ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಮಕ್ಕಳನ್ನು ಕೂರಿಸಿ ಕರೆದೊಯ್ಯುವ ಪೋಷಕರೇ ಎಚ್ಚರ..!
ನಮ್ಮ ದೇಶದ ರಸ್ತೆಗಳಲ್ಲಿ ಜಗತ್ತಿನಲ್ಲಿ ಕಾಣದ ಚಿತ್ರ ವಿಚಿತ್ರವಾದ ಸಂಗತಿಗಳನ್ನು ಕಾಣಬಹುದು. ಸಂಚಾರ ಉಲ್ಲಂಘನೆಯಿಲ್ಲದ ರಸ್ತೆಗಳು ಕಾಣುವುದು ಅಪರೂಪ. ವಾಹನ ಚಾಲಕರು ನಿಯಮಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಇದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ಅಪಘಾತಗಳು ಹಾಗೂ ಸಾವುಗಳು ಹೊಸ ಸಂದಿಗ್ಧತೆಯನ್ನು ಸೃಷ್ಟಿಸುತ್ತಿವೆ. ಈ ಕಾರಣಕ್ಕೆ ಪ್ರತಿಯೊಂದು ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುತ್ತಿವೆ. ಈಗ ಕೇರಳ ರಾಜ್ಯ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವವರಿಗೆ ಕಡಿವಾಣ ಹಾಕಲಿದೆ.

ಮಕ್ಕಳನ್ನು ಅಪಘಾತಗಳಿಂದ ರಕ್ಷಿಸಲು ಅಲ್ಲಿನ ಗೃಹ ಇಲಾಖೆಯು ಹೊಸ ಆದೇಶ ಹೊರಡಿಸಿದೆ. ಇದರ ಪ್ರಕಾರ, ಮಕ್ಕಳು ಬೈಕುಗಳ ಪೆಟ್ರೋಲ್ ಟ್ಯಾಂಕ್ ಮೇಲೆ ಹಾಗೂ ಸ್ಕೂಟರ್‌ಗಳ ಮುಂಭಾಗದಲ್ಲಿ ಕುಳಿತುಕೊಳ್ಳುವುದು ಅಥವಾ ನಿಲ್ಲುವುದು ಶಿಕ್ಷಾರ್ಹ ಅಪರಾಧವಾಗಲಿದೆ.

ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಈ ರೀತಿಯಾಗಿ ಕರೆದೊಯ್ಯುವುದು ಅಸುರಕ್ಷಿತ ಮಾರ್ಗವಾಗಿದೆ. ಇವುಗಳು ಬಸ್ಸುಗಳಲ್ಲಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಮಕ್ಕಳನ್ನು ತುಂಬುವುದಕ್ಕಿಂತ ಹೆಚ್ಚು ಅಪಾಯಕರ ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ. ದ್ವಿಚಕ್ರ ವಾಹನದ ಮುಂಭಾಗದಲ್ಲಿ ಕುಳಿತಾಗ ಅಪಾಯ ಉಂಟಾಗುತ್ತದೆ.

ಮಕ್ಕಳನ್ನು ಬೈಕ್ ಪೆಟ್ರೋಲ್ ಟ್ಯಾಂಕ್ ಗಳ ಮೇಲೆ ಕೂರಿಸುವುದು ಹೆಚ್ಚು ಅಪಾಯವನ್ನುಂಟು ಮಾಡುತ್ತವೆ. ಸ್ಕೂಟರ್‌ನ ಮುಂಭಾಗವು ಸಹ ಅಪಾಯಕಾರಿ. ಇದರ ಜೊತೆಗೆ ಮಕ್ಕಳು ಈ ರೀತಿ ಕೂರುವುದರಿಂದ ವಾಹನಗಳನ್ನು ನಿಯಂತ್ರಿಸಲು ತೊಂದರೆಯಾಗುತ್ತದೆ.

ವಾಹನಗಳು ನಿಯಂತ್ರಣಕ್ಕೆ ಸಿಗದಿದ್ದರೆ ಮಕ್ಕಳ ಸಾವಿಗೆ ಕಾರಣವಾಗುತ್ತವೆ. ಇದರಿಂದ ಬೇರೆಯವರಿಗೂ ತೊಂದರೆಯುಂಟಾಗಲಿದೆ. ಇದನ್ನು ತಪ್ಪಿಸಲು ಕೇರಳ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ.

ಮಕ್ಕಳು ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಾಗ ಅಥವಾ ನಿಂತಾಗ ಹಲವು ಅಪಾಯಗಌ ಸಂಭವಿಸುತ್ತವೆ. ಇದಕ್ಕೆ ಕೆಲವು ವರ್ಷಗಳ ಹಿಂದೆ ಚೆನ್ನೈನ ಪೆರಂಬೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ಸುಮಾರು 5 ವರ್ಷದ ಬಾಲಕನೊಬ್ಬ ತನ್ನ ಹೆತ್ತವರೊಂದಿಗೆ ಊಟ ಮಾಡಲು ಅದೇ ಪ್ರದೇಶದಲ್ಲಿರುವ ಹೋಟೆಲ್‌ಗೆ ದ್ವಿಚಕ್ರ ವಾಹನದಲ್ಲಿ ಹೋಗಿದ್ದ.

ಊಟವಾದ ನಂತರ ತಂದೆ ಹಾಗೂ ತಾಯಿಯೊಂದಿಗೆ ಅದೇ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸಾಗುತ್ತಿದ್ದ. ಆ ಹುಡುಗ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ನಿಂತಿದ್ದ. ಬೈಕ್ ಪೆರಂಬೂರ್ ಸೇತುವೆಯ ಬಳಿ ಬಂದಾಗ ಅವನು ಇದ್ದಕ್ಕಿದ್ದಂತೆ ತಂದೆಯ ಕುತ್ತಿಗೆಯ ಮೇಲೆ ಬಿದ್ದನು. ವಾಹನವನ್ನು ನಿಲ್ಲಿಸಿದ ತಂದೆಗೆ ಏನಾಯಿತು ಎಂದು ತಿಳಿಯಲಿಲ್ಲ.

ಕೆಲ ಸಮಯದ ನಂತರ, ಅವರ ಮಗ ಥ್ರೋಬಿಂಗ್ ನೆಕ್ ಲೈನ್ ನಿಂದ ಬಳಲುತ್ತಿರುವುದು ಕಂಡು ಬಂದಿದೆ. ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದ್ದಾನೆ. ದ್ವಿಚಕ್ರ ವಾಹನಗಳ ಮುಂಭಾಗದಲ್ಲಿ ಮಕ್ಕಳನ್ನು ಕೂರಿಸಿದಾಗ ಇದೇ ರೀತಿಯ ಘಟನೆಗಳು ಸಂಭವಿಸುತ್ತವೆ.

ಇದರ ಜೊತೆಗೆ ಕೆಲ ಸಂದರ್ಭಗಳಲ್ಲಿ ಮಕ್ಕಳನ್ನು ಮುಂಭಾಗದಲ್ಲಿ ಕೂರಿಸಿಕೊಂಡು ಪ್ರಯಾಣಿಸುವಾಗ ಬ್ಯಾಲೆನ್ಸ್ ಸಿಗದೇ ಕೆಳಗೆ ಬಿದ್ದು ಗಾಯಗೊಳ್ಳುವುದುಂಟು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಕೇರಳ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದೆ.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications








