ಬಿಡುಗಡೆಯಾಯ್ತು ಹೊಸ ಕವಾಸಕಿ ಝಡ್900 ಬೈಕ್

ಕವಾಸಕಿ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಝಡ್900 ಬೈಕನ್ನು ಭಾರತದಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ಝಡ್900 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.99 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಹೊಸ ಕವಾಸಕಿ ಝಡ್900 ಬೈಕ್

ಈ ಹೊಸ ಕವಾಸಕಿ ಝಡ್900 ಬೈಕಿಗಾಗಿ ದೇಶಾದ್ಯಂತ ಇರುವ ಕಂಪನಿಯ ಅಧಿಕೃತ ಡೀಲರುಗಳು ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಹೊಸ ಹೆಡ್‍‍ಲ್ಯಾಂಪ್ ಮತ್ತು ಟೇಲ್‍‍ಲೈ‍‍ಟ್‍, ಎಲ್‍ಇಡಿ ಲೈಟ್‍ಗಳು ಮತ್ತು ಎರಡು ಕಡೆಗಳಲ್ಲಿ ನವೀಕರಿಸಿದ ಸಸ್ಪೆಂಕ್ಷನ್ ಸೆಟ್ಟಿಂಗ್‍‍ಗಳು ಮತ್ತು ರೈಡಿಯಾಲಜಿ ಎಂಬ ಆ್ಯಪ್ ಮೂಲಕ ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ ಹೊಂದಿರುವ ಹೊಸ 4.3 ಇಂಚಿನ ಟಿಎ‍ಫ್‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಹೊಸ ಕವಾಸಕಿ ಝಡ್900 ಬೈಕ್

ಹೊಸ ಕವಾಸಕಿ ಝಡ್‍900 ಬೈಕಿನಲ್ಲಿ 948 ಸಿಸಿ ಇನ್‍-ಲೈನ್ ನಾಲ್ಕು ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 9,500 ಆರ್‍‍‍ಪಿಎಂನಲ್ಲಿ 123 ಬಿ‍‍ಹೆಚ್‍‍ಪಿ ಪವರ್ ಮತ್ತು 7,700 ಆರ್‍‍ಪಿಎಂನಲ್ಲಿ 98.4 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾಯ್ತು ಹೊಸ ಕವಾಸಕಿ ಝಡ್900 ಬೈಕ್

ಈ ಎಂಜಿನ್‍‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಟ್ರಾಕ್ಷನ್ ಕಂಟ್ರೂಲ್, ಸ್ಟ್ರಾಂಗ್ ಫ್ರೇಮ್ ಮತ್ತು ಡನ್‍‍ಲಾಪ್ ಸ್ಪೋರ್ಟ್ಸ್‌ಮ್ಯಾಕ್ಸ್ ರೋಡ್ಸ್‌ಪೋರ್ಟ್ 2 ಟಯರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಕವಾಸಕಿ ಝಡ್900 ಬೈಕ್

ಹೊಸ ಕವಾಸಕಿ ಝಡ್900 ಬೈಕ್ ಅನ್ನು ಎರಡು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ನೀಡುತ್ತದೆ. ಇದು ಮೆಟಾಲಿಕ್ ಗ್ರ್ಯಾಫೈಟ್ ಗ್ರೇ ಜೊತೆ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಜೊತೆ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣಗಳಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಯ್ತು ಹೊಸ ಕವಾಸಕಿ ಝಡ್900 ಬೈಕ್

ಹೊಸ ಕವಸಾಕಿ ಝಡ್900 ಬೈಕ್ ಇತರ ಬದಲಾವಣೆಗಳನ್ನು ಮಾಡಲಾಗಿಲ್ಲ. ಉಳಿದಂತೆ ಸಸ್ಪೆಂಕ್ಷನ್ ಸೆಟಪ್ ಗಾಗಿ ಮುಂಭಾಗದಲ್ಲಿ ಅದೇ 41 ಎಂಎಂ ಯು‍ಎಸ್‍‍ಡಿ ಫೋರ್ಕ್‍‍ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಕವಾಸಕಿ ಝಡ್900 ಬೈಕ್

ಕವಾಸಕಿ ಝಡ್900 ಬೈಕ್‍‍ನಲ್ಲಿ ಹೊಸ ಪವರ್ ಮೋಡ್‍ನೊಂದಿಗೆ ಸ್ಪೋರ್ಟ್, ರೈನ್, ರೋಡ್ ಮತ್ತು ಮ್ಯಾನುವಲ್ ಎಂಬ ನಾಲ್ಕು ರೈಡಿಂಗ್ ಮೋಡ್‍‍ಗಳನ್ನು ನೀಡಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಬಿಡುಗಡೆಯಾಯ್ತು ಹೊಸ ಕವಾಸಕಿ ಝಡ್900 ಬೈಕ್

ಬ್ರೇಕಿಂಗ್ ಸಿಸ್ಟಂನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಮುಂಭಾಗದಲ್ಲಿ ಡ್ಯುಯಲ್ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಪೆಟಲ್ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಕವಾಸಕಿ ಝಡ್900 ಬೈಕ್

ಕವಾಸಕಿ ಝಡ್900 ಪ್ರೀಮಿಯಂ ಸೂಪರ್‍‍ನೇಕಡ್ ಬೈಕ್ ಆಗಿದೆ. ಕವಾಸಕಿ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗುತ್ತಿದೆ. ಅದರಂತೆ ಬಿಎಸ್-6 ಕವಾಸಕಿ ಝಡ್900 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

Article Published On: Tuesday, September 8, 2020, 18:41 [IST]
English summary
Kawasaki Z900 BS6 Launched In India. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+