ಭಾರತದ ಮೊದಲ ಮತ್ತು ಕೊನೆಯ ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಇಟಾಲಿಯನ್ ಮೋಟಾರ್‌ಸೈಕಲ್ ಉತ್ಪಾದನಾ ಸಂಸ್ಥೆಯಾದ ಎಪ್ರಿಲಿಯಾ ತನ್ನ ಜನಪ್ರಿಯ ಆರ್‌ಎಸ್‌ವಿ4 1100 ಫ್ಯಾಕ್ಟರಿ ಬೈಕ್ ಮಾದರಿಯ ಮೊದಲ ಯುನಿಟ್ ಅನ್ನು ಭಾರತದಲ್ಲಿ ವಿತರಿಸಿದ್ದು, ಬೆಂಗಳೂರು ಮೂಲದ ಡಾ.ಮಿರ್ಜಾ ಎನ್ನುವವರು ಮೊದಲ ಯುನಿಟ್ ಅನ್ನು ಖರೀದಿಸಿದ್ದಾರೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಮೊಟೊಪ್ಲೆಕ್ಸ್ ಶೋರೂಂನಲ್ಲಿ ಏಪ್ರಿಲಿಯಾ ಹೊಸ ಆರ್‌ಎಸ್‌ವಿ4 1100 ಫ್ಯಾಕ್ಟರಿ ಬೈಕ್ ವಿತರಣೆ ಮಾಡಲಾಗಿದ್ದು, ಹೊಸ ಬೈಕ್ ಅನ್ನು ಈ ಮೊದಲು ಫೆಬ್ರುವರಿ ಆರಂಭದಲ್ಲಿ ನಡೆದಿದ್ದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿ ಬಿಡುಗಡೆ ಮಾಡಲಾಗಿತ್ತು. ಲಿಮಿಟೆಡ್ ಎಡಿಷನ್ ಮಾದರಿಯಾದ ಆರ್‌ಎಸ್‌ವಿ4 1100 ಫ್ಯಾಕ್ಟರಿ ಬೈಕ್ ಮಾದರಿಯು ಯುರೋ 4 ವೈಶಿಷ್ಟ್ಯತೆಯನ್ನು(ಬಿಎಸ್-4 ಸಮಾಂತರ) ಹೊಂದಿದ್ದು, ಬಿಡುಗಡೆಯ ನಂತರ ಕೇವಲ ಒಂದೇ ಒಂದು ಯುನಿಟ್ ಮಾತ್ರ ಮಾರಾಟಗೊಂಡಿದೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ಜಾರಿಯಾಗುತ್ತಿರುವುದರಿಂದ ಹೊಸ ಬೈಕ್ ಕೇವಲ ಮಾರ್ಚ್ 31ರ ತನಕ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ತದನಂತರ ಮಾರಾಟಗೊಳಿಸಿದರೂ ಅದು ನೋಂದಣಿಯಾಗುವುದಿಲ್ಲ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಈ ಹಿನ್ನಲೆಯಲ್ಲಿ ಸಂಪೂರ್ಣ ಸಿಕೆಡಿ ಆವೃತ್ತಿಯಾಗಿರುವ ಆರ್‌ಎಸ್‌ವಿ4 1100 ಫ್ಯಾಕ್ಟರಿ ಬೈಕಿನ ಮೊದಲ ಯುನಿಟ್ ವಿತರಣೆ ನಂತರ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಬೈಕ್ ಮಾದರಿಯು ಬಿಎಸ್-6 ಎಂಜಿನ್ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಆದರೆ, ಸದ್ಯಕ್ಕೆ ಯುರೋ-4 ಎಂಜಿನ್ ಪ್ರೇರಿತ ಆರ್‌ಎಸ್‌ವಿ4 1100 ಫ್ಯಾಕ್ಟರಿ ಬೈಕ್ ಮಾದರಿಯು ಭಾರತದಲ್ಲಿ ಕೇವಲ ಒಂದೇ ಒಂದು ಎಂಬ ಹೆಗ್ಗಳಿಕೆ ಪಾತ್ರವಾಗಲಿದ್ದು, ಈ ಬೈಕ್ ಬೆಂಗಳೂರು ಆನ್-ರೋಡ್ ಪ್ರಕಾರ ರೂ. 