ಬಿಎಸ್-6 ಅಪಾಚೆ ಆರ್‌ಆರ್ 310 ಬೈಕಿನ ಬೆಲೆ ಹೆಚ್ಚಿಸಿದ ಟಿವಿಎಸ್
ಟಿವಿಎಸ್ ಮೋಟಾರ್ ಕಂಪನಿಯು ಈ ವರ್ಷದ ಆರಂಭದಲ್ಲಿ ಬಿಎಸ್-6 ಅಪಾಚೆ ಆರ್‌ಆರ್ 310 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿತ್ತು. ಟಿವಿಎಸ್ ಕಂಪನಿಯು ಈ ಹೊಸ ಜನಪ್ರಿಯ ಅಪಾಚೆ ಆರ್‌ಆರ್ 310 ಬೈಕಿನ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದೆ.

ಈ ಟಿವಿಎಸ್ ಆರ್‌ಆರ್ 310 ಬೈಕಿನ ಬೆಲೆಯನ್ನು ರೂ.5,000 ಗಳವರೆಗೆ ಹೆಚ್ಚಿಸಿದೆ. ಇದೀಗ ಈ ಬಿಎಸ್-6 ಅಪಾಚೆ ಆರ್‌ಆರ್ 310 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.2.45 ಗಳಾಗಿದೆ. ಈ ಬಿಎಸ್-6 ಅಪಾಚೆ ಆರ್‌ಆರ್ ಬೈಕನ್ನು ಹಲವಾರು ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿದ್ದರು. ಈ ಬೈಕಿನಲ್ಲಿ ಟಿವಿಎಸ್ ಸ್ಮಾರ್ಟ್ ತಂತ್ರಜ್ಞಾನ, ಥ್ರೊಟಲ್-ಬೈ-ವೈರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಫೀಚರುಗಳನ್ನು ಹೊಂದಿದೆ.

ಈ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನಲ್ಲಿ 5-ಇಂಚಿನ ಟಿಎಫ್‌ಟಿ ಕಲರ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಕೂಡ ಒಳಗೊಂಡಿದೆ. ಈ ಬೈಕಿನಲ್ಲಿ ಮೈಕೆಲಿನ್ ರೋಡ್5 ಟಯರುಗಳನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಬಿಎಸ್-6 ಅಪಾಚೆ ಆರ್‌ಆರ್ 310 ಬೈಕಿನಲ್ಲಿ 312 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 33.5 ಬಿಹೆಚ್‍ಪಿ ಪವರ್ ಮತ್ತು 27.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಈ ಬೈಕಿನಲ್ಲಿ ರೈನ್, ಅರ್ಬನ್, ಸ್ಪೋರ್ಟ್ ಮತ್ತು ಟ್ರ್ಯಾಕ್ ಎಂಬ ನಾಲ್ಕು ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಈ ಬೈಕ್ 2.93 ಸೆಕೆಂಡುಗಳಲ್ಲಿ 60 ಕಿ.ಮೀ ಕ್ರಮಿಸುತ್ತದೆ. ಇನ್ನು 0 ದಿಂದ 100 ಕಿ.ಮೀ ಕ್ರಮಿಸಲು ಈ ಬೈಕ್ 7.17 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಎಸ್-6 ಅಪಾಚೆ ಆರ್‌ಆರ್ 310 ಬೈಕಿನ ಪೀಚರುಗಳನ್ನು ಇದರ ಹಿಂದಿನ ಮಾದರಿಗೆ ಹೋಲಿಸಿದರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕಿನಲ್ಲಿ ಆರ್‌ಟಿ-ಸ್ಲಿಪ್ಪರ್ ಕ್ಲಚ್, ಬೈ-ಎಲ್ಇಡಿ ಟ್ವಿನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಆರ್‌ಟಿ-ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ.

ಈ ಅಪಾಚೆ ಆರ್‌ಆರ್ 310 ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಅಳವಡಿಸಿದೆ. ಇನ್ನು ಈ ಬೈಕಿನ ಮುಂಭಾಗದ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಆರ್‍ಸಿ 390, ಯಮಹಾ ಆರ್3 ಮತ್ತು ಕವಾಸಕಿ ನಿಂಜಾ 400 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಟಿವಿಎಸ್ ಕಂಪನಿಯು ಈ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದೆ. ಇನ್ನು ಈ ಬಿಎಸ್-6 ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನ ಬೆಲೆಯನ್ನು ಹೆಚ್ಚಿಸಿರುವುದು ಮಾರಾಟದ ಮೇಲೆ ಪರಿಣಾಮವನ್ನು ಬೀರುತ್ತಾ ಎಂಬುದು ಕಾದು ನೋಡಬೇಕು.


Click it and Unblock the Notifications








