ಬಹಿರಂಗವಾಯ್ತು ಹೊಸ ಯಮಹಾ ಬೈಕುಗಳ ಮಾಹಿತಿ

ಯಮಹಾ ಕಂಪನಿಯು ತನ್ನ ಬಹುನೀರಿಕ್ಷಿತ ಹೊಸ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಿಡುಗಡೆಯಾಗಲಿರುವ ಹೊಸ ಯಮಹಾ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳ ಮಾಹಿತಿಯು ಬಹಿರಂಗವಾಗಿದೆ.

ಬಹಿರಂಗವಾಯ್ತು ಹೊಸ ಯಮಹಾ ಬೈಕುಗಳ ಮಾಹಿತಿ

ಇತ್ತೀಚೆಗೆ ಈ ಎರಡು ಬೈಕುಗಳ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಲಾಗಿತ್ತು. ಯಮಹಾ ಕಂಪನಿಯು ಹೊಸ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳನ್ನು ಈ ತಿಂಗಳಲ್ಲಿ ಬಿಡುಗಡೆಗೊಳಿಸಬೇಕಾಗಿತ್ತು. ಆದರೆ ಕರೋನಾ ವೈರಸ್ ನಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಆಗಿದೆ. ಇದರಿಂದ ಯಮಹಾ ಬೈಕುಗಳ ಬಿಡುಗಡೆಯನ್ನು ಮುಂದೂಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಯಮಹಾ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಬಹಿರಂಗವಾಯ್ತು ಹೊಸ ಯಮಹಾ ಬೈಕುಗಳ ಮಾಹಿತಿ

ಬಹಿರಂಗವಾದ ಮಾಹಿತಿಯ ಪ್ರಕಾರ ಹೊಸ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳು ಪಟಿನಾ ಗ್ರೀನ್, ಡಾರ್ಕ್ ಮ್ಯಾಟ್ ಬ್ಲೂ ಮತ್ತು ವೈಟ್ ವರ್ಮಿಲಿಯನ್ ಎಂಬ ಮೂರು ರೀತಿಯ ಬಣ್ಣಗಳಲ್ಲಿ ಲಭ್ಯವಿರಲಿದೆ.

MOST READ: ದುಬಾರಿಯಾಯ್ತು ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್

ಬಹಿರಂಗವಾಯ್ತು ಹೊಸ ಯಮಹಾ ಬೈಕುಗಳ ಮಾಹಿತಿ

ಬಿಎಸ್-6 ಯಮಹಾ ಎಫ್‍ಝಡ್ 25 ಬೈಕಿನ ಸ್ಟೈಲಿಂಗ್ ಅನ್ನು ಹಳೆಯ ಮಾದರಿಗಿಂತ ಸ್ವಲ್ಪ ನವೀಕರಿಸಲಾಗಿದೆ. ಬೈ-ಫಂಕ್ಷನಲ್ ಎಲ್ಇಡಿ ಯುನಿಟ್ ನೊಂದಿಗೆ ಹೆ‍ಡ್ ಲ್ಯಾಂಪ್ ಕ್ಲಸ್ಟರ್, ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ ಎಲ್‌ಸಿಡಿ ಡಿಸ್‍ಪ್ಲೇ, ಇದರಲ್ಲಿ ಅಂಡರ್‌ಬೆಲ್ಲಿ ಕೌಲ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸೇರಿವೆ. ಇದರೊಂದಿಗೆ ಹೊಸದಾಗಿ ವಿಂಡ್‌ಶೀಲ್ಡ್, ಬ್ರಷ್ ಗಾರ್ಡ್‌ಗಳು ಮತ್ತು ನಕಲ್ ಗಾರ್ಡ್‌ಗಳಂತಹ ಗಮನಾರ್ಹ ಸೇರ್ಪಡೆಗಳನ್ನು ಹೊಂದಿದೆ.

ಬಹಿರಂಗವಾಯ್ತು ಹೊಸ ಯಮಹಾ ಬೈಕುಗಳ ಮಾಹಿತಿ

ಹೊಸ ಎಫ್‍ಝಡ್ 25 ಬೈಕಿನ ಸ್ಟೈಲಿಂಗ್ ಅನ್ನು ಹಳೆಯ ಮಾದರಿಗಿಂತ ಕೆಲವು ನವೀಕರಣಗಳನ್ನು ಮಾಡಲಾಗಿದೆ. ಎಫ್‍ಝಡ್ 25 ಬೈಕ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಎಫ್‍ಝಡ್ 25 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಬಹಿರಂಗವಾಯ್ತು ಹೊಸ ಯಮಹಾ ಬೈಕುಗಳ ಮಾಹಿತಿ

ಈ ಬೈಕಿನ ವಿನ್ಯಾಸದಲ್ಲಿ ಬದಲಾವಣೆಗಳನ್ನು ಹೊರತುಪಡಿಸಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲವೆಂದು ನಿರೀಕ್ಷಿಸುತ್ತೇವೆ. ಹೊಸ ಯಮಹಾ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕಿನಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಿದೆ.

ಬಹಿರಂಗವಾಯ್ತು ಹೊಸ ಯಮಹಾ ಬೈಕುಗಳ ಮಾಹಿತಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಯಮಹಾ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕಿನಲ್ಲಿರುವ ಬಿಎಸ್-4, 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 20.6 ಬಿಹೆಚ್‌ಪಿ ಪವರ್ ಮತ್ತು 20.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಟ್ರಾನ್ಸ್‌ಮಿಷನ್‌ ಅನ್ನು ಅಳವಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಹಿರಂಗವಾಯ್ತು ಹೊಸ ಯಮಹಾ ಬೈಕುಗಳ ಮಾಹಿತಿ

ಬೈಕ್ ಮುಂಭಾಗದಲ್ಲಿ ಟಿ‍‍ಲಿ‍ಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ. ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎ‍ಬಿಎಸ್ ಅನ್ನು ಅನ್ನು ಅಳವಡಿಸಿದ್ದಾರೆ.

ಬಹಿರಂಗವಾಯ್ತು ಹೊಸ ಯಮಹಾ ಬೈಕುಗಳ ಮಾಹಿತಿ

ಹೊಸ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 250, ಸುಜುಕಿ ಜಿಕ್ಸರ್ 250, ಹಸ್ಕವರ್ನಾ ಸಾವರ್ಟ್‌ಪಿಲೆನ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಬಜಾಜ್ ಡೊಮಿನಾರ್ 250 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Tuesday, April 21, 2020, 13:01 [IST]
English summary
2020 Yamaha FZ25 And FZS 25 Details Revealed. Read in Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+