ಆಟೋ ಎಕ್ಸ್‌ಪೋ 2020: ಡರ್ಬಿ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವೊಲೆಟ್
ಗುರುಗ್ರಾಮ ಮೂಲದ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ ತಯಾರಕ ಕಂಪನಿಯಾದ ಇವೊಲೆಟ್, ದೆಹಲಿಯಲ್ಲಿ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಡರ್ಬಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ.

ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಡರ್ಬಿ ಎಲೆಕ್ಟ್ರಿಕ್ ಸ್ಕೂಟರ್ 60ರಿಂದ 65 ಕಿ.ಮೀವರೆಗೂ ಚಲಿಸುತ್ತದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 3 - 4 ಗಂಟೆಗಳು ಬೇಕಾಗುತ್ತವೆ.

ಈ ಸ್ಕೂಟರಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಲಾಗಿದೆ. ಅಲಾಯ್ ವ್ಹೀಲ್‍ಗಳನ್ನು ಹೊಂದಿರುವ ಈ ಸ್ಕೂಟರಿನ ಟಯರ್‍ಗಳು ಟ್ಯೂಬ್‍ಲೆಸ್ ಆಗಿವೆ. ಈ ಎಲೆಕ್ಟ್ರಿಕ್ ಸ್ಕೂಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಹೊಂದಿದೆ.

ಡರ್ಬಿ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ವೇಗವನ್ನು ಹೊಂದಿದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ. ಈ ಸ್ಕೂಟರ್ ಸ್ಪೋರ್ಟಿ ಡಿಸೈನ್ ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಎಲ್‍ಇಡಿ ಲೈಟಿಂಗ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೋಲ್ ಹಾಗೂ ಮೊಬೈಲ್ ಆ್ಯಪ್ ಕನೆಕ್ಟಿವಿಟಿಗಳಿವೆ.

ಡರ್ಬಿ ಸ್ಕೂಟರ್ ಅನ್ನು ವಿಆರ್‍ಎಲ್‍ಎ ಬ್ಯಾಟರಿ ಹೊಂದಿರುವ ಇಝಡ್ ಹಾಗೂ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಕ್ಲಾಸಿಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಸ್ಕೂಟರ್ 250 ವ್ಯಾಟ್‍ನ ಬಿಎಲ್‍ಡಿಸಿ ಎಲೆಕ್ಟ್ರಿಕ್ ಮೋಟರ್ ಹೊಂದಿದೆ.

ಈ ಮೋಟರ್ 350 ವ್ಯಾಟ್‍ನ ಪೀಕ್ ಪವರ್ ಉತ್ಪಾದಿಸುತ್ತದೆ. ವಿಆರ್‍ಎಲ್‍ಎ ಮಾದರಿಯು ಪೂರ್ತಿಯಾಗಿ ಚಾರ್ಜ್ ಆಗಲು 8 - 9 ಗಂಟೆಗಳು ಬೇಕಾಗುತ್ತವೆ. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ 55 - 60 ಕಿ.ಮೀವರೆಗೂ ಚಲಿಸುತ್ತದೆ.

ಇವೊಲೆಟ್ ಕಂಪನಿಯು ಬ್ಯಾಟರಿಗಳ ಮೇಲೆ 3 ವರ್ಷ ಹಾಗೂ ಮೋಟರ್ ಮೇಲೆ 1 ವರ್ಷದ ವಾರಂಟಿ ನೀಡುತ್ತದೆ. ಸಸ್ಪೆಂಷನ್‍ಗಳಿಗಾಗಿ ಈ ಸ್ಕೂಟರಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸರ್ವರ್‍ಗಳನ್ನು ನೀಡಲಾಗಿದೆ.

ಬ್ರೇಕಿಂಗ್‍ಗಳಿಗಾಗಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಇ-ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ. 102 ಕೆ.ಜಿ ತೂಕವನ್ನು ಹೊಂದಿರುವ ಡರ್ಬಿ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿರುವ ಸೀಟಿನ ಎತ್ತರ 750 ಎಂಎಂ ಹಾಗೂ ಗ್ರೌಂಡ್ ಕ್ಲಿಯರೆನ್ಸ್ 160 ಎಂಎಂಗಳಾಗಿದೆ.


Click it and Unblock the Notifications








