ಹಾರ್ಲೆ ಡೇವಿಡ್ಸನ್ ವೆಬ್‌ಸೈಟ್‌ನಿಂದ ಮರೆಯಾಯ್ತು ಬ್ರಾಂಕ್ಸ್ ಬೈಕಿನ ಹೆಸರು

ಅಮೆರಿಕ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಇತ್ತೀಚೆಗೆ ಪ್ರತಿ ಎರಡು ವಾರಗಳಿಗೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಕಂಪನಿಯ ಸರಣಿಯಲ್ಲಿರುವ ಬೈಕುಗಳ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡಿದೆ.

ಹಾರ್ಲೆ ಡೇವಿಡ್ಸನ್ ವೆಬ್‌ಸೈಟ್‌ನಿಂದ ಮರೆಯಾಯ್ತು ಬ್ರಾಂಕ್ಸ್ ಬೈಕಿನ ಹೆಸರು

ಇನ್ನು ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಬ್ರಾಂಕ್ಸ್ ಸ್ಟ್ರೀಟ್‌ಫೈಟರ್ ಬೈಕನ್ನು ಮುಂದಿನ ವರ್ಷ ಬಿಡುಗಡೆಯಾಗುವುದಿಲ್ಲವೆಂದು ಹೇಳಿದೆ ಎಂದು ವರದಿಗಳಾಗಿದೆ.ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಮುಂಬರುವ ಹಾರ್ಲೆ-ಡೇವಿಡ್ಸನ್ ಬ್ರಾಂಕ್ಸ್ ಸ್ಟ್ರೀಟ್‌ಫೈಟರ್ ಬೈಕಿನ ಹೆಸರನ್ನು ತೆಗೆದುಹಕಲಾಗಿದೆ. ಹಾರ್ಲೆ ಡೇವಿಡ್ಸನ್ ಕಂಪನಿಯ ಭವಿಷ್ಯದ ಮಾದರಿಗಳ ಪಟ್ಟಿಯಲ್ಲಿ ಬ್ರಾಂಕ್ಸ್ ಬೈಕ್ ಕೈಬಿಟ್ಟಿದ್ದಾರೆ.

ಹಾರ್ಲೆ ಡೇವಿಡ್ಸನ್ ವೆಬ್‌ಸೈಟ್‌ನಿಂದ ಮರೆಯಾಯ್ತು ಬ್ರಾಂಕ್ಸ್ ಬೈಕಿನ ಹೆಸರು

ಹಾರ್ಲೆ ಡೇವಿಡ್ಸನ್ ಕಂಪನಿಯು ಹೆವಿವೇಯ್ಟ್ ಕ್ರೂಸರ್‌ಗಳು ಮತ್ತು ಬ್ಯಾಗರ್‌ಗಳಂತಹ ಹೆಚ್ಚಿನ ಲಾಭ ಹೊಂದಿರುವ ಮಾದರಿಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಹಾರ್ಲೆ ಡೇವಿಡ್ಸನ್ ಕಂಪನಿಯು ಹೆಚ್ಚಾಗಿ ಪ್ಯಾನ್ ಅಮೆರಿಕಾ ಅಡ್ವೆಂಚರ್ ಮಾದರಿಯ ಬಗ್ಗ್ಗೆ ಗಮನಹರಿಸಲಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹಾರ್ಲೆ ಡೇವಿಡ್ಸನ್ ವೆಬ್‌ಸೈಟ್‌ನಿಂದ ಮರೆಯಾಯ್ತು ಬ್ರಾಂಕ್ಸ್ ಬೈಕಿನ ಹೆಸರು

ಮುಂದಿನ ವರ್ಷದಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು ಪ್ಯಾನ್ ಅಮೆರಿಕಾ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಇನ್ನು ಹಾರ್ಲೆ ಡೇವಿಡ್ಸನ್ ಕಂಪನಿಯು ಎಲೆಕ್ಟ್ರಿಕ್ ಮಾದರಿಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುತ್ತಿದೆ.

