ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ವೈ‍ಝಡ್ಎಫ್‍‍‍-ಆರ್3

ಯಮಹಾ ಕಂಪನಿಯು ಡಿಸೆಂಬರ್ 19ರಂದು ಬಹುನಿರೀಕ್ಷಿತ ವೈಝ‍‍ಡ್ಎಫ್ ಬಿಎಸ್-6 ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಕಂಪನಿಯು ಎಕ್ಸ್ ಎರ್ 155 ಬೈಕ್ ಅನ್ನು ಬಿಡುಗಡೆಗೊಳಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ರಶ್‍‍ಲೇನ್ ವೈ‍ಝಡ್ಎಫ್‍ - ಆರ್3 ಬೈಕ್ ಬಿಡುಗಡೆಯಾಗುತ್ತಿದೆ ಎಂಬುವುದನ್ನು ಖಚಿತಪಡಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ವೈ‍ಝಡ್ಎಫ್‍‍‍-ಆರ್3

ಕಳೆದ ನವೆಂಬರ್ ತಿಂಗಳಿನಿಂದಲೇ ನವೀಕರಿಸಿದ ಬಿಎಸ್-6 ಶ್ರೇಣಿಯ ಸ್ಕೂಟರ್ ಮತ್ತು ಬೈಕ್‍‍ಗಳನ್ನು ಬಿಡುಗಡೆಗೊಳಿಸುವುದಾಗಿ ಯಮಹಾ ಈ ಹಿಂದೆ ಹೇಳಿದರು. ಕಂಪನಿಯು 19 ಡಿಸೆಂಬರ್ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಬಿಡುಗಡೆ ಕಾರ್ಯಕ್ರಮಕ್ಕೆ ಮಾಧ್ಯಮಗಳನ್ನು ಆಹ್ವಾನಿಸಲಾಗಿದೆ. ಆದರೆ ಯಾವ ಬೈಕ್ ಕಂಪನಿಯು ಬಿಡುಗಡೆಗೊಳಿಸಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ವೈ‍ಝಡ್ಎಫ್‍‍‍-ಆರ್3

ವೈ‍‍ಝಡ್‍ಎಫ್-ಆರ್3 ಬೈಕ್ ಭಾರತದಲ್ಲಿ ಬಿಡುಗಡೆಯಾದರೆ ಅದು ಕಂಪನಿಯ ಮೊದಲ ಬಿಎಸ್-6 ಎಂಜಿನ್ ಹೊಂದಿರುವ ಬೈಕ್ ಆಗಲಿದೆ. ಈಗಾಗಲೇ ನವೀಕರಿಸಲಾದ ವೈ‍ಝಡ್ಎಫ್‍ - ಆರ್3 ಬೈಕ್‍‍ಗಳು ಹಲವು ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ವೈ‍ಝಡ್ಎಫ್‍‍‍-ಆರ್3

ಹೊಸ ವೈ‍ಝಡ್ಎಫ್‍ - ಆರ್3 ಬೈಕಿನಲ್ಲಿ ಹೊಸ ಡ್ಯುಯಲ್ ಎಲ್‍ಇ‍ಡಿ ಹೆಡ್‍ಲ್ಯಾಂಪ್ ಫ್ರಂಟ್ ಫೇರಿಂಗ್ ವಿನ್ಯಾಸವನ್ನು ಹೊಂದಿದೆ. ಈ ವಿನ್ಯಾಸದಿಂದ ಏರೋಡ್ಯಾನಿಮಿಕ್ ಡ್ರ್ಯಾಂಗ್ ಶೇ.7 ಕಡಿಮೆ ಮಾಡುತ್ತದೆ. ಮಸ್‍ಕ್ಯೂಲರ್ ಫ್ಯೂಲ್ ಟ್ಯಾಂಕ್, ಕ್ಲಿಪ್ - ಆನ್ ಹ್ಯಾಂಡಲ್‍‍ಬಾರ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ವೈ‍ಝಡ್ಎಫ್‍‍‍-ಆರ್3

