ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100

ಟಿವಿಎಸ್ ಮೋಟಾರ್ ಕಂಪನಿ ತನ್ನ ಬಿಎಸ್-6 ಎಕ್ಸ್‌ಎಲ್ 100 ಅನ್ನು ಬಿಡುಗಡೆಗೊಳಿಸಲಾಗಿದೆ. ಎಕ್ಸ್‌ಎಲ್ 100 ಮೊಪೆಡ್‍ನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.43,889 ಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100

ಟಿವಿಎಸ್ ಬಿಎಸ್-6 ಎಕ್ಸ್‌ಎಲ್ 100 ಮಾದರಿಯನ್ನು 3 ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಹೆವಿ ಡ್ಯೂಟಿ ಐ-ಟಚ್‌ಸ್ಟಾರ್ಟ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.43,889 ಗಳಾಗಿದೆ. ಎಂಟ್ರಿ ಲೆವೆಲ್ ಮಾದರಿ ಹೆವಿ ಡ್ಯೂಟಿ ಐ-ಟಚ್‌ಸ್ಟಾರ್ಟ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.45,129 ಗಳಾಗಿದೆ. ಇನ್ನು ಕಂಫರ್ಟ್ ಐ-ಟಚ್‌ಸ್ಟಾರ್ಟ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.45,459 ಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100

ಹಿಂದಿನ ಎಕ್ಸ್‌ಎಲ್ 100 ಮಾದರಿಯ ಬೆಲೆಗೆ ಹೋಲಿಸಿದರೆ ರೂ.3,000 ದಿಂದ ರೂ.3,500ರವರೆಗೆ ಹೆಚ್ಚಿಸಲಾಗಿದೆ. ಹೊಸ ಎಕ್ಸ್‌ಎಲ್ 100 ಮಾದರಿಯಲ್ಲಿ 99.7 ಸಿಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100

ಈ ಎಂಜಿನ್‍ನೊಂದಿಗೆ ಫ್ಯೂಯಲ್ ಇಂಜೆಕ್ಷನ್ ಅನ್ನು ಹೊಂದಿದೆ.ಈ ಎಂಜಿನ್‍ 6,000 ಆರ್‌ಪಿಎಂನಲ್ಲಿ 4.4 ಬಿಹೆಚ್‌ಪಿ ಪವರ್ ಮತ್ತು 3,500 ಆರ್‌ಪಿಎಂನಲ್ಲಿ 6.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100

ಬಿಎಸ್-4 ಎಂಜಿನ್ ಕೂಡ ಇದೆ ರೀತಿಯ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿಶೇಷವೆಂದರೆ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದರು ಪವರ್ ಮತ್ತು ಟಾರ್ಕ್ ಅಂಕಿ ಅಂಶವು ಕಡಿಮೆಯಾಗಿಲ್ಲ. ಹೊಸ ಎಕ್ಸ್‌ಎಲ್ 100 ಮಾದರಿಯಲ್ಲಿ ಫ್ಯೂಯಲ್ ಇಂಜೆಕ್ಷನ್ ಹೊಂದಿರುವುದರಿಂದ ಇದರ ಮೈಲೇಜ್ ಕೂಡ ಹೆಚ್ಚಿಸುತ್ತದೆ.

ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100

ಈ ಮೊಪೆಡ್‍‍ಗಳ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳು, ಮೆಂಟೆನೆನ್ಸ್ ಇಲ್ಲದ ಬ್ಯಾಟರಿ, ಅನಲಾಗ್ ಸ್ಪೀಡೋಮೀಟರ್, ಕಿಕ್ ಸ್ಟಾರ್ಟ್ ಹಾಗೂ ಬಲ್ಬ್-ಟೈಪ್ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳಿವೆ. ಟಿವಿಎಸ್ ಎಕ್ಸ್‌ಎಲ್ 100 ಸರಣಿಯ ಮೊಪೆಡ್‌ಗಳು 4.0 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿವೆ.

ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100

ಟಿವಿಎಸ್ ಮೋಟಾರ್ ಕಂಪನಿ ತನ್ನ ಟಿವಿಎಸ್ ಎಕ್ಸ್‌ಎಲ್ 100 ಶ್ರೇಣಿಯ ಮೊಪೆಡ್‌ಗಳಿಗಾಗಿ ರೆಟ್ರೊ-ಫಿಟ್‌ಮೆಂಟ್ ಕಿಟ್ ಅನ್ನು ಕಳೆದ ವರ್ಷ ಬಿಡುಗಡೆಗೊಳಿಸಲಾಗಿತ್ತು. ಈ ರೆಟ್ರೊ ಫಿಟ್‍‍ಮೆಂಟ್ ಕಿಟ್‍‍ನ ಬೆಲೆಯು ರೂ.11,237ಗಳಾಗಿದೆ. ಈ ಕಿಟ್ ಎ‍ಆರ್‍ಎ‍ಐ ಪ್ರಮಾಣಪತ್ರವನ್ನು ಪಡೆದಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100

ವಯಸ್ಸಾದವರಿಗಾಗಿ ಹಾಗೂ ವಿಶೇಷ ಚೇತನರು ಸುಲಭವಾಗಿ ಪ್ರಯಾಣಿಸುವಂತೆ ಮಾಡಲು ಟಿವಿಎಸ್ ಕಂಪನಿಯು ಈ ಕಿಟ್ ಅನ್ನು ಬಿಡುಗಡೆಗೊಳಿಸಿದೆ. ಎಕ್ಸ್‌ಎಲ್ 100 ಸರಣಿಯ ಮೊಪೆಡ್‌ಗಳಿಗಾಗಿ ಹೊಸ ಆಡ್ ಆನ್ ಕಿಟ್‌ಗಳನ್ನು ಟಿವಿಎಸ್ ಮೋಟಾರ್ಸ್ ಸ್ವತಃ ತಾನೇ ವಿನ್ಯಾಸಗೊಳಿಸಿದ್ದು, ಅಭಿವೃದ್ಧಿಪಡಿಸಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100

ಇದು ಸುರಕ್ಷಿತ ಫಿಟ್‌ಗಾಗಿ 6 ಮೌಂಟಿಂಗ್ ಪಾಯಿಂಟ್‌ಗಳನ್ನು ಹೊಂದಿದೆ. ಫೆಂಡರ್‌ಗಳನ್ನು 16-ಇಂಚಿನ ಗೇಜ್-ಶೀಟ್ ಮೆಟಲ್‍‍ನಿಂದ ತಯಾರಿಸಲಾಗಿದೆ. ಚಾಲನೆಯಲ್ಲಿದ್ದಾಗಲೂ ಉತ್ತಮ ನಿಯಂತ್ರಣಕ್ಕಾಗಿ ಹಾಗೂ ಸ್ಟಾಬಿಲಿಟಿಗಾಗಿ ಫ್ರೇಮ್ ಅನ್ನು ವಿನ್ಯಾಸಗೊಳಿಸಲಾಗಿದೆ.

Article Published On: Friday, March 20, 2020, 18:29 [IST]
English summary
BS6 TVS XL 100 launched at Rs 43,889. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+