ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್250 ಬೈಕ್

ಕವಾಸಕಿ ಕಂಪನಿಯು ತನ್ನ 2021ರ ಝಡ್250 ಕ್ವಾಟರ್ ಲೀಟರ್ ಸ್ಟ್ರೀಟ್ ನೇಕೆಡ್ ಆವೃತ್ತಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಕವಾಸಕಿ ಝಡ್250 ಬೈಕ್ ಬಾಡಿವರ್ಕ್, ಫೀಚರ್ ಗಳು ಮತ್ತು ಹಾರ್ಡ್‌ವೇರ್ ವಿಷಯದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್250 ಬೈಕ್

ಆದರೆ 2021ರ ಕವಾಸಕಿ ಝಡ್250 ಬೈಕ್ ಎರಡು ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ.' ಪರ್ಲ್ ನೈಟ್ ಶೇಡ್ ಟೀಲ್ ಎಕ್ಸ್ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್' ಮತ್ತು 'ಕ್ಯಾಂಡಿ ಕಾರ್ಡಿನಲ್ ರೆಡ್ ಎಕ್ಸ್ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್' ಎಂಬ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನು ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಹೊಸ ಬೈಕ್ ದೊಡ್ಡ ಝಡ್ ಮಾದರಿಗಳಿಂದ ಸ್ಫೂರ್ತಿ ಪಡೆದಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್250 ಬೈಕ್

2021ರ ಕವಾಸಕಿ ಝಡ್250 ಬೈಕಿನಲ್ಲಿ ಮಸ್ಕಲರ್ ಬಾಡಿ ಪ್ಯಾನೆಲ್ ಶಾರ್ಪ್ ಎಡ್ಜ್ ಅನ್ನು ಹೊಂದಿದೆ. ಕವಾಸಕಿ ಝಡ್250 ಬೈಕಿನಲ್ಲಿ ಪವರ್ ಫುಲ್ 248ಸಿಸಿ, ಪ್ಯಾರೆಲಲ್-ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್250 ಬೈಕ್

ಈ ಎಂಜಿನ್ 36.5 ಬಿಹೆಚ್‌ಪಿ ಪವರ್ ಮತ್ತು 22.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6- ಸ್ಪೀಡ್ ಗೇರ್‌ಬಾಕ್ಸ್‌ಗೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್250 ಬೈಕ್

ಇನ್ನು 2021ರ ಕವಾಸಕಿ ಝಡ್250 ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ರಮವಾಗಿ 110 ಮತ್ತು 140 ವಿಭಾಗದ ಟಯರ್ ಗಳನ್ನು ಹೊಂದಿರುವ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್250 ಬೈಕ್

ಇನ್ನು ಈ ಹೊಸ ಕವಾಸಕಿ ಝಡ್250 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್250 ಬೈಕ್

ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಸೆಟಪ್ ಅನ್ನು ನೀಡಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್250 ಬೈಕ್

ಇನ್ನು ಭಾರತೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ, ಕವಾಸಕಿ ಕಂಪನಿಯು ಮುಂದಿನ ವರ್ಷ ಭಾರತದಲ್ಲಿ ಡಬ್ಲ್ಯು175 ಎಂಬ ಅತ್ಯಂತ ಚಿಕ್ಕ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಅತ್ಯಂತ ಒಳ್ಳೆ ಬೈಕ್ ಆಗಿರುತ್ತದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ಝಡ್250 ಬೈಕ್

ಕವಾಸಕಿ ಝಡ್250 ಬೈಕ್ ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್250 ಬೈಕ್ ಬೇಡಿಕೆಯು ಕುಸಿದ ಕಾರಣ ಸ್ಥಗಿತಗೊಳಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್250 ಬೈಕ್ ಉತ್ತಮವಾಗಿ ಮಾರಾಟವಾಗುತ್ತಿದೆ.

Article Published On: Sunday, October 25, 2020, 13:00 [IST]
English summary
2021 Kawasaki Z250 Unveiled. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+