ಹಾರ್ಲೆ ಡೇವಿಡ್ಸನ್ ವೆಬ್‌ಸೈಟ್‌ನಿಂದ ಮರೆಯಾಯ್ತು ಬ್ರಾಂಕ್ಸ್ ಬೈಕಿನ ಹೆಸರು

ಪ್ಯಾನ್ ಅಮೆರಿಕಾ ಬೈಕಿನಲ್ಲಿ ಅದೇ 1,250 ಸಿಸಿ ವಿ-ಟ್ವಿನ್ ಎಂಜಿನ್ ಅನ್ನು ಹೊಂದಿರಲಿದೆ. ಇನ್ನು ಹಾರ್ಲೆ ಡೇವಿಡ್ಸನ್ ಬ್ರಾಂಕ್ಸ್ ಮಾದರಿಯಲ್ಲಿದ್ದ 975 ಸಿಸಿ,975 ಸಿಸಿ,ವಿ-ಟ್ವಿನ್‌ ಎಂಜಿನ್ ಅನ್ನು ಸ್ಥಗಿತಗೊಳಿಸಬಹುದು.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಹಾರ್ಲೆ ಡೇವಿಡ್ಸನ್ ವೆಬ್‌ಸೈಟ್‌ನಿಂದ ಮರೆಯಾಯ್ತು ಬ್ರಾಂಕ್ಸ್ ಬೈಕಿನ ಹೆಸರು

ಇನ್ನು ಹಾರ್ಲೇ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ತನ್ನ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕಿನ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಭಾರತೀಯ ಮಾರುಕಟ್ಟೆಯಲ್ಲಿ ಬ್ರಾಂಡ್‌ನ ಎಂಟ್ರಿ ಲೆವೆಲ್ ಕ್ರೂಸರ್ ಬೈಕ್ ಆಗಿದೆ.

ಹಾರ್ಲೆ ಡೇವಿಡ್ಸನ್ ವೆಬ್‌ಸೈಟ್‌ನಿಂದ ಮರೆಯಾಯ್ತು ಬ್ರಾಂಕ್ಸ್ ಬೈಕಿನ ಹೆಸರು

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕಿನ ಮೇಲೆ ರೂ.65,000 ಗಳವರೆಗೆ ಭರ್ಜರಿ ರಿಯಾಯಿತಿ ನೀಡಿದೆ. ರಿಯಾಯಿತಿ ಘೋಷಿಸಿದ ಬಳಿಕ ಈ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕಿನ ಬೆಲೆಯು ರೂ.4.69 ಲಕ್ಷಗಳಾಗಿದೆ. ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕ್ ಬಿಎಸ್-6 ಆವೃತ್ತಿಯಾಗಿದೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹಾರ್ಲೆ ಡೇವಿಡ್ಸನ್ ವೆಬ್‌ಸೈಟ್‌ನಿಂದ ಮರೆಯಾಯ್ತು ಬ್ರಾಂಕ್ಸ್ ಬೈಕಿನ ಹೆಸರು

ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು 10 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕುಗಳನ್ನು ಬಿಡುಗಡೆಗೊಳಿಸಲಾಗಿತ್ತು. ಹೊಸ ಸ್ಟ್ರೀಟ್ 750 ಬೈಕ್ ಅನ್ನು ವಿಶೇಷವಾಗಿಸಲು ಕೇವಲ 300 ಬೈಕುಗಳನ್ನು ಮಾತ್ರ ಬಿಡುಗಡೆಗೊಳಿಸಲಾಗಿತ್ತು.

ಹಾರ್ಲೆ ಡೇವಿಡ್ಸನ್ ವೆಬ್‌ಸೈಟ್‌ನಿಂದ ಮರೆಯಾಯ್ತು ಬ್ರಾಂಕ್ಸ್ ಬೈಕಿನ ಹೆಸರು

ಇನ್ನು ದೊಡ್ಡ ಪ್ರಶ್ನೆಯೆಂದರೆ ಬ್ರಾಂಕ್ಸ್ ಬೈಕಿನ ಭವಿಷ್ಯ ಏನು ಎಂಬುದು, ಈ ಬ್ರಾಂಕ್ಸ್ ಬೈಕನ್ನು ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಾಗುವುದಿಲ್ಲ ಎಂದು ಮಾತ್ರ ಕಂಪನಿ ಸ್ಪಷ್ಟಪಡಿಸಿದೆ. ಬ್ರಾಂಕ್ಸ್ ಬೈಕನ್ನು ಭವಿಷ್ಯದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

Most Read Articles

Kannada
English summary
Harley-Davidson Bronx Streetfighter Removed From Website. Read In Kannada.
Story first published: Friday, August 21, 2020, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X