ಆಟೋ ಎಕ್ಸ್‌ಪೋ 2020: ಅನಾವರಣಗೊಳ್ಳಲಿದೆ ಎವಾರ್ವ್ ಎಲೆಕ್ಟ್ರಿಕ್ ಸ್ಕೂಟರ್
ಪುಣೆ ಮೂಲದ ಎವಾರ್ವ್ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ವಾಹನವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮುಂದಿನ ತಿಂಗಳು ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಟ್ರಾನ್ಸ್ ಫಾರ್ಮರ್ ರೀತಿಯ ಡಿಸೈನ್ ಹಾಗೂ ಅಡ್ವಾನ್ಸ್ ಎಂಜಿನಿಯರಿಂಗ್ ಅನ್ನು ಹೊಂದಿದೆ. ಎವಾರ್ವ್ ಮೋಟಾರ್ಸ್, ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಸೆಗ್‍ಮೆಂಟ್‍ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‍ನ ಬಿಡುಗಡೆಯೊಂದಿಗೆ ಕ್ರಾಂತಿಯನ್ನುಂಟು ಮಾಡಲು ಮುಂದಾಗಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿರುವ ಬ್ಯಾಟರಿಯನ್ನು ಐದು ಗಂಟೆಗಳಲ್ಲಿ 5 ಆಂಪ್ ಚಾರ್ಜಿಂಗ್ ಸಾಕೆಟ್‍ನಿಂದ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಸ್ಕೂಟರ್ ರಿಚಾರ್ಜಬಲ್ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಗಳಿದ್ದು, ಅಂಡರ್ ಸೀಟಿನಲ್ಲಿ ಬ್ಯಾಟರಿಯನ್ನು ನೀಡಲಾಗುವುದು.

ಈ ಎಲೆಕ್ಟ್ರಿಕ್ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 110 ಕಿ.ಮೀಗಳಾಗಿದೆ. ಈ ಸ್ಕೂಟರಿನಲ್ಲಿ ಕನೆಕ್ಟಿವಿಟಿಗಾಗಿ ಹಲವಾರು ಇನ್ ಬಿಲ್ಟ್ ಅಪ್ಲಿಕೇಶನ್‍ಗಳಿವೆ. ಇವುಗಳು ಸವಾರನ ಮಾಹಿತಿ, ರೇಂಜ್ ಟೂ ಎಂಪ್ಟಿ, ಬ್ಯಾಟರಿ ಸ್ಟೇಟಸ್, ಮ್ಯಾಪ್, ಲೊಕೇಶನ್, ಎರರ್ ಕೋಡ್, ಹತ್ತಿರದಲ್ಲಿರುವ ಚಾರ್ಜಿಂಗ್ ಸ್ಟೇಷನ್‍ಗಳ ಮಾಹಿತಿಯನ್ನು ನೀಡುತ್ತವೆ.

ಎವಾರ್ವ್ ಕಂಪನಿಯು ಬಿಡುಗಡೆಯಾಗಲಿರುವ ಎವಾರ್ವ್ ಎಲೆಕ್ಟ್ರಿಕ್ ಸ್ಕೂಟರ್‍ನ ಎರಡು ಕಾನ್ಸೆಪ್ಟ್ ಟೀಸರ್‍ಗಳನ್ನು ಬಿಡುಗಡೆಗೊಳಿಸಿದೆ. ಎವಾರ್ವ್ ಎಲೆಕ್ಟ್ರಿಕ್ ಸ್ಕೂಟರಿನಲ್ಲಿರುವ ಮುಖ್ಯವಾದ ಭಾಗವೆಂದರೆ, ಮುಂಭಾಗದಲ್ಲಿರುವ ಹೆಡ್‍ಲೈಟ್ ಅಸೆಂಬ್ಲಿ.

ಈ ಎಲೆಕ್ಟ್ರಿಕ್ ಸ್ಕೂಟರ್, ರೌಂಡ್ ಹೆಡ್‍ಲ್ಯಾಂಪ್ ಮೇಲ್ಭಾಗದಲ್ಲಿ ಬುಲ್ ಹಾರ್ನ್ ರೀತಿಯಲ್ಲಿರುವ ಎಲ್‍ಇಡಿ ಡಿಆರ್‍ಎಲ್ ಅನ್ನು ಹೊಂದಿದೆ. ಈ ಬುಲ್ ಹಾರ್ನ್, ಡಿಆರ್‍ಎಲ್ ಸ್ಕೂಟರ್ ಅಗಲವಾಗಿರುವಂತಹ ಭಾವನೆಯನ್ನುಂಟು ಮಾಡುತ್ತದೆ.

ಎವಾರ್ವ್ ಎಲೆಕ್ಟ್ರಿಕ್ ಸ್ಕೂಟರ್ ಸೈಡ್‍ನಲ್ಲಿ ಬ್ಲೂ ಅಸೆಂಟ್, ಹಿಂಭಾಗದ ಸವಾರರಿಗಾಗಿ ಫುಟ್ ಬೋರ್ಡ್, ರೇರ್ ಫೆಂಡರ್ ಹೊಂದಿದ್ದು, ಫುಟ್ ಬೋರ್ಡ್‍ನ ಮಧ್ಯದಲ್ಲಿ ಸ್ಟೋರೇಜ್ ಏರಿಯಾವನ್ನು ಸಹ ಹೊಂದಿದೆ.

ಈ ಸ್ಕೂಟರ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಆಟೋ ಎಕ್ಸ್ ಪೋದಲ್ಲಿ ಮೂಲ ಮಾದರಿಯನ್ನು ಅನಾವರಣಗೊಳಿಸಲಾಗುವುದು. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ವರ್ಷದ ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಬಿಡುಗಡೆಗೊಳಿಸಲಾಗುವುದು. ಎವಾರ್ವ್ ಎಲೆಕ್ಟ್ರಿಕ್ ಸ್ಕೂಟರ್ ಎಆರ್‍ಎಐ ಪ್ರಮಾಣಪತ್ರವನ್ನು ಪಡೆಯಬೇಕಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಎವಾರ್ವ್ ಎಲೆಕ್ಟ್ರಿಕ್ ಸ್ಕೂಟರ್ ಆಟೋ ಎಕ್ಸ್ ಪೋದ ಬಹುನಿರೀಕ್ಷಿತ ಎಲೆಕ್ಟ್ರಿಕ್ ಸ್ಕೂಟರ್‍ಗಳಲ್ಲಿ ಒಂದಾಗಿದೆ. ಈಗ ಬಿಡುಗಡೆಯಾಗಿರುವ ಟೀಸರ್‍ನಲ್ಲಿರುವ ಸ್ಕೂಟರ್ ತನ್ನ ವಿನ್ಯಾಸದಿಂದ ಗಮನವನ್ನು ಸೆಳೆಯುತ್ತಿದೆ. ಈ ಸ್ಕೂಟರಿನ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಆಟೋ ಎಕ್ಸ್ ಪೋದಲ್ಲಿ ನೀಡಲಾಗುವುದು.


Click it and Unblock the Notifications








