ಆಟೋ ಎಕ್ಸ್‌ಪೋ 2020: ಫೋಟೋಟೈಪ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನಗೊಳಿಸಿದ ಡಿವೊಟ್ ಮೋಟಾರ್ಸ್

ಬ್ರಿಟಿಷ್ ಆಟೋ ಡಿಸೈನ್ ಪ್ರೇರಿತ ಡಿವೊಟ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಮೊದಲ ಹಂತದಲ್ಲೇ ವಿಶೇಷ ಮಾದರಿಯ ಇವಿ ಬೈಕ್ ಮಾದರಿಯೊಂದನ್ನು ಸಿದ್ದಪಡಿಸಿದೆ.

ಆಟೋ ಎಕ್ಸ್‌ಪೋ 2020: ಫೋಟೋಟೈಪ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನಗೊಳಿಸಿದ ಡಿವೊಟ್ ಮೋಟಾರ್ಸ್

2019ರಲ್ಲೇ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಮಾದರಿಗಳ ನಿರ್ಮಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಿರುವ ಡಿವೊಟ್ ಮೋಟಾರ್ಸ್ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಫೋಟೋಟೈಪ್ ಆವೃತ್ತಿಗಳನ್ನು ಸಿದ್ದಪಡಿಸಿದ್ದು, ಕ್ಲಾಸಿಕ್ ಡಿಸೈನ್ ಮಾದರಿಯ ಫೋಟೋಟೈಪ್ ಮಾದರಿಯೊಂದನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸುವ ಮೂಲಕ ಭಾರತೀಯ ಆಟೋ ಉದ್ಯಮಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದೆ.

ಆಟೋ ಎಕ್ಸ್‌ಪೋ 2020: ಫೋಟೋಟೈಪ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನಗೊಳಿಸಿದ ಡಿವೊಟ್ ಮೋಟಾರ್ಸ್

ಹೆಚ್ಚುತ್ತಿರುವ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ವಾಹನಗಳ ಉತ್ಪಾದನಾ ಗುರಿಹೊಂದಿರುವ ಡಿವೊಟ್ ಮೋಟಾರ್ಸ್ ಸಂಸ್ಥೆಯು ಆಟೋ ಉದ್ಯಮದ ವಿವಿಧ ವಿಭಾಗಗಳಲ್ಲಿ ನುರಿತ ತಂತ್ರಜ್ಞರ ಪ್ರೇರಣೆ ಹೊಂದಿದ್ದು, ಫೋಟೋಟೈಪ್ ಮಾದರಿಗಳನ್ನು ಶೀಘ್ರದಲ್ಲೇ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಹೇಳಿಕೊಂಡಿದೆ.

ಆಟೋ ಎಕ್ಸ್‌ಪೋ 2020: ಫೋಟೋಟೈಪ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನಗೊಳಿಸಿದ ಡಿವೊಟ್ ಮೋಟಾರ್ಸ್

ಬ್ರಿಟಿಷ್ ಆಟೋ ಉತ್ಪಾದನಾ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿರುವ ಡಿವೊಟ್ ಮೋಟಾರ್ಸ್ ತಂಡವು ಭಾರತೀಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದು, ಮುಂದಿನ 2 ವರ್ಷಗಳ ಅವಧಿಯಲ್ಲಿ ವಿವಿಧ ಮಾದರಿಯ 5 ಹೊಸ ದ್ವಿಚಕ್ರಗಳನ್ನು ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಆಟೋ ಎಕ್ಸ್‌ಪೋ 2020: ಫೋಟೋಟೈಪ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನಗೊಳಿಸಿದ ಡಿವೊಟ್ ಮೋಟಾರ್ಸ್

ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬಿಡುಗಡೆಗೂ ಮುನ್ನ ಮಾರುಕಟ್ಟೆ ಅಧ್ಯಯನ ನಡೆಸುತ್ತಿರುವ ಡಿವೊಟ್ ಮೋಟಾರ್ಸ್ ಸಂಸ್ಥೆಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸಲಿದ್ದು, ಉತ್ಪಾದನಾ ಘಟಕ ಮತ್ತು ಮಾರಾಟ ಮಳಿಗೆಗಳ ನಿರ್ಮಾಣ ಪ್ರಕ್ರಿಯೆಗೆ ಮುಂದಿನ ಕೆಲವೇ ದಿನಗಳಲ್ಲಿ ಚಾಲನೆ ನೀಡಲು ಸಿದ್ದತೆ ನಡೆಸಿದೆ. ಜೊತೆಗೆ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾಹಿತಿ ತಿಳಿಯಲು ಅಧಿಕೃತ ವೆಬ್‌ಸೈಟ್‌ ಅನ್ನು ಈಗಾಗಲೇ ತೆರೆಯಲಾಗಿದ್ದು, ಆಸಕ್ತರು ಡಿವೊಟ್ ಮೋಟಾರ್ಸ್ ಜಾಲತಾಣದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಆಟೋ ಎಕ್ಸ್‌ಪೋ 2020: ಫೋಟೋಟೈಪ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನಗೊಳಿಸಿದ ಡಿವೊಟ್ ಮೋಟಾರ್ಸ್

ಇನ್ನು ಭಾರತದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಸಾಕಷ್ಟು ವಿನಾಯ್ತಿ ನೀಡಲಾಗುತ್ತಿದ್ದು, ಹೊಸ ಯೋಜನೆಯ ಪರಿಣಾಮ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ವಿಶೇಷ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಚಾಲನೆ ನೀಡಿವೆ.

ಆಟೋ ಎಕ್ಸ್‌ಪೋ 2020: ಫೋಟೋಟೈಪ್ ಎಲೆಕ್ಟ್ರಿಕ್ ಬೈಕ್ ಪ್ರದರ್ಶನಗೊಳಿಸಿದ ಡಿವೊಟ್ ಮೋಟಾರ್ಸ್

ಇದೀಗ ಡಿವೊಟ್ ಮೋಟಾರ್ಸ್ ಸಹ ಫೋಟೋಟೈಪ್ ಎಲೆಕ್ಟ್ರಿಕ್ ಬೈಕ್‌ಗಳ ನಿರ್ಮಾಣದ ಮೂಲಕ ಉತ್ತಮ ಮೈಲೇಜ್ ನೀಡುವ ವಾಹನ ಬಿಡುಗಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದು, 2021ರ ವೇಳೆಗೆ ಡಿವೊಟ್ ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್‌ಗಳು ಮಾರುಕಟ್ಟೆ ಪ್ರವೇಶಿಸಲಿವೆ.

More from DriveSpark

Article Published On: Friday, February 7, 2020, 10:57 [IST]
English summary
Devot Motors unveiled Electric bike Prototype at Auto Expo details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+