Just In
- 54 min ago XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 2 hrs ago Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- 16 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 17 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಣ್ಣದ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್900 ಬೈಕ್
ಕವಾಸಕಿ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ 2021ರ ಝಡ್900 ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. 2021ರ ಕವಾಸಕಿ ಝಡ್900 ಬೈಕನ್ನು ಹೊಸ ಮೂರು ಬಣ್ಣಗಳ ಆಯ್ಕೆಯಲ್ಲಿ ಅನಾವರಣಗೊಳಿಸಿದೆ.
ಇನ್ನು ಕವಾಸಕಿ ಇಂಡಿಯಾ ಕಂಪನಿಯು ತನ್ನ ಝಡ್900 ಬೈಕನ್ನು ಭಾರತದಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಈಗಗಾಲೇ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ಝಡ್900 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.99 ಲಕ್ಷಗಳಾಗಿದೆ. ಭಾರತದಲ್ಲಿ ಹೊಸ ಕವಾಸಕಿ ಝಡ್900 ಬೈಕ್ ಅನ್ನು ಎರಡು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.
ಇದು ಮೆಟಾಲಿಕ್ ಗ್ರ್ಯಾಫೈಟ್ ಗ್ರೇ ಜೊತೆ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಜೊತೆ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣಗಳಾಗಿದೆ. ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದ 2021ರ ಝಡ್900 ಬೈಕಿನಲ್ಲಿ ಈ ಎರಡು ಡ್ಯುಯಲ್ ಟೋನ್ ಬಣ್ಣಗಳೊಂದಿಗೆ ಪರ್ಲ್ ಬಿಝರ್ಡ್ ವೈಟ್ ಜೊತೆ ಸ್ಮಾರ್ಕ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್
ಇನ್ನು ಹೊಸ ಹೆಡ್ಲ್ಯಾಂಪ್ ಮತ್ತು ಟೇಲ್ಲೈಟ್, ಎಲ್ಇಡಿ ಲೈಟ್ಗಳು ಮತ್ತು ಎರಡು ಕಡೆಗಳಲ್ಲಿ ನವೀಕರಿಸಿದ ಸಸ್ಪೆಂಕ್ಷನ್ ಸೆಟ್ಟಿಂಗ್ಗಳು ಮತ್ತು ರೈಡಿಯಾಲಜಿ ಎಂಬ ಆ್ಯಪ್ ಮೂಲಕ ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಹೊಂದಿರುವ ಹೊಸ 4.3 ಇಂಚಿನ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.
ಹೊಸ ಕವಾಸಕಿ ಝಡ್900 ಬೈಕಿನಲ್ಲಿ 948 ಸಿಸಿ ಇನ್-ಲೈನ್ ನಾಲ್ಕು ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 9,500 ಆರ್ಪಿಎಂನಲ್ಲಿ 123 ಬಿಹೆಚ್ಪಿ ಪವರ್ ಮತ್ತು 7,700 ಆರ್ಪಿಎಂನಲ್ಲಿ 98.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್
ಈ ಎಂಜಿನ್ನೊಂದಿಗೆ 6 ಸ್ಪೀಡ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಟ್ರಾಕ್ಷನ್ ಕಂಟ್ರೂಲ್, ಸ್ಟ್ರಾಂಗ್ ಫ್ರೇಮ್ ಮತ್ತು ಡನ್ಲಾಪ್ ಸ್ಪೋರ್ಟ್ಸ್ಮ್ಯಾಕ್ಸ್ ರೋಡ್ಸ್ಪೋರ್ಟ್ 2 ಟಯರ್ಗಳನ್ನು ಅಳವಡಿಸಲಾಗಿದೆ.
ಹೊಸ ಕವಸಾಕಿ ಝಡ್900 ಬೈಕ್ ಇತರ ಬದಲಾವಣೆಗಳನ್ನು ಮಾಡಲಾಗಿಲ್ಲ. ಉಳಿದಂತೆ ಸಸ್ಪೆಂಕ್ಷನ್ ಸೆಟಪ್ ಗಾಗಿ ಮುಂಭಾಗದಲ್ಲಿ ಅದೇ 41 ಎಂಎಂ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್
ಕವಾಸಕಿ ಝಡ್900 ಬೈಕ್ನಲ್ಲಿ ಹೊಸ ಪವರ್ ಮೋಡ್ನೊಂದಿಗೆ ಸ್ಪೋರ್ಟ್, ರೈನ್, ರೋಡ್ ಮತ್ತು ಮ್ಯಾನುವಲ್ ಎಂಬ ನಾಲ್ಕು ರೈಡಿಂಗ್ ಮೋಡ್ಗಳನ್ನು ನೀಡಲಾಗಿದೆ.
ಬ್ರೇಕಿಂಗ್ ಸಿಸ್ಟಂನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಮುಂಭಾಗದಲ್ಲಿ ಡ್ಯುಯಲ್ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಪೆಟಲ್ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.
ಕವಾಸಕಿ ಝಡ್900 ಪ್ರೀಮಿಯಂ ಸೂಪರ್ನೇಕಡ್ ಬೈಕ್ ಆಗಿದೆ. ಕವಾಸಕಿ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗುತ್ತಿದೆ.