ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್
ಯಮಹಾ ಕಂಪನಿಯು ತನ್ನ ಬಿಎಸ್-6 ಎಂಟಿ-15 ಬೈಕ್ ಅನ್ನು 2020ರ ಫೆಬ್ರವರಿ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬಿಎಸ್-6 ಯಮಹಾ ಎಂಟಿ-15 ಬೈಕಿನ ಬೆಲೆಯನ್ನು ಈ ವರ್ಷದ ಮೇ ತಿಂಗಳಲ್ಲಿ ಹೆಚ್ಚಿಸಲಾಗಿತ್ತು.

ಇದೀಗ ಯಮಹಾ ಕಂಪನಿಯು ಎರಡನೇ ಬಾರಿಗೆ ಬಿಎಸ್-6 ಎಂಟಿ-15 ಬೈಕಿನ ಬೆಲೆಯನ್ನು ಹೆಚ್ಚಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಐಸ್ ಬಿಎಸ್-6 ಯಮಹಾ ಎಂಟಿ-15 ಬೈಕಿನ ಫ್ಲೂ ವರ್ಮಿಲಿಯನ್ ಬಣ್ಣದ ಬೆಲೆಯನ್ನು ಮಾತ್ರ ಏರಿಕೆ ಮಾಡಲಾಗಿತ್ತು. ಈ ಬಾರಿ ಬಿಎಸ್-6 ಯಮಹಾ ಎಂಟಿ-15 ಬೈಕಿನ ಎಲ್ಲಾ ಮೂರು ಬಣ್ಣಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಯಮಹಾ ಎಂಟಿ-15 ಬೈಕಿನ ಲೋಹೀಯ ಕಪ್ಪು, ಡಾರ್ಕ್ ಮ್ಯಾಟ್ ಬ್ಲೂ ಮತ್ತು ಐಸ್ ಫ್ಲೂ ವರ್ಮಿಲಿಯನ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಯಮಹಾ ಕಂಪನಿಯು ಎಂಟಿ-15 ಬೈಕ್ ಅನ್ನು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಿತು. ಈ ಯಮಹಾ ಎಂಟಿ-15 ಬೈಕ್ ಬಿಡುಗಡೆಯಾದ ಮೊದಲ ತಿಂಗಳಲ್ಲಿ 5,203 ಯುನಿಟ್ ಗಳು ಮಾರಾಟವಾಗಿತ್ತು.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಕಳೆದ ಹಣಕಾಸು ವರ್ಷದಲ್ಲಿ ಯಮಹಾ ಎಂಟಿ-15 ಬೈಕಿನ ಒಟ್ಟು 20,417 ಯುನಿಟ್‌ಗಳು ಮಾರಾಟವಾಗಿವೆ. ಈ ಯಮಹಾ ಎಂಟಿ-15 ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಈ ಬೈಕ್ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಬಿಎಸ್-6 ಯಮಹಾ ಎಂಟಿ-15 ಬೈಕಿನಲ್ಲಿ 155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 18.5 ಬಿಹೆಚ್‍ಪಿ ಪವರ್ ಮತ್ತು 13.9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್

ಹೊಸ ಬೈಕಿನ ತೂಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೊಸ ಯಮಹಾ ಎಂಟಿ-15 ಬೈಕ್ 138 ಕೆಜಿ ತೂಕವನ್ನು ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ ರೇಡಿಯಲ್ ಟಯರ್ ಅನ್ನು ಅಳವಡಿಸಲಾಗಿದೆ.

ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೋಡಣೆ ಮಾಡಲಾಗಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹಾಗೆಯೇ ಹೊಸ ಬೈಕಿನಲ್ಲಿ ಅಳವಡಿಸಲಾಗಿರುವ ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಲಾಗಿದೆ.

ಹೊಸ ಬಿಎಸ್-6 ಎಂಜಿನ್‍ನ ಯಮಹಾ ಎಂಟಿ-15 ಬೈಕ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದರಿಂದ ಈ ಬೈಕಿನ ಪರ್ಫಾಮೆನ್ಸ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲಾಗಿಲ್ಲ. ಪರ್ಫಾಮೆನ್ಸ್ ಪ್ರಿಯರಿಗೆ ಈ ಬೈಕ್ ಒಂದು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ.


Click it and Unblock the Notifications








