Just In
Don't Miss!
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಎಡಿಷನ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಹೊಸ 2021ರ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕನ್ನು ಅನಾವರಣಗೊಳಿಸಿದೆ. ಈ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕನ್ನು ಲಿಮಿಟೆಡ್ ಎಡಿಷನ್ ಗಳಾಗಿ ಬಿಡುಗಡೆಗೊಳಿಸಲಿವೆ.

ಈ ಹೊಸ ಡಯಾವೆಲ್ 1260 ಲ್ಯಾಂಬೊರ್ಗಿನಿ ಪವರ್ ಕ್ರೂಸರ್ ವಿಶ್ವಾದ್ಯಂತ ಕೇವಲ 630 ಯುನಿಟ್ ಗಳಿಗೆ ಸೀಮಿತವಾಗಿರುತ್ತದೆ. ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್ ಇಟಾಲಿಯನ್ ಸೂಪರ್ ಕಾರ್ ತಯಾರಕರ ಸಿಯಾನ್ ಎಫ್‌ಕೆಪಿ 37 ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಇನ್ನು ಈ ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್ ಜಿಯಾ ಗ್ರೀನ್' ಎಂದು ಕರೆಯಲ್ಪಡುವ ಬಣ್ಣವನ್ನು ಒಳಗೊಂಡಿದೆ. ಈ ಹೊಸ ಡುಕಾಟಿ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್ ರೇಡಿಯೇಟರ್ ಕವರ್ ಮತ್ತು ಏರ್ ಇಂಟೆಕ್ಸ್, ಸೈಲೆನ್ಸರ್ ಕವರ್, ಸ್ಪಾಯ್ಲರ್, ಸೆಂಟ್ರಲ್ ಟ್ಯಾಂಕ್ ಕವರ್, ಸೀಟ್ ಕವರ್, ಫ್ರಂಟ್ ಮತ್ತು ರಿಯರ್ ಮಡ್‌ಗಾರ್ಡ್ಸ್, ಡ್ಯಾಶ್‌ಬೋರ್ಡ್ ಕವರ್ ಮತ್ತು ಹೆಡ್‌ಲೈಟ್ ಫ್ರೇಮ್ ಅನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಡುಕಾಟಿ ಲಿಮಿಟೆಡ್ ಎಡಿಷನ್ ನಲ್ಲಿ ಇತರ ಬದಲಾವಣೆಗಳೆಂದರೆ. ಲ್ಯಾಂಬೊರ್ಗಿನಿ ಬ್ಯಾಡ್ಜಿಂಗ್, ರೆಡ್-ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಅಲಾಯ್ ವ್ಹೀಲ್ ಗಳು ಗೋಲ್ಡನ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಬೈಕಿಗೆ ಹೋಲಿಸಿದರೆ, ಈ ಲಿಮಿಟೆಡ್ ಎಡಿಷನ್ 2 ಕೆಜಿ ಹೆಚ್ಚು ತೂಕವನ್ನು ಹೊಂದಿದೆ.

ಈ ಬದಲಾವಣೆಗಳ ಹೊರತಾಗಿ, ಉಳಿದ ಫೀಚರ್ ಗಳನ್ನು ಡಯಾವೆಲ್ 1260 ಎಸ್ ರೂಪಾಂತರದಿಂದ ಎರವಲು ಪಡೆಯಲಾಗಿದೆ. ಇದರಲ್ಲಿ ಲಿಕ್ವಿಡ್-ಕೂಲ್ಡ್, ಟೆಸ್ಟಾಸ್ಟ್ರೆಟಾ ಎಲ್-ಟ್ವಿನ್, 1,262 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಎಂಜಿನ್ 160 ಬಿಹೆಚ್‍ಪಿ ಪವರ್ ಮತ್ತು 129 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಕ್ಲಚ್ ಅಸಿಸ್ಟ್ ನೊಂದಿಗೆ ಬರುತ್ತದೆ. ಇದು ಡೆಸ್ಮೋಡ್ರೊಮಿಕ್ ವಾಲ್ವ್ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೊಸ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್ ನೇರವಾದ ಹ್ಯಾಂಡಲ್‌ಬಾರ್, ಸಿಂಗಲ್ ಸೈಡ್ ಸ್ವಿಂಗಾರ್ಮ್, ಸ್ಕಲಪಟಡ್ ಫ್ಯೂಯಲ್ ಟ್ಯಾಂಕ್, ಹಿಂಭಾಗದ ಸೀಟಿನ ಕೆಳಗೆ ಉದ್ದವಾದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ಅದರ ಸುತ್ತಲು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ವಿಶಿಷ್ಟವಾದ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್ ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಈ ಹೊಸ ಬೈಕಿನ ಎಲೆಕ್ಟ್ರಾನಿಕ್ ಪ್ಯಾಕೇಜ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಬಾಷ್ 6-ಆಕ್ಸಿಸ್ ಇಂಟರ್ನಲ್(6 ಡಿ ಐಎಂಯು), ಬಾಷ್ ಕಾರ್ನರಿಂಗ್ ಎಬಿಎಸ್ ಇವಿಒ, ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್(ಡಿಟಿಸಿ) ಇವಿಒ, ಡುಕಾಟಿ ವೀಲೀ ಕಂಟ್ರೋಲ್ (ಡಿಡಬ್ಲ್ಯೂಸಿ) ಇವಿಒ, ಡುಕಾಟಿ ಪವರ್ ಲಾಂಚ್ (ಡಿಪಿಎಲ್) ಇವಿಒ, ಕ್ರೂಸ್ ಕಂಟ್ರೋಲ್ , ಡುಕಾಟಿ ಕ್ವಿಕ್ ಶಿಫ್ಟ್ ಅಪ್ & ಡೌನ್ (ಡಿಕ್ಯೂಎಸ್) ಇವಿಒ ಮತ್ತು ಡುಕಾಟಿ ಮಲ್ಟಿಮೀಡಿಯಾ ಸಿಸ್ಟಮ್ (ಡಿಎಂಎಸ್). ಅನ್ನು ಒಳಗೊಂಡಿದೆ.

ಹೊಸ ಡುಕಾಟಿ ಡಯಾವೆಲ್ 1260 ಲ್ಯಾಂಬೊರ್ಗಿನಿ ಬೈಕ್ ಹೈ ಪರ್ಫಾಮೆನ್ಸ್, ವಿನೂತನ ಫೀಚರ್ ಗಳು ಮತ್ತು ಅತ್ಯಾಧುನಿಕ ಎಲೆಕ್ಟ್ರಿಕ್ ಪ್ಯಾಕೇಜ್ ಗಳನ್ನು ಒಳಗೊಂಡಿರುವ ಅಪರೂಪದ ಮಾದರಿಯಾಗಿದೆ. ಡುಕಾಟಿ ಮತ್ತು ಲ್ಯಾಂಬೊರ್ಗಿನಿ ಎರಡು ಇಟಲಿಯ ದಿಗ್ಗಜ ವಾಹನ ತಯಾರಕ ಕಂಪನಿಗಳಾಗಿವೆ.