ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ಕಂಪನಿಯು ತನ್ನ ಜನಪ್ರಿಯ ಬಿ‍ಎಸ್-6 ಮಾದರಿಗಳಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಮಹೀಂದ್ರಾ ಕಂಪನಿ ಮೇ ತಿಂಗಳಾದ್ಯಂತ ತನ್ನ ಜನಪ್ರಿಯ ಮಾದರಿಗಳಿಗೆ ಬರೊಬ್ಬರಿ ರೂ.3.05 ಲಕ್ಷಗಳವರೆಗೆ ಭರ್ಜರಿ ರಿಯಾಯಿತಿಯನ್ನು ನೀಡಿದೆ.

ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಕಂಪನಿಯು ತಮ್ಮ ಗ್ರಾಹಕರನ್ನು ಸೆಳೆಯಲು ಈ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿಯಲ್ಲಿ ಮಾರಾಜೋ, ಟಿಯುವಿ 300 ಮತ್ತು ಟಿಯುವಿ 300 ಪ್ಲಸ್‌ ಎಸ್‍ಯುವಿಗಳನ್ನು ಒಳಗೊಂಡಿಲ್ಲ. ಮಹೀಂದ್ರಾ ಕಂಪನಿಯು ಬಿಎಸ್-6 ಆವೃತ್ತಿಯ ಅಲ್ಟುರಾಸ್ ಜಿ4, ಕೆಯುವಿ 100 ಎನ್‌ಎಕ್ಸ್‌ಟಿ, ಎಕ್ಸ್‌ಯುವಿ 300, ಮಹೀಂದ್ರಾ ಎಕ್ಸ್‌ಯುವಿ 500, ಸ್ಕಾರ್ಪಿಯೋ ಮತ್ತು ಬೊಲೆರೊ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗಿದೆ. ಯಾವುದೆಲ್ಲಾ ಮಾದರಿಗಳ ಮೇಲೆ ಎಷ್ಟು ರಿಯಾಯಿತಿಯನ್ನು ಘೋಷಿಸಿದೆ ಎಂಬುದನ್ನು ಇಲ್ಲಿ ನೋಡೋಣ.

ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಅಲ್ಟುರಾಸ್ ಜಿ4

ಮಹೀಂದ್ರಾ ಕಂಪನಿಯು ತನ್ನ ಬಿಎಸ್-6 ಅಲ್ಟುರಾಸ್ ಜಿ4 ಎಸ್‍ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.28.69 ಲಕ್ಷಗಳಾಗಿದೆ. ಹಿಂದಿನ ಬಿಎಸ್ 4 ಮಾದರಿಗೆ ಹೋಲಿಸಿದರೆ ಬಿಡುಗಡೆಗೊಳಿಸುವಾಗ ಸರಿಸುಮಾರು ರೂ.1 ಲಕ್ಷದಷ್ಟು ಹೆಚ್ಚಿಸಲಾಗಿತ್ತು.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಮಾದರಿಗೆ ಒಟ್ಟು ರೂ.3.05 ಲಕ್ಷ ರೂ.ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ರೂ,2.40 ಲಕ್ಷಗಳವರೆಗೆ ನಗದು ರಿಯಾಯಿತಿ ಮತ್ತು ರೂ.50,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿಯಲ್ಲಿ 2.2 ಲೀಟರ್ ಇ-ಎಕ್ಸ್‌ಡಿ 220 ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಕೆಯುವಿ 100 ಎನ್‌ಎಕ್ಸ್‌ಟಿ

ಮಹೀಂದ್ರಾ ಕಂಪನಿಯು ತನ್ನ ಬಿಎಸ್-6 ಕೆಯುವಿ 100 ಎನ್‌ಎಕ್ಸ್‌ಟಿ ಮೈಕ್ರೊ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮಾದರಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.54 ಲಕ್ಷಗಳಾಗಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಕೆಯುವಿ 100 ಎನ್‌ಎಕ್ಸ್‌ಟಿ ಮಾದರಿಗೆ ನಗದು ಮತ್ತು ವಿನವಿಯ ರಿಯಾಯಿತಿ ಸೇರಿ ಒಟ್ಟು ರೂ.70,800 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಹೊಸ ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮೈಕ್ರೊ ಎಸ್‍ಯುವಿಯಲ್ಲಿ ಆರು ಸೀಟ್‍ ಗಳ ವ್ಯವಸ್ಥೆಯನ್ನು ಒದಗಿಸಲಾಗಿದೆ. ಕಂಪನಿಯು ಕೆಯುವಿ 100 ಕಾರಿನ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ.

ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಎಕ್ಸ್‌ಯುವಿ 300

ಹೂಸ ಎಕ್ಸ್‌ಯುವಿ 300 ಎಸ್‍ಯುವಿಗೆ ಭರ್ಜರಿ ರಿಯಾಯಿತಿಯನ್ನು ಮಹೀಂದ್ರಾ ಕಂಪನಿಯು ಘೋಷಿಸಿದೆ. ಈ ಹೊಸ ಎಕ್ಸ್‌ಯುವಿ 300 ಎಸ್‍ಯುವಿಯ ಆಯ್ದ ರೂಪಾಂತರಗಳ ಮೇಲೆ ರೂ.69,500 ಗಳವರೆಗೆ ರಿಯಾಯಿತಿಯನ್ನು ನೀಡಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಎಕ್ಸ್‌ಯುವಿ 500

ಹೊಸ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯನ್ನು ಬಿಡುಗಡೆಗೊಳಿಸುವಾಗ ಹಿಂದಿನ ಮಾದರಿಗಿಂತ ರೂ.32,000ಗಳವರೆಗೆ ಹೆಚ್ಚಿಸಿದ್ದರು. ಈ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 13.20 ಗಳಾಗಿದೆ. ಇದೀಗ ಈ ಎಸ್‍ಯುವಿಯ ಮೇಲೆ ಒಟ್ಟು ರೂ.49,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಸ್ಕಾರ್ಪಿಯೋ

ಹೊಸ ಸ್ಕಾರ್ಪಿಯೋ ಎಸ್‍ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.12.40 ಲಕ್ಷಗಳಾಗಿದೆ. ಇದೀಗ ಈ ಹೊಸ ಸ್ಕಾರ್ಪಿಯೋ ಎಸ್‍ಯುವಿಯ ಮೇಲೆ ರೂ.35,000ಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು.

ಹೊಸ ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಬೊಲೆರೊ

ಮಹೀಂದ್ರಾ ಕಂಪನಿಯು ಬಿಎಸ್-6 ಬೊಲೆರೊ ಎಸ್‍ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹೊಸ ಬೊಲೆರೊ ಎಸ್‍ಯುವಿಗಾಗಿ ಮಹೀಂದ್ರಾ ಕಂಪನಿಯು ಬುಕ್ಕಿಂಗ್ ಅನ್ನು ಕೂಡ ಆರಂಭಿಸಿದೆ. ಹೊಸ ಬೊಲೆರೊ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.98 ಲಕ್ಷಗಳಾಗಿದೆ. ಇದೀಗ ಈ ಎಸ್‍ಯುವಿಯ ಮೇಲೆ ರೂ.14,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ.

More from DriveSpark

Article Published On: Wednesday, May 13, 2020, 13:01 [IST]
English summary
Benefits up to Rs 3.05 lakh on BS6 Mahindra Alturas, XUV500, XUV300, Scorpio. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+