ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆಗೊಳಿಸಿದ ಇ-ಬೈಕ್ ಗೋ
ದ್ವಿಚಕ್ರ ವಾಹನ ಬಾಡಿಗೆ ಕಂಪನಿಯಾದ ಇ-ಬೈಕ್ ಗೋ, ಚಂದಾದಾರಿಕೆ ಆಧಾರಿತ ಎಲೆಕ್ಟ್ರಿಕ್ ಬೈಸಿಕಲ್‌ಗಳನ್ನು (ಇ-ಸೈಕಲ್) ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ದಿನದ ಅಥವಾ ತಿಂಗಳ ಚಂದಾದಾರಿಕೆ ಆಧಾರದ ಮೇಲೆ ಬುಕ್ಕಿಂಗ್ ಮಾಡಬಹುದು.

ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ವಿಶೇಷವಾಗಿ ಡೆಲಿವರಿ ಸೇವೆಗಳನ್ನು ನೀಡುವವರಿಗಾಗಿಯೇ ಬಿಡುಗಡೆಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ದಿನಕ್ಕೆ ರೂ.80 ಚಂದಾ ಪಾವತಿಸಿ ಬುಕ್ಕಿಂಗ್ ಮಾಡಬಹುದು. ಈ ಎಲೆಕ್ಟ್ರಿಕ್ ಸೈಕಲ್ ಅನ್ನು 3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ಸೈಕಲ್ 60-70 ಕಿ.ಮೀಗಳವರೆಗೆ ಚಲಿಸುತ್ತದೆ.

ಡೆಲಿವರಿ ಸೇವೆಗಳನ್ನು ನೀಡುವವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ನಗರದ ವ್ಯಾಪ್ತಿಯೊಳಗಿನ ಡೆಲಿವರಿ ಸಿಬ್ಬಂದಿ ಈ ಸೈಕಲ್‌ಗಳನ್ನು ಬಳಸಬಹುದು. ಇ-ಸೈಕಲ್‌ನಲ್ಲಿ ಒಂದು ಬಾರಿಗೆ 200 ಕೆಜಿ ತೂಕವನ್ನು ಸಾಗಿಸಬಹುದು. ಇದರಿಂದ ಡೆಲಿವರಿ ಸಿಬ್ಬಂದಿಗೆ ಅನುಕೂಲವಾಗಲಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೈಗೆಟುಕುವ ಚಂದಾದಾರಿಕೆ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಹಾಗೂ ಮೆಂಟೆನೆನ್ಸ್ ಇಲ್ಲದ ಕಾರಣ ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಸುಲಭವಾಗಿ ಬಳಸಬಹುದು. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಬ್ಯಾಟರಿಗಳಿಂದ ನಿಯಂತ್ರಿಸುವುದರಿಂದ ಇಂಧನ ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ.

ಸದ್ಯಕ್ಕೆ ಇ-ಬೈಕ್ ಗೋ ಕಂಪನಿಯು ಸ್ವಿಗ್ಗಿ, ಜೊಮಾಟೊ, ಬಿಗ್‌ಬಾಸ್ಕೆಟ್, ದೆಹಲಿ, ರೆಬೆಲ್ ಫುಡ್ಸ್ ಕಂಪನಿಗಳ ಡೆಲಿವರಿ ಸಿಬ್ಬಂದಿಗೆ ಎಲೆಕ್ಟ್ರಿಕ್ ಬೈಕ್, ಬೈಸಿಕಲ್ ಹಾಗೂ ಸ್ಕೂಟರ್‌ಗಳನ್ನು ಒದಗಿಸುತ್ತಿದೆ. ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಮುಂತಾದ ಮಹಾನಗರಗಳಲ್ಲಿ ಇ-ಬೈಕ್ ಗೋ ವಾಹನಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿವೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕಂಪನಿಯ ಚಂದಾದಾರಿಕೆ ಯೋಜನೆಯಡಿಯಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಇ-ಬೈಕ್ ಗೋ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್‌ಗಳನ್ನು ಬುಕ್ಕಿಂಗ್ ಮಾಡಬಹುದು. ಮಾಸಿಕ ರೂ.3600 ಪಾವತಿಸಿ ಉದ್ಯೋಗಿಗಳಿಗಾಗಿ ಇ-ಸ್ಕೂಟರ್‌ಗಳನ್ನು ಕಾಯ್ದಿರಿಸಬಹುದು.

ನವದೆಹಲಿ ಮೂಲದ ಇ-ಬೈಕ್ ಗೋ ರೆಂಟ್ ಸೇವೆಯನ್ನು 2019ರ ಜನವರಿಯಲ್ಲಿ ದೆಹಲಿಯಲ್ಲಿ ಆರಂಭಿಸಲಾಯಿತು. ಕಳೆದ ವರ್ಷ ಜುಲೈನಲ್ಲಿ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಲು ತೈವಾನ್ ಮೂಲದ ಯುರೆಡಾ ಕಂಪನಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.


Click it and Unblock the Notifications