ಟಿವಿಎಸ್ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಕ್ರಿಯಾನ್ ಬಿಡುಗಡೆ ಮಾಹಿತಿ ಬಹಿರಂಗ

ಟಿವಿಎಸ್ ಮೋಟಾರ್ ಕಂಪನಿಯು ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ಮೂಲಕ ಭವಿಷ್ಯ ವಾಹನಗಳ ಅಭಿವೃದ್ದಿಯತ್ತ ಹೊಸ ಹೆಜ್ಜೆಯಿರಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಟಿವಿಎಸ್ ಹೊಸ ಇವಿ ಸ್ಕೂಟರ್ ಕ್ರಿಯಾನ್ ಬಿಡುಗಡೆ ಮಾಹಿತಿ ಬಹಿರಂಗ

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಪ್ರವೇಶಿಸಿರುವ ಟಿವಿಎಸ್ ಮೋಟಾರ್ ಕಂಪನಿಯು ಇದೀಗ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾಗಿ ಕ್ರಿಯಾನ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಐಕ್ಯೂಬ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಒದಗಿಸಲಿದೆ.

ಟಿವಿಎಸ್ ಹೊಸ ಇವಿ ಸ್ಕೂಟರ್ ಕ್ರಿಯಾನ್ ಬಿಡುಗಡೆ ಮಾಹಿತಿ ಬಹಿರಂಗ

ಟಿವಿಎಸ್ ಹೊಸ ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಎಥರ್ 450ಎಕ್ಸ್ ಮತ್ತು ಒಕಿನಾವ ಸ್ಕೂಟರ್ ಮಾದರಿಗಳಿಗೆ ಅತ್ಯುತ್ತಮ ಪೈಟೋಟಿ ನೀಡಲಿದ್ದು, ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಟಿವಿಎಸ್ ಹೊಸ ಇವಿ ಸ್ಕೂಟರ್ ಕ್ರಿಯಾನ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು 3kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಲಿದ್ದು, ಪ್ರತಿ ಚಾರ್ಜ್‌ಗೆ 80 ಕಿ.ಮೀ ಗೂ ಅಧಿಕ ಮೈಲೇಜ್‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹಿಂದಿರುಗಿಸಲಿದೆ.

ಟಿವಿಎಸ್ ಹೊಸ ಇವಿ ಸ್ಕೂಟರ್ ಕ್ರಿಯಾನ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಇವಿ ಸ್ಕೂಟರ್ ಮಾದರಿಯಲ್ಲಿನ ಬ್ಯಾಟರಿ ಮಾದರಿಯು ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಮಟ್ಟದ ಚಾರ್ಜ್ ಮಾಡಲು ಸ್ಮಾರ್ಟ್ ಚಾರ್ಜಿಂಗ್ ಸಾಕೆಟ್ ಸೌಲಭ್ಯವನ್ನು ಪಡೆದುಕೊಂಡಿರಲಿದ್ದು, ಶೇ. 80 ರಷ್ಟು ಚಾರ್ಜಿಂಗ್ ಅನ್ನು ಕೇವಲ 1 ಗಂಟೆಯೊಳಗೆ ಮತ್ತು ಪೂರ್ಣಪ್ರಮಾಣದ ಚಾರ್ಜ್ ಮಾಡಲು ಮೂರು ಗಂಟೆ ಸಮಯಾವಕಾಶ ತೆಗೆದುಕೊಳ್ಳುತ್ತದೆ.

ಟಿವಿಎಸ್ ಹೊಸ ಇವಿ ಸ್ಕೂಟರ್ ಕ್ರಿಯಾನ್ ಬಿಡುಗಡೆ ಮಾಹಿತಿ ಬಹಿರಂಗ

ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 90 ನಿಮಿಷಗಳಲ್ಲಿ ಪೂರ್ಣ ಪ್ರಮಾಣದ ಚಾರ್ಜಿಂಗ್ ಪಡೆದುಕೊಳ್ಳಬಹುದಾಗಿದ್ದು, ಚಾರ್ಜಿಂಗ್ ಸೌಲಭ್ಯದ ಆಧಾರದ ಮೇಲೆ ಚಾರ್ಜಿಂಗ್ ಪೂರ್ಣಾವಧಿಯ ಲೆಕ್ಕಾಚಾರ ನಿರ್ಧಾರವಾಗುತ್ತದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಟಿವಿಎಸ್ ಹೊಸ ಇವಿ ಸ್ಕೂಟರ್ ಕ್ರಿಯಾನ್ ಬಿಡುಗಡೆ ಮಾಹಿತಿ ಬಹಿರಂಗ

ಟಿವಿಎಸ್ ಕ್ರಿಯಾನ್ ಕೂಡಾ ಪ್ರತಿಸ್ಪರ್ಧಿ ಸ್ಕೂಟರ್ ಮಾದರಿಗಳಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಕೇವಲ 5.1-ಸೆಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಟಿವಿಎಸ್ ಹೊಸ ಇವಿ ಸ್ಕೂಟರ್ ಕ್ರಿಯಾನ್ ಬಿಡುಗಡೆ ಮಾಹಿತಿ ಬಹಿರಂಗ

ಹಾಗೆಯೇ ಹೊಸ ಇವಿ ಸ್ಕೂಟರ್‌ನಲ್ಲಿ ಸ್ಮಾರ್ಟ್‌ಫೋನ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಲ್ಲ ಟಿಎಫ್‌ಟಿ ಸ್ಕ್ರೀನ್‌ ಜೋಡಿಸಲಾಗಿದ್ದು, ಇದರಲ್ಲಿ ಬ್ಯಾಟರಿ ಲಭ್ಯತೆಯ ಮಾಹಿತಿ, ವಿವಿಧ ರೈಡಿಂಗ್ ಮೋಡ್ ಮಾಹಿತಿ, ಪಾರ್ಕಿಂಗ್ ಮೋಡ್ ಮಾಹಿತಿ ಮತ್ತು ಜಿಯೋ ಫೆನ್ಸಿಂಗ್ ಮಾಹಿತಿ ಪ್ರದರ್ಶನ ಮಾಡುವ ಸೌಲಭ್ಯ ಹೊಂದಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಟಿವಿಎಸ್ ಹೊಸ ಇವಿ ಸ್ಕೂಟರ್ ಕ್ರಿಯಾನ್ ಬಿಡುಗಡೆ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ ಹೊಸ ಸ್ಕೂಟರ್ ಮಾದರಿಯು 2021ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿದ್ದು, ಹೊಸ ಸ್ಕೂಟರ್ ಬೆಲೆಯು ಉತ್ಪಾದನಾ ಆವೃತ್ತಿಯಲ್ಲಿನ ಬ್ಯಾಟರಿ ಸೌಲಭ್ಯದ ಆಧಾರದ ಮೇಲೆ ನಿರ್ಧಾರವಾಗಲಿದೆ. ಪ್ರತಿಸ್ಪರ್ಧಿ ಇವಿ ಸ್ಕೂಟರ್ ಮಾದರಿಗಳು ಬ್ಯಾಟರಿ ಸೌಲಭ್ಯದ ಆಧಾರದ ಮೇಲೆ ರೂ. 1 ಲಕ್ಷದಿಂದ ರೂ. 1.40 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಟಿವಿಎಸ್ ಕ್ರಿಯಾನ್ ಕೂಡಾ ಆಕರ್ಷಕ ಬೆಲೆ ಪಡೆದುಕೊಳ್ಳಲಿದೆ.

Most Read Articles

Kannada
English summary
Report says Creon will be the next electric scooter from TVS. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X