ಡೀಲರ್ ಬಳಿ ತಲುಪಿದ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಬಿಎಸ್-6 ಪಾನಿಗಲೆ ವಿ2 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಈ ಹೊಸ ಪಾನಿಗಲೆ ವಿ2 ಮಾದರಿಯ ಯೂನಿಟ್‍‍ಗಳು ಡೀಲರ್‌ಗಳ ಬಳಿ ತಲುಪಲು ಪ್ರಾರಭವಾಗಿದೆ.

ಡೀಲರ್ ಬಳಿ ತಲುಪಿದ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್

ಈ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಕೆಲವು ಡೀಲರ್ ಬಳಿ ತಲುಪಿರುವುದನ್ನು ಬೈಕ್‍‍ವಾಲೆ ಬಹಿರಂಗಪಡಿಸಿದೆ. ಈ ಹೊಸ ಡುಕಾಟಿ ಪಾನಿಗಲೆ ವಿ2 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.16.99 ಲಕ್ಷಗಳಾಗಿದೆ. ಈ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಈ ಮೊದಲೇ ಭಾರತದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಡುಕಾಟಿ ಕಂಪನಿಯು ಕರೋನಾ ಸೋಂಕಿನ ಭೀತಿಯಿಂದ ಈ ಹೊಸ ಪಾನಿಗಲೆ ವಿ2 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ವಿಳಂಬ ಮಾಡಿದರು.

ಡೀಲರ್ ಬಳಿ ತಲುಪಿದ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್

ಡುಕಾಟಿ ಪಾನಿಗಲೆ ವಿ2 ದೇಶದ ಮೊದಲ ಬಿಎಸ್-6 ಪ್ರೇರಿತ ಸೂಪರ್ ಬೈಕ್ ಆಗಿದೆ. ಹೂಸ ಡುಕಾಟಿ ಪಾನಿಗಲೆ ವಿ2 ಬೈಕಿನಲ್ಲಿ 955 ಸಿಸಿ ಸೂಪರ್‌ಕ್ವಾಡ್ರೊ 90-ಡಿಗ್ರಿ ವಿ2 ಎಂಜಿನ್‌ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಡೀಲರ್ ಬಳಿ ತಲುಪಿದ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್

ಈ ಎಂಜಿನ್ 10,750 ಆರ್‌ಪಿಎಂನಲ್ಲಿ 155 ಬಿಹೆಚ್‌ಪಿ ಮತ್ತು 9000 ಆರ್‌ಪಿಎಂನಲ್ಲಿ 104 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ 5 ಬಿಹೆಚ್‌ಪಿ ಪವರ್ ಮತ್ತು 2 ಎನ್ಎಂ ಟಾರ್ಕ್ ಹೆಚ್ಚು ಉತ್ಪಾದಿಸುತ್ತದೆ

ಡೀಲರ್ ಬಳಿ ತಲುಪಿದ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್

ಈ ಹೊಸ ಪಾನಿಗಲೆ ವಿ2 ಬೈಕ್ ಫ್ರಂಟ್ ಫೇರಿಂಗ್, ಮತ್ತು ಸಿಂಗಲ್ ಸೈಡ್ ಸ್ವಿಂಗಾರ್ಮ್ ಅನ್ನು ಒಳಗೊಂಡಿದೆ. ಈ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಪಾನಿಗಲೆ ವಿ4 ಬೈಕಿನಲ್ಲಿರುವಂತಹ ಕೆಲವು ಸ್ಟೈಲಿಂಗ್ ಅಂಶಗಳು ಹೊಸ ಪಾನಿಗಲೆ ವಿ2 ಬೈಕಿನಲ್ಲಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಡೀಲರ್ ಬಳಿ ತಲುಪಿದ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್

ಈ ಡುಕಾಟಿ ಪಾನಿಗಲೆ ವಿ2 ಬೈಕ್ ಬ್ರ್ಯಾಂಡ್ ಸಿಗ್ನೇಚರ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಏರ್ ಡ್ಯಾಮ್ ಮತ್ತು ವಿ-ಆಕಾರದ ಡಿಆರ್ಎಲ್ ಅನ್ನು ಹೊಂದಿದೆ. ಡುಕಾಟಿ ಪಾನಿಗಲೆ ವಿ2 ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕ್ಲಸ್ಟರ್‌ಗಾಗಿ 4.3-ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ ಸ್ಲಂಗ್ ಅಂಡರ್ ಎಕ್ಸಾಸ್ಟ್ ಅನ್ನು ಕೂಡ ಹೊಂದಿದೆ.

ಡೀಲರ್ ಬಳಿ ತಲುಪಿದ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್

ಹೊಸ ಡುಕಾಟಿ ಪಾನಿಗಲೆ ವಿ2 ಬೈಕಿನಲ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಬ್ರೆಂಬೊದಿಂದ 4-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ 320 ಎಂಎಂ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ 245 ಎಂಎಂ ಡಿಸ್ಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಡೀಲರ್ ಬಳಿ ತಲುಪಿದ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್

ಡುಕಾಟಿ ಪಾನಿಗಲೆ ವಿ2 ಬೈಕ್ ತನ್ನ ಸಂಪೂರ್ಣ ಎಲೆಕ್ಟ್ರಾನಿಕ್ಸ್ ಕಿಟ್ ಅನ್ನು 959 ಮಾದರಿಯಿಂದ ಎರವಲು ಪಡದಿದೆ. ಇನ್ನ್ ಹೊಸ ಡುಕಾಟಿ ಪಾನಿಗಲೆ ವಿ2 ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಅನ್ನು ನೀಡಿದೆ.

ಡೀಲರ್ ಬಳಿ ತಲುಪಿದ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್

ಡುಕಾಟಿ ಪಾನಿಗಲೆ ವಿ2 ಉತ್ತಮ ಕಾರ್ಯಕ್ಷಮತೆ ಬೈಕ್ ಆಗಿದೆ. ಹೊಸ ಡುಕಾಟಿ ಪಾನಿಗಲೆ ವಿ2 ಬೈಕನ್ನು ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಹೆಚ್ಚಿನ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಆದರೆ ಹಿಂದಿನ ಮಾದರಿಗಿಂತ ತುಸು ಹೆಚ್ಚು ಪವರ್ ಉತ್ಪಾದಿಸುತ್ತದೆ. ಇನ್ನು ಹೊಸ ಡುಕಾಟಿ ಪಾನಿಗಲೆ ವಿ2 ಬೈಕಿನ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Tuesday, September 1, 2020, 9:54 [IST]
English summary
Ducati Panigale V2 Starts To Arrive At Dealerships. Read In Kannada.
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+