ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಕವಾಸಕಿ ಇಂಡಿಯಾ ಕಂಪನಿಯು 2020ರ ಆಗಸ್ಟ್ ತಿಂಗಳಲ್ಲಿ ಹೊಸ ವರ್ಸಿಸ್ 650 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಕವಾಸಕಿ ಕಂಪನಿಯು ತನ್ನ ಹೊಸ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಕವಾಸಕಿ ತನ್ನ ಬಿಎಸ್-6 ವರ್ಸಿಸ್ 650 ಬೈಕಿನ ಮೇಲೆ ರೂ.30,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿ ವೊಚರ್ ರೂಪದಲ್ಲಿ ಲಭ್ಯವಿದೆ, ಇದನ್ನು ನಗದು ರಿಯಾಯಿತಿ ಪಡೆಯಲು ಅಥವಾ ಉಚಿತ ಅಕ್ಸೆಸರೀಸ್ ಗಳನ್ನು ಪಡೆಯಲು ಬಳಸಬಹುದು. ವಿಶೇಷವೆಂದರೆ ವರ್ಸಿಸ್ 650 ಬೈಕಿನ ರಿಯಾಯಿತಿ ವೊಚರ್ 2020ರ ನವೆಂಬರ್ 30ರವರೆಗೆ ಅಥವಾ ಅಸ್ತಿತ್ವದಲ್ಲಿರುವ ಸ್ಟಾಕ್ ಇರುವವರೆಗೆ ಲಭ್ಯವಿದೆ.

ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಕೆಎಲ್‌ಎಕ್ಸ್ 110, ಕೆಎಲ್‌ಎಕ್ಸ್ 140 ಮತ್ತು ಕೆಎಕ್ಸ್ 100 ಸೇರಿದಂತೆ ಸಣ್ಣ-ಸಾಮರ್ಥ್ಯದ ಆಫ್-ರೋಡ್ ಬೈಕ್‌ಗಳಿಗೆ ಕಂಪನಿಯು ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದು ಕೇವಲ ಡ್ರಿಟ್ ಟ್ರ್ಯಾಕ್ ಗಳಿಲ್ಲಿ ಓಡಿಸುವ ಬೈಕುಗಳಾಗಿವೆ. ಸಾರ್ವಜನಿಕ ರಸ್ತೆಗಳಲ್ಲಿ ಈ ಆಫ್ ರೋಡ್ ಬೈಕುಗಳನ್ನು ಓಡಿಸುವಂತಿಲ್ಲ, ಕನೂನು ಬಾಹಿರವಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

2020ರ ಕವಾಸಕಿ ವರ್ಸಿಸ್ 650 ಜಪಾನಿನ ಬ್ರಾಂಡ್‌ನ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಉತ್ತಮ ಅಡ್ವೆಂಚರ್ ಮಾದರಿಯಾಗಿದೆ. ಈ ಹೊಸ 2020ರ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ 649 ಸಿಸಿ, ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ.

ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಈ ಎಂಜಿನ್ 8500 ಆರ್‌ಪಿಎಂನಲ್ಲಿ 65 ಬಿಹೆಚ್‌ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 61 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇಂದಿನ ಮಾದರಿಗೆ ಹೋಲಿಸಿದರೆ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕಡಿಮೆಯಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಹೊಸ ವರ್ಸಿಸ್ 650 ಬೈಕಿನಲ್ಲಿ ನಿಂಜಾ 650 ಮಾದರಿಯಲ್ಲಿರುವಂತಹ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಕಲರ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಫೀಚರ್ ಗಳನ್ನು ನೀಡಲಾಗಿಲ್ಲ.

ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಇನ್ನು 2020ರ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 145 ಎಂಎಂ ಆಫ್ಸೆಟ್ ಲೇಡೌನ್ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಈ ಹೊಸ ಕವಾಸಕಿ ವರ್ಸಿಸ್ 650 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಡ್ಯುಯಲ್-ಪಿಸ್ಟನ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 250 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಈ ಹೊಸ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಈ ಬೈಕಿನ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದನ್ನು ಹೊರತುಪಡಿಸಿ ಇತರ ಪ್ರಮುಖ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಿಎಸ್-6 ಕವಾಸಕಿ ವರ್ಸಿಸ್ 650 ಬೈಕಿನ ಮೇಲೆ ಭರ್ಜರಿ ರಿಯಾಯಿತಿ

ಕವಾಸಕಿ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗುತ್ತಿದೆ. ಕವಾಸಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಇನ್ನು ಈ ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಭರ್ಜರಿ ಆಫರ್ ಅನ್ನು ಕವಾಸಕಿ ಕಂಪನಿ ಘೋಷಿಸಿದೆ.

Article Published On: Monday, October 19, 2020, 19:09 [IST]
English summary
Kawasaki Versys 650 Available At Discount Of Rs 30,000. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+