ಬಹಿರಂಗವಾಯ್ತು ಹಾರ್ಲೆ ಡೇವಿಡ್ಸನ್ ಹೊಸ ಬೈಕುಗಳ ಬೆಲೆ
ಅಮೆರಿಕಾ ಮೂಲದ ಬೈಕ್ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಭಾರತದ ತನ್ನ ವೆಬ್‌ಸೈಟ್ ಅನ್ನು ನವೀಕರಿಸಿದೆ. ಇದರ ಜೊತೆಗೆ 2020ರ ಹಾರ್ಲೆ ಡೇವಿಡ್ಸನ್ ಲೋ ರೈಡರ್ ಹಾಗೂ 2020ರ ಹಾರ್ಲೆ ಡೇವಿಡ್ಸನ್ ಲೋ ರೈಡರ್ ಎಸ್ ಬೈಕುಗಳ ಬೆಲೆಯನ್ನು ಅಪ್ ಡೇಟ್ ಮಾಡಿದೆ.

ಹೊಸ ಹಾರ್ಲೆ ಡೇವಿಡ್ಸನ್ ಲೋ ರೈಡರ್ ಬೈಕಿನ ಬೆಲೆ ರೂ. 13.75 ಲಕ್ಷಗಳಾದರೆ, ಲೋ ರೈಡರ್ ಎಸ್ ಬೈಕಿನ ಬೆಲೆ ರೂ.14.69 ಲಕ್ಷಗಳಾಗಿದೆ. ಈ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ. ಹೊಸ 2020 ಹಾರ್ಲೆ ಡೇವಿಡ್ಸನ್ ಲೋ ರೈಡರ್ ಬೈಕಿನ ವಿನ್ಯಾಸ ಹಾಗೂ ಶೈಲಿಯನ್ನು ಈ ಬೈಕಿನ ಹಳೆಯ 1970ರ ಮಾದರಿಯಿಂದ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಕ್ರೂಸ್ ವಿನ್ಯಾಸ, ಡ್ಯುಯಲ್ ಇನ್ಸ್ ಟ್ರೂಮೆಂಟ್ ಗೂಸ್, ಹೆಡ್ಲೈಟ್ ವೈಸರ್, ಕ್ರೋಮ್ ಎಕ್ಸಾಸ್ಟ್ ವಿನ್ಯಾಸಗಳು ಸೇರಿವೆ.

ಹಾರ್ಲೆ ಡೇವಿಡ್ಸನ್ ಲೋ ರೈಡರ್ ಬೈಕಿನಲ್ಲಿ 1,745 ಸಿಸಿ ವಿ-ಟ್ವಿನ್ ಮಿಲ್ವಾಕೀ 107 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 3,000 ಆರ್‌ಪಿಎಂನಲ್ಲಿ 144 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್‌ನೊಂದಿಗೆ 6-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಕ್ಲಾಸಿಕ್ ಸಾಫ್ಟೈಲ್ ಲೈನ್ ಅನ್ನು ಬೈಕಿನ ಫ್ರೇಮ್ ನಲ್ಲಿ ಬಳಸಲಾಗಿದೆ. ಈ ಬೈಕ್ ಮೊದಲಿಗಿಂತ ಕಡಿಮೆ ತೂಕವನ್ನು ಹೊಂದಿರುವುದರಿಂದ ಹೆಚ್ಚಿನ ರೆಸ್ಪಾನ್ಸ್ ಪಡೆಯಲಿದೆ.

ಈ ಬೈಕ್ ಮೊನೊ ಶಾಕ್ ರೇರ್ ಸಸ್ಪೆಂಷನ್ ಹೊಂದಿದೆ. ಬ್ರೇಕಿಂಗ್ ಗಾಗಿ ಮುಂಭಾಗದಲ್ಲಿ 4-ಪಿಸ್ಟನ್ ಫಿಕ್ಸ್ಡ್ ಕ್ಯಾಪಿಲ್ಲರ್ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 2-ಪಿಸ್ಟನ್ ಫ್ಲೋಟಿಂಗ್ ಕ್ಯಾಪಿಲ್ಲರ್ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಹಾರ್ಲೆ ಡೇವಿಡ್ಸನ್ ಲೋ ರೈಡರ್ ಎಸ್ ಲೋ ರೈಡರ್ ಬೈಕ್ ಕಪ್ಪು ಬಣ್ಣವನ್ನು ಹೊಂದಿದೆ. ಹಾರ್ಲೆ ಡೇವಿಡ್ಸನ್ ಕಂಪನಿಯು ಈ ಬೈಕ್ ಅನ್ನು ಪರ್ಫಾರ್ಮೆನ್ಸ್ ಕ್ರೂಸರ್ ಎಂದು ಕರೆಯುತ್ತದೆ. ಈ ಬೈಕಿನ ಮುಂಭಾಗದಲ್ಲಿ ಇನ್ವರ್ಟೆಡ್ ಸಸ್ಪೆಂಷನ್ ನೀಡಲಾಗಿದೆ.

ಈ ಬೈಕ್ ಎತ್ತರಿಸಲಾದ ಹ್ಯಾಂಡಲ್‌ಬಾರ್ ಹಾಗೂ ಕಾಸ್ಟ್ ಅಲ್ಯೂಮಿನಿಯಂ ಅನ್ನು ಹೊಂದಿದೆ. ಲೋ ರೈಡ್ ಎಸ್ ಬೈಕಿನಲ್ಲಿ ಮಿಲ್ವಾಕೀ-ಎಟಿ 114ಯ 1,745 ಸಿಸಿ ವಿ-ಟ್ವಿನ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 3,000 ಆರ್‌ಪಿಎಂನಲ್ಲಿ 145 ಎನ್ಎಂ ಟಾರ್ಕ್ ಹಾಗೂ 5,020 ಆರ್‌ಪಿಎಂನಲ್ಲಿ 87 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಹಾರ್ಲೆ ಡೇವಿಡ್ಸನ್ ಲೋ ರೈಡರ್ ಎಸ್ ನ ಬೈಕ್ 287 ಕೆಜಿ ತೂಕವನ್ನು ಹೊಂದಿದೆ.


Click it and Unblock the Notifications








