ಹಾರ್ಲೆ ಡೇವಿಡ್ಸನ್ ಕಂಪನಿಯಿಂದ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ

ಹಾರ್ಲೆ ಡೇವಿಡ್ಸನ್ ಇಂಡಿಯಾ, ದೇಶಾದ್ಯಂತವಿರುವ ಸೇನಾ ಸಿಬ್ಬಂದಿಗಾಗಿ ಕ್ಯಾಂಟೀನ್ ಸ್ಟೋರ್ ಗಳ ಮೂಲಕ ಸ್ಟ್ರೀಟ್ 750 ಹಾಗೂ ಸ್ಟ್ರೀಟ್ ರಾಡ್ ಬೈಕ್ ಗಳನ್ನು ವಿಶೇಷ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಯಿಂದ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ

ಹಾರ್ಲೆ ಡೇವಿಡ್ಸನ್ ಕಂಪನಿಯು ಈ ಹಿಂದೆಯೂ ಸಹ ಸೈನಿಕರಿಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಈಗ ತೆಗೆದುಕೊಂಡಿರುವ ಕ್ರಮದಿಂದಾಗಿ ಹಾರ್ಲೆ ಡೇವಿಡ್ಸನ್ ಬೈಕ್ ಕೊಳ್ಳ ಬೇಕೆಂಬ ಸೈನಿಕರ ಕನಸನ್ನು ನನಸು ಮಾಡುವ ಉದ್ದೇಶವನ್ನು ಹೊಂದಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಯಿಂದ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ

ಕಂಪನಿಯು, ರಕ್ಷಣಾ ಅಧಿಕಾರಿಗಳಿಗಾಗಿಯೇ ಮೀಸಲಾದ ಹೊಸ ವಿಶೇಷ ಹಾರ್ಲೆ ಮಾಲೀಕರ ಗ್ರೂಪ್ ಅನ್ನು ರಚಿಸಿದೆ. ಇದಕ್ಕೆ ಸಶಸ್ತ್ರ ಪಡೆಗಳ ಅಧ್ಯಾಯ ಎಂಬ ಹೆಸರನ್ನಿಟ್ಟಿದೆ. 2017ರಿಂದೀಚೆಗೆ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಹಾಗೂ ಹಿರಿಯ ಸದಸ್ಯರು ಈ ಗ್ರೂಪಿನ ಸದಸ್ಯರಾಗಿದ್ದಾರೆ.

ಹಾರ್ಲೆ ಡೇವಿಡ್ಸನ್ ಕಂಪನಿಯಿಂದ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ

ಹಾರ್ಲೆ ಡೇವಿಡ್ಸನ್ ಕಂಪನಿಯು ಈ ಗ್ರೂಪಿಗಾಗಿ ಉಚಿತವಾದ ಹಾಗೂ ಸುರಕ್ಷಿತವಾದ ಕಸ್ಟಡಿಯನ್ನು ನೀಡುತ್ತದೆ. ಈ ಸೇವೆಯನ್ನು ದೇಶಾದ್ಯಂತವಿರುಯ ಆಯ್ದ ಹಾರ್ಲೆ-ಡೇವಿಡ್ಸನ್ ಡೀಲರ್ ಗಳಲ್ಲಿ ಪಡೆಯಬಹುದು. ಈಗ ಸ್ಟ್ರೀಟ್ 750 ಹಾಗೂ ಸ್ಟ್ರೀಟ್ ರಾಡ್ ಬೈಕ್ ಗಳನ್ನು ಕ್ಯಾಂಟೀನ್ ಗಳಲ್ಲಿ ಮಾರಾಟ ಮಾಡುತ್ತಿರುವುದರಿಂದ ಈ ಗ್ರೂಪಿಗೆ ಮತ್ತಷ್ಟು ಅನುಕೂಲವಾಗಲಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಯಿಂದ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕಿನಲ್ಲಿ 749 ಸಿಸಿ, ವಿ ಟ್ವಿನ್, ಲಿಕ್ವಿಡ್ ಕೂಲ್, ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 3,750 ಆರ್ ಪಿಎಂನಲ್ಲಿ 60 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ ಆರು ಸ್ಪೀಡಿನ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಸಸ್ಪೆಂಷನ್ ಗಳಿಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಟ್ವಿನ್ ಶಾಕ್ ಯುನಿಟ್ ಗಳಿವೆ.

ಹಾರ್ಲೆ ಡೇವಿಡ್ಸನ್ ಕಂಪನಿಯಿಂದ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ

ಬ್ರೇಕಿಂಗ್ ಗಾಗಿ ಎರಡೂ ಬದಿಯಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿರುವ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಯಿಂದ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ ಬೈಕ್ ನಲ್ಲಿರುವ ಎಂಜಿನ್, ಬ್ರೇಕ್ ಹಾಗೂ ಲೈಟ್ ಗಳನ್ನು ಸ್ಟ್ರೀಟ್ 750 ಬೈಕಿನಿಂದ ಪಡೆಯಲಾಗಿದೆ. ಆದರೆ ಸ್ಟ್ರೀಟ್ ರಾಡ್ ಬೈಕಿನ ಮುಂಭಾಗದಲ್ಲಿ ಯುಎಸ್ ಡಿ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ ನ ಸಸ್ಪೆಂಷನ್ ಗಳಿವೆ.

ಹಾರ್ಲೆ ಡೇವಿಡ್ಸನ್ ಕಂಪನಿಯಿಂದ ಸೇನಾ ಸಿಬ್ಬಂದಿಗೆ ವಿಶೇಷ ಕೊಡುಗೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಾರ್ಲೆ ಡೇವಿಡ್ಸನ್ ಕಂಪನಿಯು ನಮ್ಮ ದೇಶದ ಸೇನಾ ಪಡೆ ಸಿಬ್ಬಂದಿಗೆ ಸಹಾಯ ಮಾಡಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗ ಸೇನಾ ಕ್ಯಾಂಟೀನ್ ಗಳಲ್ಲಿ ಬೈಕ್ ಮಾರಾಟಕ್ಕೆ ಮುಂದಾಗಿದೆ. ನಮ್ಮನ್ನು ಮಳೆ, ಗಾಳಿ, ಬಿಸಿಲೇನ್ನದೆ ರಕ್ಷಿಸುವ ಸೈನಿಕರಿಗೆ ಸಹಾಯ ಮಾಡಲು ಮುಂದಾಗಿದೆ. ಬೇರೆ ಕಂಪನಿಗಳು ಈ ನಿಟ್ಟಿನಲ್ಲಿ ಮುಂದಾಗುತ್ತವೆಯೇ ಕಾದು ನೋಡೋಣ.

More from DriveSpark

Article Published On: Friday, March 20, 2020, 18:06 [IST]
English summary
Harley Davidson to sell Street 750 Street Rod bikes at army canteen. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+