ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಕವಾಸಕಿ ಇಂಡಿಯಾ ಮೋಟಾರ್‌ಸೈಕಲ್ ಸದ್ದಿಲ್ಲದೇ ತನ್ನ ವರ್ಸಿಸ್ 1000 ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಟೂರಿಂಗ್ ಬೈಕಿನ ಬೆಲೆ ಭಾರತದ ಎಕ್ಸ್‌ಶೋರೂಂ ದರದಂತೆ ರೂ.10.99 ಲಕ್ಷಗಳಾಗಿದೆ. ಬಿಎಸ್ 6 ಆವೃತ್ತಿಯ ಬೆಲೆ ಬಿಎಸ್ 4 ಆವೃತ್ತಿಗಿಂತ ರೂ.10,000ಗಳಷ್ಟು ಹೆಚ್ಚಾಗಿದೆ.

ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಎಂಜಿನ್ ಅಪ್‌ಡೇಟ್‌ನ ಹೊರತಾಗಿ, ಈ ಬೈಕಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಜೊತೆಗೆ ಯಾವುದೇ ಹೊಸ ಫೀಚರ್‌ಗಳನ್ನು ಅಳವಡಿಸಿಲ್ಲ. 2020ರ ವರ್ಸಿಸ್ 1000 ಬೈಕ್ ಅನ್ನು ಪರ್ಲ್ ಸ್ಟಾರ್‌ಡಸ್ಟ್ ವೈಟ್ / ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಹಾಗೂ ಕ್ಯಾಂಡಿ ಲೈಮ್ ಗ್ರೀನ್ / ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಎಂಬ ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಕವಾಸಕಿ ವರ್ಸಿಸ್ 1000 ಬಿಎಸ್ 6 ಬೈಕಿನಲ್ಲಿ 1,043 ಸಿಸಿಯ ಲಿಕ್ವಿಡ್-ಕೂಲ್ಡ್, ಇನ್-ಲೈನ್ ಫೋರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 118 ಬಿಹೆಚ್‌ಪಿ ಪವರ್ ಹಾಗೂ 7,500 ಆರ್‌ಪಿಎಂನಲ್ಲಿ 102 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ ಸ್ಲಿಪ್-ಅಸಿಸ್ಟ್ ಕ್ಲಚ್‌ ಹೊಂದಿರುವ ಆರು-ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಇದೇ ಎಂಜಿನ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ನಿಂಜಾ 1000 ಬಿಎಸ್ 6 ಬೈಕಿನಲ್ಲಿಯೂ ಅಳವಡಿಸುವ ಸಾಧ್ಯತೆಗಳಿವೆ. ಆದರೆ ವರ್ಸಿಸ್‌ ಬೈಕಿನಲ್ಲಿರುವ ಎಂಜಿನ್ ಅನ್ನು ಅದರ ಟೂರಿಂಗ್‌ಗೆ ತಕ್ಕಂತೆ ಟ್ಯೂನ್ ಮಾಡಲಾಗಿದೆ. ವರ್ಸಿಸ್ 1000 ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್‌‌ಗಳನ್ನು ಹೊಂದಿದೆ.

ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಇವುಗಳಲ್ಲಿ ಐಎಂಯು ಆಧಾರಿತ ಕವಾಸಕಿ ಕಾರ್ನರಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್ ಸಹ ಸೇರಿದೆ. ಇದರಿಂದಾಗಿ ಬೈಕ್ ಅನ್ನು ಕಾರ್ನರ್‌ಗಳಲ್ಲಿ ತೊಂದರೆಯಿಲ್ಲದೇ ಚಾಲನೆ ಮಾಡಬಹುದು. ಎಂಜಿನ್ ಪವರ್ ಆಕ್ಸೆಲರೇಷನ್ ಹೆಚ್ಚಿಸಿದರೂ ಸಹ ಸುಗಮ ಬ್ರೇಕಿಂಗ್‌ಗೆ ಅನುವು ಮಾಡಿಕೊಡುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಈ ಬೈಕ್ ಕವಾಸಕಿ ಟ್ರಾಕ್ಷನ್ ಕಂಟ್ರೋಲ್, ಕವಾಸಕಿ ಇಂಟೆಲಿಜೆಂಟ್ ಆಂಟಿ-ಲಾಕ್ ಬ್ರೇಕ್ ಹಾಗೂ ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್‌ಗಳನ್ನು ಹೊಂದಿದೆ. 21 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿರುವ ಈ ದೊಡ್ಡ ಗಾತ್ರದ ಬೈಕಿನ ತೂಕ 255 ಕೆ.ಜಿಗಳಾಗಿದೆ.

ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಈ ಬೈಕ್ 2,270 ಎಂಎಂ ಉದ್ದ, 895 ಎಂಎಂ ಅಗಲ, 1,400 ಎಂಎಂ ಎತ್ತರ ಹಾಗೂ 1,520 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಈ ಟೂರಿಂಗ್ ಬೈಕಿನ ಗ್ರೌಂಡ್ ಕ್ಲಿಯರೆನ್ಸ್ 150 ಎಂಎಂಗಳಾದರೆ ಸೀಟಿನ ಎತ್ತರ 840 ಎಂಎಂಗಳಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ವರ್ಸಿಸ್ 1000 ಬೈಕಿನಲ್ಲಿರುವ ಟ್ವಿನ್-ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮುಂಭಾಗದಲ್ಲಿರುವ ಫಾಸ್ಕಿಯಾಗೆ ಅಗ್ರೇಸಿವ್ ಲುಕ್ ನೀಡುತ್ತದೆ. ಲಾಂಗ್ ಡ್ರೈವ್‌ಗೆ ಅನುಕೂಲವಾಗುವಂತೆ ಸವಾರ ಹಾಗೂ ಹಿಂಬದಿ ಸವಾರನ ಸೀಟುಗಳನ್ನು ಅಗಲವಾಗಿ ಹಾಗೂ ಉದ್ದವಾಗಿ ನೀಡಲಾಗಿದೆ.

ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಈ ಬೈಕಿನಲ್ಲಿ ವಿಂಡ್-ಸ್ಕ್ರೀನ್, ಅನಲಾಗ್ ಟ್ಯಾಕೋಮೀಟರ್ ಹೊಂದಿರುವ ಸೆಮಿ-ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಹಾಗೂ ಇನ್ಸ್‌ಟ್ರೂಮೆಂಟ್ ಕನ್ಸೋಲ್ ಪಕ್ಕದಲ್ಲಿ ಡಿಸಿ ಚಾರ್ಜಿಂಗ್ ಸಾಕೆಟ್‌ ಸೇರಿದಂತೆ ಹಲವಾರು ಫೀಚರ್‌ಗಳನ್ನು ನೀಡಲಾಗಿದೆ. ಸಸ್ಪೆಂಷನ್‌ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 150 ಎಂಎಂ ಯುಎಸ್‌ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿ 152 ಎಂಎಂ ಮೊನೊ-ಶಾಕ್ ಸೆಟಪ್‌ಗಳನ್ನು ಅಳವಡಿಸಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸದ್ದಿಲ್ಲದೇ ವರ್ಸಿಸ್ 1000 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಕವಾಸಕಿ

ಈ ಎರಡೂ ಯೂನಿಟ್‌ಗಳು ರಿಬೌಂಡ್ ಡ್ಯಾಂಪಿಂಗ್ ಹಾಗೂ ಸ್ಪ್ರಿಂಗ್ ಪ್ರೀಲೋಡ್‌ಗಾಗಿ ಪೂರ್ತಿಯಾಗಿ ಹೊಂದಾಣಿಕೆಯಾಗುತ್ತವೆ. ಈ ಬೈಕಿನ ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 250 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

More from DriveSpark

Article Published On: Tuesday, May 19, 2020, 12:55 [IST]
English summary
Kawasaki launches Versys 1000 BS6 bike in Indian Market. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+