ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಕವಾಸಕಿ ಕಂಪನಿಯು ತನ್ನ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಕವಾಸಕಿ ಝಡ್ ಹೆಚ್2 ಎಸ್ಇ ಸೂಪರ್ ಚಾರ್ಜ್ಡ್ ನೇಕೆಡ್ ಮಾದರಿಯಾಗಿದೆ.

ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಈ ಕವಾಸಕಿ ಝಡ್ ಹೆಚ್2 ಎಸ್ಇ ಸೂಪರ್ ಬೈಕ್ ಹೊಸ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಪ್ರಮುಖವಾಗಿ ಈ ಸೂಪರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಅನ್ನು ಅಪ್ಡೇಟ್ ಮಾಡಲಾಗಿದೆ. ಈ ಹೊಸ ವಾಸಕಿ ಝಡ್ ಹೆಚ್2 ಎಸ್ಇ ಬೈಕಿನಲ್ಲಿ (ಕೆಇಸಿಎಸ್) ಕವಾಸಕಿ ಎಲೆಕ್ಟ್ರಾನಿಕ್ ಕಂಟ್ರೋಲ್ ಸಸ್ಪೆಂಕ್ಷನ್ ಅನ್ನು ಒಳಗೊಂಡಿದೆ. ಈ ಹೊಸ ಸಸ್ಪೆಂಕ್ಷನ್ ಸೆಟಪ್ ಕಠಿಣ ರಸ್ತೆಗಳಿಲ್ಲಿಯು ಉತ್ತಮ ಸವಾರಿ ಅನುಭವವನ್ನು ನೀಡುತ್ತದೆ.

ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಹೊಸ ವಾಸಕಿ ಝಡ್ ಹೆಚ್2 ಎಸ್ಇ ಬೈಕಿನ ಮುಂಭಾಗ ಶೋವಾ ಮೂಲದ ಹೋಂದಾಣಿಕ ಮಾಡಬಹುದಾದ 43 ಎಂಎಂ ಯುಎಸ್ಡಿ ಫೋರ್ಕ್ ಅನ್ನು ಹೊಂದಿದೆ. ಇದನ್ನು ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಹೊಸ ಯುನಿ ಟ್ರ್ಯಾಕ್, ಬಿಎಫ್‌ಆರ್‌ಸಿ ಲೈಟ್ ಗ್ಯಾಸ್-ಚಾರ್ಜ್ಡ್ ಶಾಕ್ ಅನ್ನು ಪಿಗ್ಗಿಬ್ಯಾಕ್ ಶೋವಾದಿಂದ ಪಡೆಯಲಾಗುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಶೋವಾ ಅವರ ಸ್ಕೈಹೂಕ್ ಇಇಆರ್ಎ (ಎಲೆಕ್ಟ್ರಾನಿಕ್ ಸಜ್ಜುಗೊಂಡ ರೈಡ್ ಹೊಂದಾಣಿಕೆ) ತಂತ್ರಜ್ಞಾನವು ಇನ್ನಷ್ಟು ಆರಾಮದಾಯಕ ರೈಡಿಂಗ್ ಅನುಭವವನ್ನು ನೀಡುತ್ತದೆ. ಇನ್ನು ಈ ಹೊಸ ಸೂಪರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಅನ್ನು ಕೂಡ ಅಪ್ಡೇಟ್ ಮಾಡಲಾಗಿದೆ.

ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಹೊಸ ವಾಸಕಿ ಝಡ್ ಹೆಚ್2 ಎಸ್ಇ ಬೈಕ್ ಡ್ಯುಯಲ್ ಸೆಮಿ-ಫ್ಲೋಟಿಂಗ್ 320 ಎಂಎಂ ಡಿಸ್ಕ್ ಜೊತೆಗೆ ಬ್ರೆಂಬೊ ಸ್ಟೈಲ್ಮಾ ಮೊನೊಬ್ಲೋಕ್ ರೇಡಿಯಲ್-ಮೌಂಟೆಡ್ 4-ಪಿಸ್ಟನ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಒಂದೇ 260 ಎಂಎಂ ಡಿಸ್ಕ್ ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಹೊಸ ಕವಾಸಕಿ ಝಡ್ ಹೆಚ್2 ಎಸ್ಇ ಬೈಕಿನಲ್ಲಿ ಇಂಟೆಲಿಜೆಂಟ್ ಆಂಟಿ-ಲಾಕ್ ಬ್ರೇಕ್ ಸಿಸ್ಟಮ್, (ಕೆಕ್ಯೂಎಸ್) ಕವಾಸಕಿ ಕ್ವಿಕ್ ಶಿಫ್ಟರ್, (ಕೆಎಲ್‌ಸಿಎಂ) ಕವಾಸಕಿ ಲಾಂಚ್ ಕಂಟ್ರೋಲ್ ಮೋಡ್, (ಕೆಸಿಎಂಎಫ್) ಕವಾಸಕಿ ಕಾರ್ನರಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್ ಮತ್ತು 6-ಆಕ್ಸಿಸ್ ಐಎಂಯು ಫೀಚರ್ ಅನ್ನು ಹೊಂದಿದೆ.

ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಇನ್ನು ಈ ಹೊಸ ಬೈಕಿನಲ್ಲಿ ಟ್ಯಾಕ್ಷನ್ ಕಂಟ್ರೋಲ್, ಪವರ್ ಮೋಡ್, ಎಲೆಕ್ಟ್ರಾನಿಕ್ ಕ್ರೂಸ್ ಎಂಬ ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ ಇಂಚಿನ ಪೂರ್ಣ-ಬಣ್ಣದ ಟಿಎಫ್‌ಟಿ ಎಲ್‌ಸಿಡಿ ಡಿಸ್ ಪ್ಲೇಯನ್ನು ಹೊಂದಿದೆ. ಇದರಲ್ಲಿ ಡಿಜಿಟಲ್ ಸ್ಪೀಡೋಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್, ಶಿಫ್ಟ್ ಇಂಡಿಕೇಟರ್, ಓಡೋಮೀಟರ್, ಡ್ಯುಯಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್ ಮತ್ತು ಹೆಚ್ಚಿನ ಮಾಹಿತಿಯನ್ನು ಪ್ರದರ್ಶಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಇನ್ನು ಈ ಹೊಸ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಡಿಸ್ ಪ್ಲೇ ಮತ್ತು ಹ್ಯಾಂಡಲ್‌ಬಾರ್‌ನಲ್ಲಿರುವ ಸ್ವಿಚ್-ಗೇರ್ ಕ್ಯೂಬ್ ಮೂಲಕ ಸವಾರನು ಎಲೆಕ್ಟ್ರಾನಿಕ್ ಫೀಚರ್ ಗಳನ್ನು ನಿಯಂತ್ರಿಸಬಹುದು

ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಹೊಸ ಕವಾಸಕಿ ಝಡ್ ಹೆಚ್2 ಎಸ್ಇ ಬೈಕಿನಲ್ಲಿ ಇನ್-ಲೈನ್ ನಾಲ್ಕು-ಸಿಲಿಂಡರ್ 998 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 11,000 ಆರ್‌ಪಿಎಂನಲ್ಲಿ ಗರಿಷ್ಠ 198 ಬಿಹೆಚ್‌ಪಿ ಮತ್ತು 8,500 ಆರ್‌ಪಿಎಂನಲ್ಲಿ 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್-ಅಸಿಸ್ಟ್ ಕ್ಲಚ್ ಮತ್ತು ಕ್ವಿಕ್ ಶಿಫ್ಟರ್ ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ.

ಹೊಸ ಹೈ-ಪರ್ಫಾಮೆನ್ಸ್ ಝಡ್ ಹೆಚ್2 ಎಸ್ಇ ಬೈಕನ್ನು ಅನಾವರಣಗೊಳಿಸಿದ ಕವಾಸಕಿ

ಈ ಜಪನೀಸ್ ಸೂಪರ್‌ನೇಕೆಡ್ ಬೈಕ್ ಪ್ರೀಮಿಯಂ ಹಾರ್ಡ್‌ವೇರ್ ಅನ್ನು ಪಡೆಯುತ್ತದೆ. ಇದು ರೈಡಿಂಗ್ ಅನುಭವನ್ನು ಹೆಚ್ಚಿಸುತ್ತದೆ. ಈ ಹೊಸ ಬೈಕಿನಲ್ಲಿ ಸಾಕಷ್ಟು ಎಲೆಕ್ಟ್ರಾನಿಕ್ ಫೀಚರ್ ಮತ್ತು ಉತ್ತಮ ಸಸ್ಪೆಂಕ್ಷನ್ ಅನ್ನು ಹೊಂದಿರುವುದರಿಂದ ಸವಾರನಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ.

Article Published On: Friday, November 27, 2020, 9:47 [IST]
English summary
2021 Kawasaki Z H2 SE Globally Unveiled. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+