ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಪಿಯಾಜಿಯೊ ಭಾರತದಲ್ಲಿ ಎಪ್ರಿಲಿಯಾ, ವೆಸ್ಪಾ, ಪಿಯಾಜಿಯೊ ಹಾಗೂ ಮೋಟೊ ಗುಝಿ ಸೇರಿದಂತೆ ಹಲವಾರು ಹೆಸರಿನಲ್ಲಿ ವಾಹನಗಳನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ಪಿಯಾಜಿಯೊ ಭಾರತದಲ್ಲಿ ಮೊಟೊಪ್ಲೆಕ್ಸ್ ಶೋರೂಂಗಳ ಮೂಲಕ ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ. ಇತ್ತೀಚಿಗೆ ಬೆಂಗಳೂರಿನ ಮೊಟೊಪ್ಲೆಕ್ಸ್ ಶೋ ರೂಂನಲ್ಲಿ ಎಪ್ರಿಲಿಯಾ ಆರ್‍ಎಸ್‍‍ವಿ 4 1100 ವಿಶೇಷ ಸೂಪರ್ ಬೈಕ್ ವಿತರಣಾ ಕಾರ್ಯಕ್ರಮವು ನಡೆಯಿತು.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ಡ್ರೈವ್‌ಸ್ಪಾರ್ಕ್‌ನೊಂದಿಗೆ ಮಾತನಾಡಿರುವ ಎಪ್ರಿಲಿಯಾ ಅಧಿಕಾರಿಗಳು ವೆಸ್ಪಾ ಎಲೆಟ್ರಿಕಾ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಏಪ್ರಿಲಿಯಾ ಆರ್‍ಎಸ್ 660 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗೆಗಿನ ಮಾಹಿತಿಯನ್ನು ನೀಡಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ಈ ಎರಡು ಹೊಸ ವಾಹನಗಳನ್ನು ಮುಂದಿನ 2 ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಇವುಗಳನ್ನು ಸಂಪೂರ್ಣವಾಗಿ ಕಾನ್ಫಿಗರ್ ಮಾಡಿರುವುದರಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ಎಲೆಕ್ಟ್ರಿಕ್ ಸ್ಕೂಟರ್, ವೆಸ್ಪಾ ಎಲೆಟ್ರಿಕಾವನ್ನು ಕಳೆದ ತಿಂಗಳು ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವೆಸ್ಪಾ ತನ್ನ ಸಾಂಪ್ರದಾಯಿಕ ವಿನ್ಯಾಸದ ಫೀಚರ್‍‍ಗಳೊಂದಿಗೆ ಪ್ರದರ್ಶಿಸಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಸರ್ಕ್ಯುಲರ್ ಹೆಡ್‌ಲೈಟ್‌, ಎಲ್‌ಇಡಿ ಟೈಲ್ ಲೈಟ್‌ ಹಾಗೂ ಹಳೆಯ ಕಾಲದ ಟೇಲ್ ಕ್ಲಸ್ಟರ್‌‍‍ಗಳನ್ನು ನೀಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ವೆಸ್ಪಾ ಎಲೆಕ್ಟ್ರಿಕಾ ಸ್ಕೂಟರ್‍‍ನಲ್ಲಿ 4 ಕಿ.ವ್ಯಾನ ಬ್ರಷ್‍‍‍ಲೆಸ್ ಎಲೆಕ್ಟ್ರಿಕ್ ಮೋಟರ್ ಹಾಗೂ 4.2 ಕಿ.ವ್ಯಾ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 100 ಕಿ.ಮೀಗಳವರೆಗೆ ಚಲಿಸಬಹುದು. ಈ ಸ್ಕೂಟರ್ ಇಕೊ ಹಾಗೂ ಪವರ್ ಎಂಬ ಎರಡು ರೈಡಿಂಗ್‍ ಮೋಡ್‍‍ಗಳನ್ನು ಹೊಂದಿದೆ. ವೆಸ್ಪಾ ಭಾರತದಲ್ಲಿ ಫಾಸ್ಟ್ ಚಾರ್ಜರ್‍‍ಗಳನ್ನು ನೀಡುವ ನಿರೀಕ್ಷೆಗಳಿವೆ. ಈ ಸ್ಕೂಟರ್‍‍ನಲ್ಲಿ ಬ್ಲೂಟೂಥ್ ಕನೆಕ್ಟಿವಿಟಿ ಹೊಂದಿರುವ ಟಿಎಫ್‍‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ಸ್ಕೂಟರ್‌‍‍ನಲ್ಲಿರುವ ಡೆಡಿಕೇಟೆಡ್ ಸ್ಮಾರ್ಟ್‌ಫೋನ್ ಪ್ರೊಸೆಸರ್ ಮೂಲಕ ಮಾಲೀಕರು ಸ್ಕೂಟರ್‌ನ ಮೊಬಿಲಿಟಿ, ಬ್ಯಾಟರಿ ಚಾರ್ಜ್ ಕುರಿತಾದ ಮಾಹಿತಿಗಳನ್ನು ಪಡೆಯಬಹುದು. ಹೊಸ ವೆಸ್ಪಾ ಎಲೆಕ್ಟ್ರಿಕಾ ಸ್ಕೂಟರಿನ ಮುಂಭಾಗದಲ್ಲಿ 200 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 140 ಎಂಎಂ ಡ್ರಂ ಬ್ರೇಕ್ ಅಳವಡಿಸಲಾಗಿದೆ. ಈ ಸ್ಕೂಟರಿನಲ್ಲಿ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ಮುಂಭಾಗದಲ್ಲಿ 12 ಇಂಚಿನ ಅಲಾಯ್ ವ್ಹೀಲ್ ಹಾಗೂ ಹಿಂಭಾಗದಲ್ಲಿ 11 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ಟ್ಯೂಬ್‌ಲೆಸ್ ಟಯರ್‌ಗಳನ್ನು ಹೊಂದಿದೆ. ಎಪ್ರಿಲಿಯಾ ಆರ್‍ಎಸ್ 660 ಬೈಕ್ ಅನ್ನು ಕಳೆದ ವರ್ಷ ಇಟಲಿಯಲ್ಲಿ ನಡೆದ ಇಕ್ಮಾದಲ್ಲಿ ಪ್ರದರ್ಶಿಸಲಾಗಿತ್ತು.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ವೆಸ್ಪಾ ಎಲೆಕ್ಟ್ರಿಕಾ ಹಾಗೂ ಎಪ್ರಿಲಿಯಾ ಆರ್‍ಎಸ್ 660

ಈ ಬೈಕ್ ಸಂಪೂರ್ಣ ಫೇರಿಂಗ್ ಪ್ಯಾನೆಲ್‌ಗಳೊಂದಿಗೆ ತುಂಬಾ ಒರಟಾದ ನೋಟವನ್ನು ಹೊಂದಿದೆ. ಹೊಸ ಏಪ್ರಿಲಿಯಾ ಆರ್‍ಎಸ್ 660 ಬೈಕಿನಲ್ಲಿ ಪ್ಯಾರಾಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 100 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಬೈಕ್ ಹಲವಾರು ಟೆಕ್ನಿಕಲ್ ಫೀಚರ್‍‍ಗಳನ್ನು ಹೊಂದಿದೆ.

More from DriveSpark

Article Published On: Saturday, March 7, 2020, 15:31 [IST]
English summary
Vespa Elettrica and Aprilia RS660 India launch details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+