80 ಹೊಸ ಶೋರೂಂಗಳನ್ನು ತೆರೆಯಲಿದೆ ಎಪ್ರಿಲಿಯಾ

ಭಾರತದಲ್ಲಿ ಆಟೋಮ್ಯಾಟಿಕ್ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದರ ಜೊತೆಗೆ ಗ್ರಾಹಕರು ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ವಿಶಿಷ್ಟ ವಿನ್ಯಾಸದ ಸ್ಕೂಟರ್‍‍ಗಳಿಗೆ ಹೆಚ್ಚು ಗಮನವನ್ನು ನೀಡುತ್ತಿದ್ದಾರೆ. ಈ ಕಾರಣಕ್ಕಾಗಿ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮ್ಯಾಕ್ಸಿ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುತ್ತಿವೆ.

80 ಹೊಸ ಶೋರೂಂಗಳನ್ನು ತೆರೆಯಲಿದೆ ಎಪ್ರಿಲಿಯಾ

ಎಪ್ರಿಲಿಯಾ ಕಳೆದ ತಿಂಗಳು ನಡೆದಿದ್ದ ಆಟೋ ಎಕ್ಸ್‌ಪೋದಲ್ಲಿ ಎಸ್‌ಎಕ್ಸ್‌ಆರ್ 125 ಹಾಗೂ ಎಸ್‌ಎಕ್ಸ್‌ಆರ್ 160 ಎಂಬ ಎರಡು ವಿಶಿಷ್ಟ ರೀತಿಯ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು. ಎಪ್ರಿಲಿಯಾ ಈ ವರ್ಷದ ಜುಲೈ ಹಾಗೂ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಎರಡು ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲು ಬಯಸಿದೆ.

80 ಹೊಸ ಶೋರೂಂಗಳನ್ನು ತೆರೆಯಲಿದೆ ಎಪ್ರಿಲಿಯಾ

ಈ ಸ್ಕೂಟರ್‍‍ಗಳ ಬುಕ್ಕಿಂಗ್‍‍ಗಳನ್ನು ಆಗಸ್ಟ್‌ನಲ್ಲಿ ಆರಂಭಿಸಿ, ಸೆಪ್ಟೆಂಬರ್‌ನಲ್ಲಿ ಮಾರಾಟ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಎಪ್ರಿಲಿಯಾ ಈ ಹೊಸ ಸ್ಕೂಟರ್‌ಗಳನ್ನು ತನ್ನ ಗ್ರಾಹಕರಿಗೆ ಹೆಚ್ಚು ಹತ್ತಿರವಾಗಿಸಲು ಮುಂದಾಗಿದೆ.

80 ಹೊಸ ಶೋರೂಂಗಳನ್ನು ತೆರೆಯಲಿದೆ ಎಪ್ರಿಲಿಯಾ

ಇದಕ್ಕಾಗಿ ಎಪ್ರಿಲಿಯಾ ಹೊಸ ದ್ವಿಚಕ್ರ ವಾಹನ ಶೋ ರೂಂಗಳನ್ನು ತೆರೆಯಲು ಮುಂದಾಗಿದೆ. ಮೊದಲ ಹಂತದ ನಗರಗಳನ್ನು ಹೊರತುಪಡಿಸಿ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಹೊಸ ಶೋ ರೂಂಗಳನ್ನು ತೆರೆಯುವ ಯೋಜನೆಯನ್ನು ಎಪ್ರಿಲಿಯಾ ಹೊಂದಿದೆ.

80 ಹೊಸ ಶೋರೂಂಗಳನ್ನು ತೆರೆಯಲಿದೆ ಎಪ್ರಿಲಿಯಾ

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಹಾಗೂ ಎಸ್‌ಎಕ್ಸ್‌ಆರ್ 160 ಸ್ಕೂಟರ್‌ಗಳನ್ನು ಕ್ರಾಸ್ಒವರ್ ಸ್ಕೂಟರ್‌ ರೀತಿಯಲ್ಲಿ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್‌ಗಳಲ್ಲಿ ಡ್ಯುಯಲ್ ಎಲ್‌ಇಡಿ ಹೆಡ್‌ಲೈಟ್, ಡ್ಯುಯಲ್ ಎಲ್‌ಇಡಿ ಟೇಲ್ ಲೈಟ್ ಕ್ಲಸ್ಟರ್‌ಗಳಿವೆ.

80 ಹೊಸ ಶೋರೂಂಗಳನ್ನು ತೆರೆಯಲಿದೆ ಎಪ್ರಿಲಿಯಾ

ದೊಡ್ಡ ಗಾತ್ರದ ವಿಂಡ್‌ಸ್ಕ್ರೀನ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸೀಟಿನ ಕೆಳಗಿರಿಸಲಾಗಿದೆ. ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಹಾಗೂ ಎಸ್‌ಎಕ್ಸ್‌ಆರ್ 160 ಸ್ಕೂಟರ್‍‍ಗಳಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅಳವಡಿಸಲಾಗಿದೆ.

80 ಹೊಸ ಶೋರೂಂಗಳನ್ನು ತೆರೆಯಲಿದೆ ಎಪ್ರಿಲಿಯಾ

ಎಪ್ರಿಲಿಯಾ ಈ ಎಂಜಿನ್‌ಗಳ ತಾಂತ್ರಿಕ ವಿವರಗಳನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಹೊಸ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಹಾಗೂ ಎಸ್‌ಎಕ್ಸ್‌ಆರ್ 160 ಸ್ಕೂಟರ್‌ಗಳನ್ನು ಭಾರತದಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು.

80 ಹೊಸ ಶೋರೂಂಗಳನ್ನು ತೆರೆಯಲಿದೆ ಎಪ್ರಿಲಿಯಾ

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ 125 ಸ್ಕೂಟರಿಗೆ ಪೈಪೋಟಿ ನೀಡುತ್ತದೆ. ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರಿಗೆ ಪೈಪೋಟಿ ನೀಡುವ ಯಾವುದೇ ಸ್ಕೂಟರ್ ಸದ್ಯಕ್ಕೆ ಇಲ್ಲ.

More from DriveSpark

Article Published On: Tuesday, March 10, 2020, 17:38 [IST]
English summary
Aprilia to open 80 new showrooms in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+