ಹೊಸ ವೈ‍ಝಡ್ಎಫ್‍ - ಆರ್3 ಬೈಕ್ 321 ಸಿಸಿ ಇನ್ ಲೈನ್ ಟ್ವಿನ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ 40.8 ಬಿ‍ಹೆಚ್‍ಪಿ ಪವರ್ ಮತ್ತು 29.6 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ವೈ‍ಝಡ್ಎಫ್‍‍‍-ಆರ್3

ಹೊಸ ಬೈಕ್‍‍ನಲ್ಲಿ ಡಿಜಿಟಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಸ್ಪೀಡೋಮೀಟರ್, ಒಡಿಒ ಜೊತೆ ಗೇರ್ ಇಂಡಿಕೇಟರ್ ಹಾಗೂ ಟ್ರಿಪ್ ಇಂಡಿಕೇಟರ್‍‍ಗಳೂ ಇರಲಿವೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿರುವ ಕ್ಲೀನ್ ಲೇಔ‍‍ಟ್‍‍ನಿಂದ ಬೈಕ್ ಸವಾರನು ಸುಲಭವಾಗಿ ಮಾಹಿತಿಯನ್ನು ಓದಬಹುದಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ವೈ‍ಝಡ್ಎಫ್‍‍‍-ಆರ್3

ಹೊಸ ಯಮಹಾ ವೈಝಡ್ಎಫ್-ಆರ್3 ಮುಂಭಾಗದಲ್ಲಿ ಕೆವೈಬಿ ಮೂಲದ ಟೆಲಿಸ್ಕೋಪಿಕ್ ಫೋರ್ಕ್‍‍ಗಳನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಪ್ರೀ-ಲೋಡ್ ಹೋಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಅನ್ನು ಹೊಂದಿದೆ. ಇದರಿಂದ ಬೈಕ್ ಉತ್ತಮವಾದ ಕಂಟ್ರೋಲ್ ಅನ್ನು ಹೊಂದಿರುತ್ತದೆ ಎಂದು ಯಮಹಾ ಹೇಳಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ವೈ‍ಝಡ್ಎಫ್‍‍‍-ಆರ್3

ಬ್ರೆಕಿಂಗ್ ಸಿಸ್ಟಂ, ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಹೊಸ ಯಮಹಾ ವೈಝಡ್-ಆರ್‍3 ಬೈಕಿಗೆ ಭಾರತೀಯ ಎಕ್ಸ್ ಶೋರೂಂ ಪ್ರಕಾರ ಸುಮಾರು 3.75 ಲಕ್ಷ ಗಳಾಗಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ವೈ‍ಝಡ್ಎಫ್‍‍‍-ಆರ್3

ಯಮಹಾ ಹೊಸ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಯಮಹಾ ಬೈಕ್‍ಗಳು ಅದರ ಕಾರ್ಯಕ್ಷಮತೆಯಿಂದ ಪ್ರಸಿದ್ದಿಯನ್ನು ಪಡೆದಿದೆ. ಕಂಪನಿಯು ಪ್ರೀಮಿಯಂ ವಿಭಾಗದ ಮೇಲೆ ಹೆಚ್ಚುಗಮನ ಹರಿಸುತ್ತಿದೆ ಮತ್ತು ಅವರು ವೈಝಡ್‍ಎಫ್ -ಆರ್3 ಮೊದಲ ಬಾರಿಗೆ ಭಾರತದಲ್ಲಿ ಬಿಎಸ್-6 ಎಂಜಿನ್ ಅನ್ನು ನವೀಕರಿಸಿ ಬಿಡುಗಡೆಗೊಳಿಸುತ್ತಿದ್ದಾರೆ.

More from DriveSpark

Article Published On: Tuesday, October 29, 2019, 19:31 [IST]
English summary
Yamaha YZF-R3 Launch Scheduled For 19 December: All Details - Read in Kannada
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+