ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಸರಣಿಯಲ್ಲಿರುವ ಪಾನಿಗಲೆ ವಿ2 ಮಾದರಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಕಳೆದ ತಿಂಗಳು ಬಿಡುಗಡೆಗೊಳಿಸಿತ್ತು. ಇದೀಗ ಮತ್ತೊಂದು ಬಿಎಸ್-6 ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಡುಕಾಟಿ ಇಂಡಿಯಾ ಕಂಪನಿಯು ಬಿಎಸ್-6 ಸ್ಕ್ರ್ಯಾಂಬ್ಲರ್ 1100 ಬೈಕನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಮಾದರಿಯನ್ನು ಸ್ಕ್ರ್ಯಾಂಬ್ಲರ್ 1100 ಪ್ರೊ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಎಂಬ ಎರಡು ವೆರಿಯೆಂಟ್ ಗಳಲ್ಲಿ ಬಿಡುಗಡೆಗೊಳಿಸಲಿದೆ. ಬಿಎಸ್-6 ಸ್ಕ್ರ್ಯಾಂಬ್ಲರ್ 1100 ಪ್ರೊ ವೆರಿಯೆಂಟ್ ಆರಂಭಿಕ ಬೆಲೆಯು ರೂ.12 ಲಕ್ಷ ಮತ್ತು ಬಿಎಸ್-6 ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ವೆರಿಯೆಂಟ್ಗೆ ರೂ.13.5 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಎಂಬ ಎರಡು ವೆರಿಯೆಂಟ್ ಗಳಲ್ಲಿ ಒಂದೇ ರೀತಿಯ 1079 ಸಿಸಿ ಏರ್-ಕೂಲ್ಡ್ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಆದರೆ ಪವರ್ ಮತ್ತು ಟಾರ್ಕ್ ಅನ್ನು ವಿಭಿನ್ನವಾಗಿ ಉತ್ಪಾದನೆ ಮಾಡುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ವೆರಿಯೆಂಟ್ 7250 ಆರ್‌ಪಿಎಂನಲ್ಲಿ 84.7 ಬಿಹೆಚ್‍ಪಿ ಪವರ್ ಮತ್ತು 4750 ಆರ್‌ಪಿಎಂನಲ್ಲಿ 90.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಸ್ಪೋರ್ಟ್ ಪ್ರೊ ವೆರಿಯೆಂಟ್ 7500 ಆರ್‌ಪಿಎಂನಲ್ಲಿ 85.65ಬಿಹೆಚ್‍ಪಿ ಮತ್ತು 4750 ಆರ್‌ಪಿಎಂನಲ್ಲಿ 88 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಸ್-6 ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕಿನ ಎರಡು ವೆರಿಯೆಂಟ್ ಗಳಲ್ಲಿ ಆಕ್ಟಿವ್, ಜರ್ನಿ ಮತ್ತು ಸಿಟಿ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಈ ಬೈಕಿನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ವೆರಿಯೆಂಟ್ ಸಸ್ಪೆಂಕ್ಷನ್ ಗಳಿಗಾಗಿ ಮುಂಭಾಗದಲ್ಲಿ ಇನವರ್ಡಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಕಾಯಾಬಾ ಮೊನೊಶಾಕ್ ಸೆಟಪ್ ಅನ್ನು ನೀಡಿದೆ.

ಇನ್ನು ಸ್ಪೋರ್ಟ್ ಪ್ರೊ ವೆರಿಯೆಂಟ್ ನಲ್ಲಿ ಮುಂಭಾಗದಲ್ಲಿ 48 ಎಂಎಂ ಇನವರ್ಡಟ್ ಓಹ್ಲಿನ್ಸ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಮೊನೊಶಾಕ್ ಅನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕಿನ ಎರಡು ವೆರಿಯೆಂಟ್ ಗಳಲ್ಲಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, 320 ಎಂಎಂ ಡಿಸ್ಕ್‌ಗಳನ್ನು ಬ್ರೆಂಬೊ ಎಂ 4.32 ಮೊನೊಬ್ಲೋಕ್ ಕ್ಯಾಲಿಪರ್‌ಗಳೊಂದಿಗೆ ಮುಂಭಾಗದಲ್ಲಿ 245 ಎಂಎಂ ರೋಟರ್ ಅನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಸ್ಲೈಡಿಂಗ್ ಕ್ಯಾಲಿಪರ್ ಅನ್ನು ಒಳಗೊಂಡಿರುತ್ತವೆ.

ಇದರೊಂದಿಗೆ ಡ್ಯುಯಲ್-ಚಾನೆಲ್ ಬಾಷ್ ಕಾರ್ನರಿಂಗ್ ಎಬಿಎಸ್ ಅನ್ನು ನೀಡಲಾಗಿದೆ. ಬಿಎಸ್-6 ಡುಕಾಟಿ ಸ್ಕ್ರ್ಯಾಂಬ್ಲರ್ 1100 ಹೊಸ ಬಣ್ಣಗಳ ಆಯ್ಕೆಯೊಂದಿಗೆ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications








