ಹೊಸ ಬಣ್ಣದ ಆಯ್ಕೆಯೊಂದಿಗೆ ಮಿಂಚಿದ ಯಮಹಾ ಬಿಎಸ್-6 ಎಂಟಿ-15
ಯಮಹಾ ಸಂಸ್ಥೆಯು ಈಗಾಗಲೇ ಭಾರತದಲ್ಲಿ ತನ್ನ ಪ್ರಮುಖ ಬೈಕ್ ಆವೃತ್ತಿಗಳನ್ನು ಎಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಉನ್ನತಿಕರಿಸಿ ಬಿಡುಗಡೆ ಮಾಡುತ್ತಿದ್ದು, ಕಳೆದ ವಾರ ಬಿಡುಗಡೆಗೊಂಡಿದ್ದ ಹೊಸ ಎಂಟಿ-15 ಬೈಕ್ ಮಾದರಿಯು ಹೊಸ ಬಣ್ಣ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗಿದೆ.

ಹೊಸ ಎಂಟಿ-15 ಹೊಸ ಬಣ್ಣದ ಆಯ್ಕೆ ಕುರಿತಂತೆ ಟಿವಿ ಜಾಹೀರಾತು ಬಿಡುಗಡೆ ಮಾಡಿರುವ ಯಮಹಾ ಸಂಸ್ಥೆಯು ಹಳೆಯ ಮಾದರಿಗಿಂತಲೂ ಅತ್ಯುತ್ತಮ ಗ್ರಾಫಿಕ್ಸ್ ಡಿಸೈನ್ ಮತ್ತು ಬಣ್ಣದ ಆಯ್ಕೆಯನ್ನು ನೀಡಿದ್ದು, ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.1,38,900 ಮತ್ತು ಟಾಪ್ ಎಂಡ್ ಮಾದರಿಯು ರೂ.1,39,400 ಬೆಲೆ ಪಡೆದುಕೊಂಡಿದೆ.

ಗ್ರಾಹಕರ ಬೇಡಿಕೆ ಅನುಗುಣವಾಗಿ ಈ ಬಾರಿ ಹೊಸ ಬೈಕಿನಲ್ಲಿ ವಿನೂತನ ಡಿಸೈನ್ ಹೊಂದಿರುವ ಐಸ್ ಪ್ಲವೊ ವೆರ್ಮಿಲಿನ್ ಬಣ್ಣದ ಆಯ್ಕೆ ನೀಡಲಾಗಿದ್ದು, ಈ ಹಿಂದಿನ ಮೆಟಾಲಿಕ್ ಬ್ಲ್ಯಾಕ್ ಮತ್ತು ಡಾರ್ಕ್ ಮ್ಯಾಟೆ ಬ್ಲ್ಯೂ ಬಣ್ಣಗಳು ಸಹ ಖರೀದಿಗೆ ಲಭ್ಯವಿರಲಿವೆ.

ಹೊಸ ಬೈಕಿನಲ್ಲಿ ಐಸ್ ಪ್ಲವೊ ವೆರ್ಮಿಲಿನ್ ಬಣ್ಣದ ಆಯ್ಕೆ ಮತ್ತು ಬಿಎಸ್-6 ಎಂಜಿನ್ ಹೊರತುಪಡಿಸಿ ಬಹುತೇಕ ತಾಂತ್ರಿಕ ಅಂಶಗಳು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಹೊಸ ಎಮಿಷನ್ ನಿಯಮದಿಂದಾಗಿ ಪರ್ಫಾಮೆನ್ಸ್ ತುಸು ಇಳಿಕೆ ಮಾಡಲಾಗಿದೆ.

ಎಂಜಿನ್ ಪರ್ಫಾಮೆನ್ಸ್
155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ನವೀಕರಿಸಲಾಗಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 18.5-ಬಿಎಚ್‍ಪಿ ಮತ್ತು 13.9-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮೂಲಕ ಬಿಎಸ್-4 ಎಂಜಿನ್‍ಗಿಂತಲೂ ಹೊಸ ಬೈಕಿನಲ್ಲಿ 0.8-ಬಿಎಚ್‍ಪಿ ಮತ್ತು 0.7-ಎನ್ಎಂ ಟಾರ್ಕ್ ಕಡಿತಗೊಳಿಸಲಾಗಿದ್ದು, ಎಂಜಿನ್ ಸಾಮರ್ಥ್ಯಕ್ಕೆ ತಕ್ಕಂತೆ ಹೊಸ ಎಮಿಷನ್ ನಿಯಮ ಅನುಗುಣವಾಗಿ ಪರ್ಫಾಮೆನ್ಸ್‌ನಲ್ಲಿ ಇಳಿಕೆ ಮಾಡಲಾಗಿದೆ.
ಇನ್ನು ಹೊಸ ಬೈಕಿನ ತೂಕದಲ್ಲೂ ಯಾವುದೇ ಬದಲಾವಣೆ ಆಗಿಲ್ಲ. ಎಂಟಿ-15 ಬೈಕ್ ಮಾದರಿಯು 138 ಕೆಜಿ ತೂಕವನ್ನು ಹೊಂದಿದ್ದು, ಈ ಬೈಕಿನ ಹಿಂಭಾಗದಲ್ಲಿ ರೇಡಿಯಲ್ ಟಯರ್ ಅನ್ನು ಅಳವಡಿಸಲಾಗಿದೆ.

ಭಾರತೀಯ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿರುವ ಯಮಹಾ ಸಂಸ್ಥೆಯು ಎಂಟಿ-15 ಬೈಕಿನಲ್ಲಿ ಹಲವು ಹೊಸ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಿದ್ದು, 'ದ ಡಾರ್ಕ್ ಸೈಡ್ ಆಫ್ ಜಪಾನ್' ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ.

ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಪ್ರಧಾನ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೋಡಣೆ ಮಾಡಲಾಗಿದೆ.

ಹಾಗೆಯೇ ಹೊಸ ಬೈಕಿನಲ್ಲಿ ಅಳವಡಿಸಲಾಗಿರುವ ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಲಾಗಿದೆ.


Click it and Unblock the Notifications