ್ದಾರೆ.

ಮೂರು ಮಾನ್‍‍ಸ್ಟರ್ ಎಡಿಷನ್‍ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ಯಮಹಾ

ಮೋಟೊ ಜಿಪಿ ಪ್ರೇರಿತ ಮಾನ್‍‍ಸ್ಟರ್ ಲಿವರಿ ಬೈಕುಗಳ ಬಿಡುಗಡೆಯ ಸಂದರ್ಭದಲ್ಲಿ, ಯಮಹಾ ಕಂಪನಿಯು ಕಾಲ್ ಆಫ್ ದಿ ಬ್ಯೂ ಸೀಸನ್ 2 ಆರಂಭಿಸುವುದಾಗಿ ಘೋಷಿಸಿತು. ಯಮಹಾ ಮೋಟಾರ್ ಇಂಡಿಯಾ ಗ್ರೂಪ್‍‍ನ ಅಧ್ಯಕ್ಷರಾದ ಮೊಟೊಫುಮಿ ಶಿಟಾರಾರವರು ಮಾತನಾಡಿ, ಯಮಹಾ ಕಂಪನಿಯ ಸೀಸನ್ 2 ಅಭಿಯಾನವು ಅತ್ಯಾಕರ್ಷಕವಾದ, ಸೊಗಸಾದ ಹಾಗೂ ಸ್ಪೋರ್ಟಿ ಮೊಬಿಲಿಟಿಯನ್ನು ನೀಡುವ ಮೂಲಕ ಕಂಪನಿಯ ಯಶಸ್ಸನ್ನು ಹೆಚ್ಚಿಸಲಿದೆ.

ಮೂರು ಮಾನ್‍‍ಸ್ಟರ್ ಎಡಿಷನ್‍ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ಯಮಹಾ

ಮಾನ್‍‍ಸ್ಟರ್ ಎನರ್ಜಿ ಯಮಹಾ ಮೋಟೊ ಜಿಪಿ ಲಿಮಿಟೆಡ್ ಆವೃತ್ತಿಯ ದ್ವಿಚಕ್ರ ವಾಹನಗಳ ಬಿಡುಗಡೆಯ ಜೊತೆಗೆ ಕಾಲ್ ಆಫ್ ದಿ ಬ್ಲೂ 2.0 ಯಮಹಾದ ಸಂತೋಷಕರ ಅನುಭವಗಳನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದರು. ಯಮಹಾ ರೇಸಿಂಗ್‍ನ ದೃಶ್ಯ ಹಾಗೂ ಸಂವೇದನಾಶೀಲ ಉತ್ಸಾಹವು ಅಜೇಯವಾಗಿದೆ.

ಮೂರು ಮಾನ್‍‍ಸ್ಟರ್ ಎಡಿಷನ್‍ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ಯಮಹಾ

ಕ್ರೀಡೆಯ ಹಾಗೂ ಸ್ಟೈಲ್‍‍ನ ಸರಿಯಾದ ಸಂಯೋಜನೆ ಮೂಲಕ ಭಾರತೀಯ ರಸ್ತೆಗಳಿಗೆ ದಾರಿ ಕಂಡುಕೊಳ್ಳಬೇಕು. ಯಮಹಾದ ಹೊಸ ಸೀಮಿತ ಆವೃತ್ತಿಯು ವಿಶಿಷ್ಟವಾದ ಅನುಭವವನ್ನು ಮೆಚ್ಚುವ ತನ್ನ ಗ್ರಾಹಕರಿಗೆ ಬದ್ಧತೆಯ ಮತ್ತೊಂದು ಬಲವರ್ಧನೆಯಾಗಿದೆ. ಈ ದ್ವಿಚಕ್ರ ವಾಹನಗಳನ್ನು ಸ್ಪೋರ್ಟಿ ಹಾಗೂ ರೇಸಿಂಗ್ ಬೈಕುಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಮೂರು ಮಾನ್‍‍ಸ್ಟರ್ ಎಡಿಷನ್‍ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ಯಮಹಾ

ಈ ಎಲ್ಲಾ ಮೂರು ಮಾದರಿಗಳಲ್ಲಿ ಕಾಸ್ಮೆಟಿಕ್ ಅಂಶಗಳ ನವೀಕರಣಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಎಲ್ಲಾ ಮೂರು ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಗಳಾಗಿ ಅದೇ ಮೆಕಾನಿಕಲ್ ಅಂಶಗಳನ್ನು ಹೊಂದಿರಲಿವೆ. ಪವರ್ ಉತ್ಪಾದನೆಯು ಸಹ ಹಾಗೆಯೇ ಮುಂದುವರೆಯಲಿದೆ.

ಮೂರು ಮಾನ್‍‍ಸ್ಟರ್ ಎಡಿಷನ್‍ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ಯಮಹಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಮಹಾ ಮಾನ್‍‍ಸ್ಟರ್ ಎಡಿಷನ್ ವಾಹನಗಳು ಕಂಪನಿಯ ಮೋಟೊ ಜಿಪಿ ರೇಸಿಂಗ್ ಟೀಂನಿಂದ ಪ್ರೇರಿತವಾಗಿವೆ. ಮೋಟೊ ಜಿಪಿ ಸೀಮಿತ ಆವೃತ್ತಿಯ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಮೂಲಕ ಯಮಹಾ ಕಂಪನಿಯ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡಲಿವೆ.

Most Read Articles

Kannada
Read more on ಯಮಹಾ yamaha
English summary
Yamaha R15 V3.0, FZ-25 & Ray-ZR Monster Edition Launched In India — Prices Start At Rs 59.028 - Read in kannada
Story first published: Friday, August 2, 2019, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X