30 ಲಕ್ಷ ಬೆಲೆ ಪಡೆದುಕೊಂಡಿದೆ. ಬೆಲೆಗೆ ತಕ್ಕಂತೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳನ್ನು ಪಡೆದುಕೊಂಡಿರುವ ಆರ್‌ಎಸ್‌ವಿ4 1100 ಫ್ಯಾಕ್ಟರಿ ಬೈಕ್ ಮಾದರಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯತೆಯೊಂದಿಗೆ ಟಾಪ್ ಹತ್ತರ ಬೆಸ್ಟ್ ಸೂಪರ್ ಬೈಕ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಹೊಸ ಬೈಕಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಹಲವಾರು ಆಕರ್ಷಕ ಸೌಲಭ್ಯಗಳನ್ನು ನೀಡಿದ್ದು, ಬೈಕಿನ ಬಹುತೇಕ ಬಿಡಿಭಾಗಗಳ ಮೇಲೆ ಕಾರ್ಬನ್ ಫೈಬರ್ ಕವರ್ ವೈಶಿಷ್ಟ್ಯತೆಯನ್ನು ಹೊಂದಿವೆ. ಹಾಗೆಯೇ ಹೊಸ ಬೈಕಿನಲ್ಲಿ ಏರೋ ಡೈನಾಮಿಕ್ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಇದು ಅತಿ ವೇಗದಲ್ಲೂ ಬೈಕಿನ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಇನ್ನು ಹೊಸ ಬೈಕ್ ಅನ್ನು ಡ್ಯುಯಲ್ ಭೀಮ್ ಚಾರ್ಸಿಸ್ ಮೇಲೆ ನಿರ್ಮಾಣ ಮಾಡಲಾಗಿದ್ದು, ಮುಂಭಾಗದಲ್ಲಿ ನೀಡಲಾಗಿರುವ ಮೂರು ಹಂತದ ಎಲ್ಇಡಿ ಹೆಡ್‌ಲೈಟ್ಸ್ ಯುನಿಟ್ ಸೌಲಭ್ಯವು ಬೈಕಿನ ಬಲಿಷ್ಠತೆ ಮತ್ತಷ್ಟು ಪೂರಕವಾಗಿದೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಇನ್ನುಳಿದಂತೆ ಹೊಸ ಬೈಕಿನಲ್ಲಿ ಎಲ್‌ಇಡಿ ಟರ್ನ್ ಇಂಡಿಕೇಟರ್, ಹೈ-ಸ್ಪೀಡ್ ರೈಡಿಂಗ್‌ಗೆ ಪೂರಕವಾದ ಸಿಂಗಲ್ ಸೀಟ್, ರಿಯರ್ ಕೌಲ್ ನೀಡಲಾಗಿದ್ದು, ಬಹುತೇಕ ಸೂಪರ್ ಬೈಕ್‌ಗಳಲ್ಲಿ ಸಿಂಗಲ್ ಸೀಟ್ ಜೊತೆಗೆ ರಿಯರ್ ಕೌಲ್ ಹೊಂದಿರುವುದು ಸಾಮಾನ್ಯವಾಗಿದೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಎಪ್ರಿಲಿಯಾ ಹೊಸ ಆರ್‌ಎಸ್‌ವಿ4 1100 ಫ್ಯಾಕ್ಟರಿ ಬೈಕ್ ಮಾದರಿಯು ಬಿಎಸ್-4 ವೈಶಿಷ್ಟ್ಯತೆಯ 1,078 ಸಿಸಿ ವಿ4 ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 214-ಬಿಎಚ್‌ಪಿ ಮತ್ತು 122-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಈ ಮೂಲಕ ಪ್ರತಿ ಗಂಟೆಗೆ 300 ಕಿ.ಮೀ ಟಾಪ್ ಸ್ಪೀಡ್‌ನಲ್ಲಿ ಚಲಿಸಬಲ್ಲ ಹೊಸ ಬೈಕಿನಲ್ಲಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ನೀಡಲಾಗಿದೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಪರ್ಫಾಮೆನ್ಸ್ ರೈಡಿಂಗ್‌ಗೆ ಪೂರಕವಾಗಿ ಹೊಸ ಬೈಕಿನಲ್ಲಿ ಟ್ರ್ಯಾಕ್, ಸ್ಪೋರ್ಟ್ಸ್ ಮತ್ತು ರೇಸ್ ಮೋಡ್‌ಗಳನ್ನು ನೀಡಲಾಗಿದ್ದು, ಮುಂಭಾಗದಲ್ಲಿ ಓಹೊಲೈನ್ ನಿಕ್ಸ್ 43 ಎಂಎಂ ಫೋಕ್ಸ್ ಮತ್ತು ಹಿಂಭಾಗದಲ್ಲಿ ಓಹೊಲೈನ್ ಟಿಟಿಎಕ್ಸ್ ಮೊನೊ ಶಾರ್ಕ್ ಎಲೆಕ್ಟ್ರಿಕ್ ಅಡ್ಜೆಸ್ಟೆಬಲ್ ಸಸ್ಪೆಷನ್‌ನೊಂದಿಗೆ ರೈಡ್ ಬೈ ವೈರ್ ತ್ರೊಟಲ್, ಸ್ಲಿಪ್ಪರ್-ಅಸಿಸ್ಟೆಡ್ ಕ್ಲಚ್, ಎಪ್ರಿಲಿಯಾ ಕ್ವಿಕ್ ಶಿಫ್ಟರ್ ಸಿಸ್ಟಂ, ಫ್ಯಾಕ್ಟರಿ ಫಿಟೆಡ್ ಟೈಟಾನಿಯಂ ಅಕ್ರಾಪ್ರೊವಿಕ್ ಎಕ್ಸಾಸ್ಟ್ ಸಿಸ್ಟಂ, 7-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ರೈಡರ್‌ಗಳ ಸುರಕ್ಷತೆಗಾಗಿ ಹೊಸ ಬೈಕಿನ ಮುಂಭಾಗದ ಚಕ್ರದಲ್ಲಿ ಬೆಂಬ್ರೊ ಕ್ಯಾಲಿಪರ್ ಪ್ರೇರಣೆಯ 330-ಎಂಎಂ ಡ್ಯಯಲ್ ಸ್ಟೈನ್‌ಲೆಸ್ ಸ್ಟಿಲ್ ಡಿಸ್ಕ್, ಹಿಂಭಾಗದ ಚಕ್ರದಲ್ಲಿ 220-ಎಂಎಂ ಸಿಂಗಲ್ ಡಿಸ್ಕ್ ಪಡೆದುಕೊಂಡಿದ್ದು, ಪರ್ಫಾಮೆನ್ಸ್‌ಗೆ ಪೂರಕವಾಗಿ 17-ಇಂಚಿನ ರಿಮ್ ಮತ್ತು ಪೆರೆಲಿ ಡೈಬ್ಲೊ ಸೂಪರ್‌ಕಾರಸೊ ಎಸ್‌ಪಿ ಸೆಮಿ-ಸ್ಲಿಕ್ ಟೈರ್‌ಗಳನ್ನು ಹೊಂದಿದೆ.

ಏಪ್ರಿಲಿಯಾ ಆರ್‌ಎಸ್‌ವಿ4 1100 ಫಾಕ್ಟರಿ ಬೈಕ್ ಬೆಂಗಳೂರಿನಲ್ಲಿ ವಿತರಣೆ

ಇದಲ್ಲದೆ ಹೊಸ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್(ಎಟಿಸಿ), ವೀಲ್ಹಿ ಕಂಟ್ರೋಲ್(ಎಡಬ್ಲ್ಯುಸಿ), ಲಾಂಚ್ ಕಂಟ್ರೋಲ್(ಎಎಲ್‌ಸಿ), ಕ್ರೂಸ್ ಕಂಟ್ರೋಲ್(ಎಸಿಸಿ), ಸ್ಪೀಡ್ ಲಿಮಿಟರ್(ಎಪಿಟಿ) ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ಬಾಷ್ 9.1 ಎಂಪಿ ಎಬಿಎಸ್ ಜೊತೆಗೆ ಕಾರ್ನರಿಂಗ್ ಫಕ್ಷಂನ್ ಪಡೆದುಕೊಂಡಿದೆ.

More from DriveSpark

Article Published On: Friday, March 6, 2020, 15:05 [IST]
English summary
Aprilia RSV4 1100 Factory Delivered In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+